ವಿದ್ಯೆಯಿದ್ದರೇನು ಫಲ..?
ಕವನ
ಪಡೆದಿರುವ ಶಿಕ್ಷಣದ ಮಹತ್ವ ಅರಿವಿಗಿರಲಿ
ಕೀಳಿರಿಮೆ ಕುನ್ನಿಗಳ ಮನವು ಬದಲಾಗಲಿ;
ಮಡಿಕೆ ಮುಟ್ಟಿದ ಮಾತ್ರಕ್ಕೇಕೆ ಸಾವಿನ ಶಿಕ್ಷೆ?
ಇದೆಯೋ..? ಅಮೃತ ಮಹೋತ್ಸವದ ರಕ್ಷೆ ||೧||
ಮೀಸಲಾತಿಗೆ ಕೊಂಕು ನುಡಿಯುವ ಮುಗ್ಧರೆ
ಎಲುಬಿಲ್ಲದ ನಾಲಿಗೆಯನ್ನೊಮ್ಮೆ ತಿರುವಿರಿ;
ಇದಾಗಿದೆ ಭವ್ಯ ಭಾರತದ ಸ್ವಾತಂತ್ರ್ಯ ವಿಚಾರ
ಕಪ್ಪಾಗಿದೆ ಅಲ್ಲಲ್ಲಿ ಶಾಂತಿ ಪಾರಿವಾಳಗಳ ಗರಿ ||೨||
ಅನಕ್ಷರಸ್ಥ ಇದ್ದರೆ ತಿಳುವಳಿಕೆ ಇಲ್ಲವೆನ್ನುವುದು
ಅಕ್ಷರ ತಿದ್ದುವವರೆ ಜಾತಿ-ಮತಕೆ ಬಿದ್ದಿರುವುದು;
ಆದರೂ ಹೇಳುವೆವು ನಾವೆಲ್ಲ ಒಂದೇ ಎಂದು
ಬದಲಾಗಿ ನನ್ನ ಜನಗಳೇ ತಡೆಯಲು ಮುಂದು ||೩||
ಏರದಾ ಗುಡಿ ಕಟ್ಟೆಗೆ, ಮುಟ್ಟದ ಊರ ನಲ್ಲಿಗೆ
ಸಿಗಲಿಲ್ಲ ಸ್ವಾತಂತ್ರ್ಯ, ನರಕ ಅನುಭವಿಸಿದಾಗ;
ಇದ್ದವರು ಇದ್ದಲ್ಲೇ ಇದ್ದು ತಲೆಯೆತ್ತಿದೆ ದೇಶ,
ಇಳಿಯುವುದು ಅವುಡುಗಚ್ಚಿ ತಡೆದ ರೋಷ ||೪||
-ದ್ಯಾವಪ್ಪ ಎಂ. (ದ್ಯಾಮು)
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್