ವಿದ್ಯಾರ್ಥಿಧರ್ಮ

ವಿದ್ಯಾರ್ಥಿಧರ್ಮ

ಅಭಿವಾದನಶೀಲಸ್ಯ ನಿತ್ಯಂ ವೃದ್ಧೋಪಸೇವಿನ: ಚತ್ವಾರಿ ತಸ್ಯ ವರ್ಧಂತೇ ಆಯುರ್ವಿದ್ಯಾಯಶೋಬಲಮ್||೧||
 
ವಿನಯ ಗೌರವದಿಂದ ಹಿರಿಯರ ಸೇವೆ ಮಾಡುವವನಿಗೆ ಆಯುಸ್ಸು ವಿದ್ಯೆ ಯಶಸ್ಸು ಮತ್ತು ಬಲ ಈ ನಾಲ್ಕು ವರ್ಧಿಸುತ್ತವೆ.
 
ಯಥಾ ಖನನ್ ಖನಿತ್ರೇಣ ನರೋ ವಾರ್ಯಧಿಗಚ್ಛತಿ ತಥಾ ಗುರುಗತಾಂ ವಿದ್ಯಾಂ ಶುಶ್ರೂಷುರಧಿಗಚ್ಛತಿ||೨||
 
ಗುದ್ದಲಿಯಿಂದ ಸತತವಾಗಿ ತೋಡಿದಾಗ ನೀರು ಸಿಗುವಂತೆ ಗುರುವಿನ ನಿತ್ಯ ಸೇವೆಯಿಂದ ಗುರುವಿನಲ್ಲಿರುವ ವಿದ್ಯೆಯನ್ನು ಮನುಷ್ಯನು ಪಡೆಯುತ್ತಾನೆ.
 
ವಿತ್ತಂ ಬಂಧುರ್ವಯ: ಕರ್ಮ ವಿದ್ಯಾ ಭವತಿ ಪಂಚಮೀ ಏತಾನಿ ಮಾನ್ಯಸ್ಥಾನಾನಿ ಗರೀಯೋ ಯದ್ಯದುತ್ತರಮ್||೩||
 
ಹಣ, ಬಂಧು, ವಯಸ್ಸು, ಕರ್ಮ, ವಿದ್ಯೆ ಇವೈದು ಕ್ರಮವಾಗಿ ಒಂದಕ್ಕಿಂತ ಒಂದು ಹೆಚ್ಚಿನವು. ಅಂದರೆ ಹಣ, ಹಣಕ್ಕಿಂತ ಬಂಧು, ಬಂಧುವಿಗಿಂತ ವಯಸ್ಸು, ವಯಸ್ಸಿಗಿಂತ ಕರ್ಮ (ಕೆಲಸ), ಕೆಲಸಕ್ಕಿಂತ ವಿದ್ಯೆ ಉತ್ತಮವಾದುವುವು.)
 
ಯಂ ಮಾತಾಪಿತರೌ ಕ್ಲೇಶಂ ಸಹೇತೇ ಸಂಭವೇ ನೃಣಾಂ ನ ತಸ್ಯ ನಿಷ್ಕೃತಿ: ಶಕ್ಯಾ ಕರ್ತುಂ ವರ್ಷಶತೈರಪಿ||೪||
 
ಮನುಷ್ಯನ ಹುಟ್ಟಿನ ಸಂದರ್ಭದಲ್ಲಿ ತಾಯಿ ತಂದೆಗಳು ಸಹಿಸುವ ಕಷ್ಟದ ಋಣವನ್ನು ನೂರು ವರ್ಷವಾದರೂ ತೀರಿಸಲಾಗದು.
 
ತಯೋರ್ನಿತ್ಯಂ ಪ್ರಿಯಂ ಕುರ್ಯಾದಾಚಾರ್ಯಸ್ಯ ಚ ಸರ್ವದಾ ತೇಷ್ವೇವ ತ್ರಿಷು ತುಷ್ಟೇಷು ತಪ: ಸರ್ವಂ ಸಮಾಪ್ಯತೇ||೫||
 
ಹಾಗಾಗಿ ತಾಯಿ ತಂದೆ ಹಾಗೂ ಗುರುಗಳಿಗೆ ಸಂತೋಷವನ್ನುಂಟುಮಾಡಬೇಕು. ಈ ಮೂವರೂ ಸಂತುಷ್ಟರಾದರೆ ತಪಸ್ಸೆಲ್ಲ ಫಲಿಸುತ್ತವೆ. ನಮ್ಮ ಪ್ರಯತ್ನಗಳೆಲ್ಲ ಫಲಪ್ರದವಾಗುತ್ತವೆ.
 

Comments