ವಿದುಷಿ, ಡಾ. ಶ್ರೀಲತಾರವರ ಸಂಗೀತ, ಮುಂಬೈನಗರದಲ್ಲಿ !

ವಿದುಷಿ, ಡಾ. ಶ್ರೀಲತಾರವರ ಸಂಗೀತ, ಮುಂಬೈನಗರದಲ್ಲಿ !

ಬರಹ

 

೧೯೭೨-೭೩ ರಲ್ಲಿ ಮದ್ರಾಸ್ ನಲ್ಲಿ ನಡೆದ ಸಂಗೀತ ಅಕಾಡೆಮಿಯಲ್ಲಿ ಲಾತರವರು ಸ್ಪರ್ಧಿಸಿದ್ದ ಎಲ್ಲ ಸ್ಪರ್ಧೆಗಳಲ್ಲೂ ವಿಜಯ ಗಳಿಸಿ, ತೀರ್ಪುಗಾರರಿಂದ ತಂಬೂರಿಯನ್ನು ಬಹುಮಾನವಾಗಿ ಗಿಟ್ಟಿಸಿದ್ದರು. ತೀರ್ಪುಗಾರರು ಅಂತಿತಹ ಕಲಾಕಾರರಲ್ಲ. ಗಾನಕೋಕಿಲೆ, ಎಮ್. ಎಸ್, ಎಮ್. ಡಿ ರಾಮನಾಥನ್, ಹಾಗೂ ಡಿ.ಕೆ. ಪಟ್ಟಮ್ಮಾಳ ಮತ್ತು ನಾದಸೂರಿಯವರು !
ಅಭೋಗಿರಾಗದ, ಎನ್. ಎಸ್. ರಾಮಚಂದ್ರನ್ ರವರ ಕೃತಿ,
ದೀಕ್ಷಿತರ ಕೃತಿ, ಅಖಿ[ದ್ವಿಜಾವಂತಿ ರಾಗ]
ಅಭೇರಿರಾಗದ, ನಂದಗೋಪಾಲಾ
ಪುರುಂದರ ನೀನೇ

 

ಕರ್ನಾಟಕದ ಹಿರಿಯ ವಿದುಷಿ, ಡಾ. ಆರ್. ಎನ್.  ಶ್ರೀ ಲತಾರವರು ಇಂದಿನ ದಿನಗಳಲ್ಲಿ ಮುಂಬೈನಗರದ ಅತಿಹಿರಿಯ ಕನ್ನಡ ಪ್ರಚಾರ ಸಂಸ್ಥೆಗಳಲ್ಲೊಂದಾದ, ’ಮೈಸೂರ್ ಅಸೋಸಿಯೇಷನ್ ’ ನಲ್ಲಿ, ಕಳೆದ, ಡಿಸೆಂಬರ್ ೧೪ ರಿಂದ, ’ಸಂಗೀತದ ಕಾರ್ಯಾಗಾರ ’ವನ್ನು ಹಮ್ಮಿಕೊಂಡು ಅನೇಕ ಯುವಪ್ರತಿಭೆಗಳನ್ನು ಮುಂದೆತರುವಲ್ಲಿ ಅತ್ಯುತ್ತಮ ಕೆಲಸವನ್ನು ಮಾಡಿದ್ದಾರೆ. ಶ್ರೀಲತಾರವರು, ’ವಿದ್ವಾನ್ ಆರ್. ಕೆ. ನಾರಾಯಣಸ್ವಾಮಿ ’ಯವರ ಪುತ್ರಿ. ಆಕೆಯ ಮೊದಲಗುರು, ಅವರ ತೀರ್ಥರೂಪುರವರೇ ! " ಕರ್ನಾಟಕ ಸಂಗೀತದಲ್ಲಿರುವ ಮನೋಧರ್ಮದ ಒಂದು ಮುಖ," ಎಂಬ ವಿಷಯವನ್ನಾರಿಸಿಕೊಂಡು ತಮ್ಮ ಪಿ. ಎಚ್. ಡಿ. ಅಧ್ಯಯನ ಮಾಡಿದ್ದಾರೆ. ’ಶಾಸ್ತ್ರೀಯಸಂಗೀತದಲ್ಲಿ ಡಾಕ್ಟರೇಟ್ ” ಗಳಿಸಿದ ಪ್ರಥಮ ಮಹಿಳೆಯೆಂಬ ಹೆಗ್ಗಳಿಕೆಯನ್ನು ಗಳಿಸಿದ್ದಾರೆ.

೧೯೭೨-೭೩ ರಲ್ಲಿ ಮದ್ರಾಸ್ ನಲ್ಲಿ ನಡೆದ ಸಂಗೀತ ಅಕಾಡೆಮಿಯಲ್ಲಿ ಲಾತರವರು ಸ್ಪರ್ಧಿಸಿದ್ದ ಎಲ್ಲ ಸ್ಪರ್ಧೆಗಳಲ್ಲೂ ವಿಜಯ ಗಳಿಸಿ, ತೀರ್ಪುಗಾರರಿಂದ ತಂಬೂರಿಯನ್ನು ಬಹುಮಾನವಾಗಿ ಗಿಟ್ಟಿಸಿದ್ದರು. ತೀರ್ಪುಗಾರರು ಅಂತಿತಹ ಕಲಾಕಾರರಲ್ಲ. ಗಾನಕೋಕಿಲೆ, ಎಮ್. ಎಸ್ ; ಎಮ್. ಡಿ ರಾಮನಾಥನ್, ಹಾಗೂ ಡಿ.ಕೆ. ಪಟ್ಟಮ್ಮಾಳ್, ಮತ್ತು ನಾದಸೂರಿಯವರು !

ಶ್ರೀಲತಾರವರು, ಶನಿವಾರ,  ಡಿಸೆಂಬರ್, ೧೯ ರಂದು, ಮುಂಬೈನ ಮತ್ತೊಂದು ಹಿರಿಯ ಕನ್ನಡ ಸಂಸ್ಥೆ, ’ಕರ್ನಾಟಕ ಸಂಘದಲ್ಲಿ, ತಮ್ಮ ವಿದ್ವತ್ಪೂರ್ಣಶಾಸ್ತ್ರೀಯ ಸಂಗೀತದ ಸುಧೆಯನ್ನು ಆಹ್ವಾನಿತ ಸಂಗೀತಪ್ರೇಮಿಗಳಿಗೆ ಉಣಬಡಿಸಿದರು. ಮೊದಲು, ಸಂಘದ ಉಪಾಧ್ಯಕ್ಷರಾಗಿರುವ, ಶ್ರಿ. ಭರತ್ ಕುಮಾರ್ ಪೊಲಿಪುರವರು, ಸಭೆಗೆ ಲತಾರವರನ್ನು ಪರಿಚಯಿಸಿ, ಪ್ರಸ್ತವಿಕವಾಗಿ ಎಲ್ಲರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

ಸುಮಾರು ೩ ಗಂಟೆಗಳಕಾಲ, ಡಾ. ಲತಾರವರು, ತಮ್ಮ ಮಂತ್ರಮುಘ್ದ ಸಂಗೀತದಿಂದ ಎಲ್ಲರ ಮನತಣಿಸಿದರು ! ಪ್ರಾರಂಭದಲ್ಲಿ, ’ಶ್ರೀ ಮಹಾಗಣಪತೇ, ”  ನಂತರ, ’ಅಖಿಲಾಂಡೇಶ್ವರಿ ಪಾಹಿಮಾಂ,” ನಂತರ, ’ಹರಿ ನೀನೇ ಬಲ್ಲಿದನೋ,” ಮುಂತಾದ ಸುಂದರ ಕೃತಿಗಳನ್ನು ಅತ್ಯಂತ ಸುಂದರವಾಗಿ ಹಾಡಿದ ಅವರು, ಆಕಾಶವಾಣಿಯ ಎ-ಗ್ರೇಡ್ ಕಲಾವಿದೆ. ಪುರುಂದರ ದಾಸವರೇಣ್ಯರ ಕೃತಿಗಳು ಅದ್ಭುತವಾಗಿ ಮೂಡಿಬಂದವು !

ಭರತ್ ಕುಮಾರ ಪೊಲಿಪುರವರ ಪ್ರಾಸ್ತಾವಿಕ ಸ್ವಾಗತ ಭಾಷಣ....

ಪೊಲಿಪು, ’ಡಾ. ಶ್ರೀಲತಾಮತ್ತು ಸಂಗಡಿಗರನ್ನು” ಪರಿಚಯಿಸುತ್ತಿದ್ದಾರೆ.

ಮುಂಬೈನ ಜನಪ್ರಿಯ ಸಂಗೀತ ವಿಮರ್ಶಾಲೇಖಕಿ, ಸಮರ್ಥ ಅಂಕಣಕಾರ್ತಿ, ವಿದುಷಿ, ಶ್ರೀಮತಿ. ಶ್ಯಾಮಲಾ ಪ್ರಕಾಶ್ ಡಾ. ಲತಾರವರ ಪರಮಪ್ರಿಯೆ ! ಕರ್ನಾಟಕ ಸಂಘದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ..ಕರ್ನಾಟಕ ಸಂಘದ ಮುಖ ಪತ್ರಿಕೆಯಾದ, "ಸ್ನೇಹಸಂಬಂಧ," ದಲ್ಲಿ ಅವರು ಸುಮಾರು ೧ ವರ್ಷಕಿಂತಾ ಹೆಚ್ಚು ಸಮಯದಿಂದ, " ನಾದೋಪಾಸನ" ವೆಂಬ ಅತ್ಯಂತ ಜನಪ್ರಿಯ, ಹಾಗೂ ವಿದ್ವತ್ಪೂರ್ಣ ಅಂಕಣವನ್ನು ಬರೆದುಕೊಂಡು ಬಂದಿದ್ದಾರೆ. ಡಾ. ಶ್ರೀಲತಾರವರ ಬಗ್ಗೆಯೂ ಲೇಖನ ಪ್ರಕಟವಾಗಿತ್ತು. ಶ್ಯಾಮಲಾರವರನ್ನು ಎಲ್ಲರೂ ನೆನೆಸಿಕೊಳ್ಳುವುದು, ಅವರು ಬರೆದ, ’ಗಂಗೂಬಾಯಿ ಹಾನಗಲ್’ ರವರ ವಿಚಾರವಾಗಿ ಬರೆದ, ಸ್ಮರಣಲೇಖನಕ್ಕೆ. ಮತ್ತೆ, ಅವರ ಮತ್ತೊಂದು ಮಾಹಿತಿಪೂರ್ಣ, ಲೇಖನ, ’ಜನಾಬ್, ಅಬ್ದುಲ್ ಹಲೀಂ ಜಾಫರ್ ಖಾ", ರವರದು !

’ಶ್ಯಾಮಲಾ,’ ಅತ್ಯಂತ ಜನಪ್ರಿಯ ಭಾಷಣಕರ್ತೆ. ಮೇರುಗಾಯಕ, ಅಶ್ವಥ್ ಮುಂಬೈನಲ್ಲಿ ಹಾಡಿದಾಗ, ಶ್ಯಾಮಲಾರವರು, ನಿರ್ವಹಿಸಿದ, ಕಾರ್ಯಕ್ರಮ ಪ್ರಸ್ತುತಿಯ-ಕಾರ್ಯ, ಮುಂಬೈನ ಸಂಗೀತ-ರಸಿಕರನ್ನು ಅತ್ಯಾಕರ್ಷಿಸಿತು.....  

ರವಿವಾರ, ಡಿಸೆಂಬರ್, ೨೦ ರಂದು, ’ಮೈಸೂರ್ ಅಸೋಸಿಯೇಷನ್ ’ ನಲ್ಲಿ ಡಾ. ಶ್ರೀಲತಾರವರ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಂಗೀತಾಸಕ್ತರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ’ಅಸೋಸಿಯೇಷನ್ ನ ಪದಾಧಿಕಾರಿಗಳು,’ ಎಲ್ಲರನ್ನೂ ಕೇಳಿಕೊಂಡಿದ್ದಾರೆ.

-ಚಿತ್ರ ಮತ್ತು ವಿವರಣೆ, ವೆಂಕಟೇಶ್