ವಿದೇಶದಲ್ಲಿಯ ಕೆಲಸ : ಬಂದು ಹೋಗುವುದಕ್ಕೆ ಮಾತ್ರ ಸರಿ ಹೀಗೆ
ಬರಹ
ಬಂದು ಹೋಗುವುದಕ್ಕೆ ಮಾತ್ರ ಸರಿ ಹೀಗೆ
----------------------------------
ವಿದೇಶದಲ್ಲಿಯ ಕೆಲಸ ಹಣದ ಕೊರತೆಯ ನೀಗಿಸಿ
ಕೆಲಕಾಲ ಕನಸಿನ ಉಲ್ಲಾಸದಿ ನಮ್ಮ ಮೆರೆಸಿ
ಹುಟ್ಟೂರ ಬಂಧು ಬಳಗದ ನೆನಪುಗಳಲ್ಲಿ ಅಲೆಸಿ
ಕೆದಕುತಿದೆ ಮನಸ್ಸಿನ ಶಾಂತಿಯ ಸತತ ದಾಳಿ ನಡೆಸಿ
ತಾಯ್ತಂದೆ ತಾಯ್ನಾಡು ಗೆಳೆಯರು ಬಲುದೂರ
ಎಂದು ಸೇರುವುದೋ ಈ ಜೀವ ಚೆಲುವಾದ ನಮ್ಮೂರ
ವೈಶಾರಾಮ ಜೀವನವಿದ್ದರೂ ಏಕೋ ಮನಸ್ಸು ಭಾರ
ಸಹಿಸದು ಮನವು ಏಕಾಂಗಿಯಾಗಿ ಅನುಭವಿಸಲು ಈ ಜೀವನಸಾರ..
ಮನದಲ್ಲಿತ್ತು ಒಂದೇ ಒಂದು ಸಣ್ಣ ಬಯಕೆ
ವಿದೇಶ ನೋಡಿ ಸುತ್ತುವ ಸಣ್ಣ ಹರಕೆ
ಹಣಗಳಿಸುವ ಉದ್ದೇಶವಿಲ್ಲ ನನಗೆ
ಹೋದ್ರೆ ಸಾಕು ಮಾರಾಯ ಬೇಗ ನಮ್ಮೂರ್ಗೆ
ಮತ್ತೆ ಬರುವ ಯೋಚನೆ ಇದೆ ವಿದೇಶಕ್ಕೆ
ಆದ್ರೆ ಅದು ಅನಿವಾರ್ಯವಾದರೆ ಮಾತ್ರ ಓಕೆ
ಏನೇ ಹೇಳಿ ಇಲ್ಲಿನ ಸೌಕರ್ಯಗಳ ಬಗ್ಗೆ
ಬಂದು ಹೋಗುವುದಕ್ಕೆ ಮಾತ್ರ ಸರಿ ಹೀಗೆ
ರವಿಕುಮಾರ ವೈ.ಎಂ