ವಿಧಿ ಚಿತ್ತ
ಬಸ್ಸಿನಿಂದ ಇಳಿದು ಇನ್ನೇನು ಮುಂದೆ ಹೆಜ್ಜೆ ಇಡಬೇಕು, ಎನ್ನುವಷ್ಟರಲ್ಲೇ ಡಿಕ್ಕಿ ಹೊಡದ ಯುವತಿಯೊಬ್ಬಳು I'm sorry ಅನ್ನುತ್ತ ಬಿದ್ದ ಸಾಮಾನುಗಳನ್ನು ಜೋಡಿಸಲು ಅನುವಾದಳು. ಪರವಾಗಿಲ್ಲ ಬಿಡಿ ಎನ್ನುತ್ತಾ ತನ್ನ ವಸ್ತುಗಳನ್ನೆಲ್ಲ ತಾನೇ ಜೋಡಿಸಲು ಅನುವಾದನು ಆನಂದ. ಅವಳು ಜೋಡಿಸಿದ ಸಾಮಾನುಗಳನ್ನು ಅವನಿಗೆ ಕೊಟ್ಟು ಮುಂದೆ ನಡೆದಳು. ಮೇಲೆದ್ದ ಆನಂದ ಅವಳಿಗೆ ಕೃತಜ್ಞತೆ ಸಲ್ಲಿಸಲೆಂದು ತಲೆಯೆತ್ತಿದ್ದರೆ ಅವಳು ಅಲ್ಲಿಂದ ಕದಲಿದ್ದಳು. ಅವಳು ಕಾಣಿಸುತ್ತಿದ್ದರೂ ತನ್ನ ಸ್ವರ ಅವಳಲ್ಲಿಗೆ ತಲುಪಲಾರದು ಎಂದು ತಿಳಿದಿದ್ದ ಆನಂದ ಅಲ್ಲಿಗೆ ಸುಮ್ಮನಾದನು. ಆದರೆ ದೂರದಲ್ಲಿ ನಡೆಯುತ್ತಿದ್ದ ಆಕೆಯ ನಡಿಗೆ ಯಾಕೊ ಚಿರಪರಿಚಿತ ಎನಿಸಿತು. ಆ ನಡಿಗೆಯನ್ನು ಬಹಳ ಹತ್ತಿರದಲ್ಲಿ ಕಂಡಿದ್ದೇನೆ ಅನಿಸಿತು. yes ಇದು ಅವಳದೇ ನಡಿಗೆ. ನೂರು ಜನರನ್ನು ಒಟ್ಟಿಗೆ ನಿಲ್ಲಿಸಿ ಮುಖ ತೋರಿಸದೆ ಇದ್ದರೂ ಇವಳನ್ನು ಇವಳ ನಡಿಗೆಯಲ್ಲೇ ಗುರುತಿಸಬಲ್ಲೆ ನಾ..ನಾಲಿಗೆ ತಂತಾನೆ “ ಸ್ವಾತಿ” ಎಂದು ಉಚ್ಚರಿಸಿತು. ಆದರೆ ಅವನ ಸ್ವರ ಅವಳಲ್ಲಿ ತಲುಪುವಷ್ಟರಲ್ಲಿ ಆಕೆ ಆಟೋ ಹಿಡಿದು ಹೊರಟು ಹೋಗಿದ್ದಳು
ಗೆಳೆಯನ ಮನೆ ಸೇರಿದ ಆನಂದನಿಗೆ ಭರ್ಜರಿ ಸ್ವಾಗತವೇ ಸಿಕ್ಕಿತ್ತು, ಗೆಳೆಯ, ಗೆಳೆಯನ ಹೆಂಡತಿ ಮತ್ತು
ಮಗುವಿನೊಂದಿಗೆ ಕಾಲ ಕಳೆಯಲೆಂದೇ ಇಲ್ಲಿಗೆ ಬಂದಿದ್ದನು, ಆದರೆ ಯಾಕೋ ಊರಿಗೆ ಕಾಲಿಟ್ಟ ಘಳಿಗೆಯಲ್ಲೇ ಕಹಿಯ ಅನುಭವವಾಗಿತ್ತು. ಯಾರನ್ನು ಮರೆಯಲು ಕಷ್ಟಪಡುತ್ತಿದ್ದನೋ ಅವಳು ಇವತ್ತು ತನ್ನ ಕಣ್ಣ ಮುಂದೆ ಪ್ರತ್ಯಕ್ಷಳಾಗಿದ್ದಳು. ಖುಷಿ ಪಡಬೇಕೋ ಬೇಜರಗಬೇಕೋ ತಿಳಿಯದ ಸ್ಥಿತಿಯಲ್ಲಿಯೇ ಗೆಳೆಯ ಪ್ರಕಾಶನೊಂದಿಗೆ ಊಟ ಮುಗಿಸಿದನು. ಹೊರಗೆ ಬಂದು ಕುಳಿತವನಿಗೆ " ಏನೋ? ಏನ್ ಯೋಚನೆ ಮಾಡ್ತೀದಿಯಾ? ಎಂಬ ಗೆಳೆಯನ ಕರೆ ಎಚ್ಚರಿಸಿತ್ತು.
ಏನಿಲ್ಲ...ಬಾ ಕೂತ್ಕ.
ಪ್ರಕಾಶ “ ಅದೇನೋ ಮನೆಯಲ್ಲಿ ಮೂರು ನಾಲ್ಕು ಗಾಡಿ ಇಟ್ಗೊಂಡು ಬಸ್ಸಿನಲ್ಲಿ ಪ್ರಯಾಣ?
ಆನಂದ” ಬಸ್ನಲ್ಲಿ ಇರೋ ಮಜಾ ಗಾಡಿಯಲ್ಲಿರಲ್ಲ ಕಣೋ.. ಅತ್ತಿಗೆ ಮಗು ಮಲಗಿದ್ರಾ?
ಪ್ರಕಾಶ" ಹೌದು ಅವರು ಮಲಗಿದ್ದಾರೆ. ನೀನು ರೂಮಿನಲ್ಲಿ ಇಲ್ಲದೆ ಇರೋದನ ಗಮನಿಸಿ ಈ ಕಡೆಗೆ ಬಂದೆ
ಅಂದ ಹಾಗೆ ನಿನ್ನ ಬ್ಯುಸಿನೆಸ್ ಹೇಗೆ ನಡೀತಿದೆ?
ಆನಂದ” ಪರವಾಗಿಲ್ಲ ಕಣೋ ಚೆನ್ನಾಗಿ ನಡೆಯುತ್ತಿದೆ. ಇಲ್ಲಿ ಒಂದು meeting ಇದೆ. ನಾಳೆ ಹೋಗಿಬರ್ಬೇಕು. ಅಮ್ಮನದ್ದೇ ಒಂದು ಚಿಂತೆಯಾಗಿದೆ ಕಣೋ. ಏನನ್ನೋ
ಮನಸಲ್ಲಿಟ್ಟು ಕೊರಗುತ್ತಿದ್ದಾರೆ ಅನ್ಸುತ್ತೆ. ಏನೆಂದು ಕೇಳಿದರೆ, ನೀನೊಂದು ಮದುವೆಯಾಗು ಅನ್ನುತ್ತಾರೆ. ನೀನೇ ಹೇಳು ನಾನು ಹೇಗೆ ಮದುವೆಯಾಗಲಿ? ನನ್ಗೆ ಅವಳನ್ನು ಮರೆಯಲು ಆಗುತ್ತಿಲ್ಲ. ಮದುವೆ ಆದ್ರೆ ಬಂದವಳನ್ನೂ ಸುಖವಾಗಿಡಾಕಾಗುತ್ತಾ? ಎಲ್ಲಾ ಮರೆಯಬೇಕು ಎಂದು ಇಲ್ಲಿಗೆ ಬಂದರೆ ಅವಳು ಇಲ್ಲಿಯೂ ಪ್ರತ್ಯಕ್ಷಳಾಗಿದ್ದಾಳೆ.
ಪ್ರಕಾಶ" ಏನು? ಸ್ವಾತಿ ಈ ಊರಲ್ಲಿದ್ದಾಳಾ? ನಾನು ಇದುವರೆಗೂ ನೋಡಿವಲ್ಲ. ಇರ್ಲಿ ಬಿಡು ನಿನಗೆ ಮರೆಯಲು ಕಷ್ಟವಾಗುತ್ತದೆ ನಿಜ. ಆದ್ರೆ ಅವಳು ಮಾಡಿದ ದ್ರೋಹ ಗೊತ್ತಾದ ಮೇಲೂ ಅವಳನ್ನು ಮನಸ್ಸಲ್ಲಿಟ್ಟು
ಕೊರಗುವುದು ಸರಿಯಲ್ಲಿ ಅಲ್ಲಾ?
ಆನಂದ" ಇಲ್ಲಾ ಪ್ರಕಾಶ ನಾನು ಅವಳನ್ನು ಮನಸಾರೆ ಪ್ರೀತಿಸಿದ್ದೆ ಅವಳು ಪ್ರೀತಿಸಿದಳೋ ಇಲ್ಲವೋ ಆದರೆ ಅವಳು ಹೀಗೆಲ್ಲ ಮಾಡಿದ್ಲು ಅಂದ್ರೆ ನನ್ ಮನಸು ಯಾಕೋ ಒಪ್ತಿಲ್ಲ ಕಣೋ. .......
ಪ್ರಕಾಶ” ಸರಿ ಸರಿ ಇನ್ನು ಅದರ ಬಗ್ಗೆ ಮಾತಾಡ್ತಾ ಕುಳಿತರೆ ನಿನ್ನ ಮನಸ್ಸಿಗೆ ಇನ್ನಷ್ಟು ನೋವಾಗುತ್ತೆ. ಮೇಲೇಳು ಹೋಗಿ ಹಾಯಾಗಿ ಮಲಗು ನಾಳೆ ಅದೇನೋ ಆಫೀಸಿನ ಕೆಲಸದ ಮೇರೆಗೆ ಎಲ್ಲೋ ಹೋಗಬೇಕು ಅಂತ ಹೇಳಿದ್ಯಲ್ಲ ಅಲ್ಲಿಗೆ ಹೋಗಿ ಬರೋಣ . ಅಂದ ಹಾಗೇ ರೂಮನಲ್ಲಿ ಜಯ
ನಿನಗೋಸ್ಕರ ಹಾಲಿಟ್ಟಿದ್ದಾಳೆ ಕುಡಿದು ಮಲಗು.
ಆನಂದ” ಸರಿ ಎನ್ನುತ್ತಾ ಮಲಗಲು ತನ್ನ ರೂಮಿನ ಕಡೆಗೆ ನಡೆದ ಎಷ್ಟು ಪ್ರಯತ್ನಿಸಿದ್ದರೂ ನಿದ್ದೇನೇ ಬರಲ್ಲ
ಅನಿಸಿತು. ಎದ್ದು ಕುಳಿತವನಿಗೆ ಮತ್ತೆ ಸ್ವಾತಿ ನೆನಪಾದಳು.ಐದು ವರ್ಷದ ಮುಂಚೆ ಹೀಗೆಯೇ ನಿದ್ದೆಗೆಟ್ಟಿದ್ದನು. ಆದರೆ ಅದರಲ್ಲೇನೊ
ಹಿತವಿತ್ತು. ಆದರೆ ಈಗ.....ಯಾಕೋ ಮನ ನೋವಿನಿಂದ ಕಂಬನಿಯಿಕ್ಕಿತು. ನೆನಪುಗಳು ತನ್ನ ಕಾಲೇಜಿನ ಜೇವನದತ್ತ ಪ್ರಯಾಣಬೆಳಿಸಿತು.
ಕಾಲೇಜಿನಲ್ಲಿ ಆನಂದ ಎಲ್ಲದರಲ್ಲೂ ಮುಂದು. ಎಲ್ಲರಿಗೂ ಅಚ್ಚುಮೆಚ್ಚಿನವನಾಗಿದ್ದ ಆನಂದನನ್ನು ಬಾಳ ಸಂಗತಿಯಾಗಿ ಪಡೆಯಲು ಎಲ್ಲರೂ ತುದಿಗಾಲಲ್ಲಿ ನಿಂತಿದ್ದರು. ಆದರೆ ಈ ಪುಣ್ಯಾತ್ಮನಿಗೆ ಮಾತ್ರ ತನ್ನ ಬಾಲ್ಯದ ಗೆಳತಿ ಸ್ವಾತಿಯ ಮೇಲೆ ಕಣ್ಣು, ಯಾವಾಗ ತನ್ನ ಮನಸ್ಸನ್ನು
ಅವಳೊಂದಿಗೆ ಹಂಚಿಕೊಳ್ಳುವುದೋ ಎಂದು ತಿಳಿಯುತ್ತಿರಲಿಲ್ಲ. ಬಾಲ್ಯದಿಂದಲೂ ಅವನು ಆರಾಧಿಸುತ್ತಿದ ಹೆಣ್ಣು ಅಂದ್ರೆ ಅದು ಸ್ವಾತಿಯೊಬ್ಬಳೆ. ಅವಳ ತಂದೆ, ಆನಂದನ ತಂದೆಯವರ ಕಾಲದಿಂದಲೂ ಅವರ ಆಫೀಸಿನಲ್ಲಿ ನೌಕರರಾಗಿದ್ದರು . ತಾಯಿಯ ಆರೋಗ್ಯ ಹದಗೆಟ್ಟಿದ್ದರಿಂದ ಸ್ವಾತಿ ಪಿ.ಯು.ಸಿಗೆ ತನ್ನ ವಿಧ್ಯಾಭ್ಯಾಸ ಮುಗಿಸಬೇಕಾಗಿ ಬಂತು. ಅಲ್ಲಿ ಇಲ್ಲಿ ಯಾರ್ಯಾರ್ದೋ ಕೈ ಕಾಲು ಹಿಡಿದ ಬಳಿಕ ಏನೋ ಒಂದು ಚಿಕ್ಕ ಕೆಲಸ ಸಿಕ್ಕಿತ್ತು. ಆದರೆ ಇದ್ಯಾವುದೂ ಅವರಿಬ್ಬರ ಗೆಳೆತನಕ್ಕೆ ಅಡ್ಡವಾಗಿರಲಿಲ್ಲ. ಆನಂದ" ನೀನು ಓದು ಮುಂದುವರೆಸಲು ನಾನು ಸಹಾಯ ಮಾಡ್ತೇನೆ ಕಣೆ ಮುಂದಕ್ಕೆ ಓದು, ಒಳ್ಳೆ ಕೆಲಸ ಸಿಗುತ್ತದೆ. ಬೇಕಾದರೆ ನಮ್ಮ ಆಫೀಸಿನಲ್ಲೇ ಕೆಲಸ ಮಾಡುವಿಯಂತೆ ಎನ್ನುತ್ತಿದ್ದನು.
ಸ್ವಾತಿ” ಬೇಡ ಕಣೋ ಅಮ್ಮನ ಆರೋಗ್ಯ ಸ್ವಲ್ಪ ಸುಧಾರಿಸಲಿ ಆಮೇಲೆ ನಾನು ಪರೀಕ್ಷೆ ಕಟ್ಟಿ ಪಾಸಾಗಿ ನಿನ್ನ
ಆಫೀಸಿಗೆ ಕೆಲಸಕ್ಕೆ ಬರುತ್ತೀನಿ, ಅಷ್ಟರೊಳಗೆ ನೀನು ಕೂಡ ಆಫೀಸಿಗೆ join ಆಗಿರುತ್ತೀಯಾ ಅಲ್ವಾ?
ಅವಳಿಗೇನೋ ಓದಬೇಕು ಅಂತ ಆಸೆಯಿತ್ತು. ಆದರೆ ಅವನ ಸ್ನೇಹವನ್ನು ದುರುಪಯೋಗ
ಪಡಿಸಿಕೊಳ್ಳುವುದು ಸರಿಯೆನಿಸುತ್ತಿರಲಿಲ್ಲ,
ಕಾಲೇಜಿನ ಕೊನೆಯ ವರ್ಷ ಆರಂಭವಾಗಿತ್ತು. ಗೆಳೆಯ ಪ್ರಕಾಶ ಕೂಡ ಅವನೊಂದಿಗೆ ಇದ್ದ. ಸ್ವಾತಿಯ ವಿಷಯ ಅವನಿಗೂ ಗೊತ್ತಿತ್ತು. ಒಂದು ದಿನ ಅವನು ಗೆಳೆಯನಿಗೆ ನೋಡೋ ಈಗಲಾದರೂ ಸ್ವಾತಿಗೆ ವಿಷಯ ತಿಳಿಸು. ನನ್ನತ್ರ ಇಲ್ಲಿ ಕುಳಿತು ಅವಳ ಬಗ್ಗೆ ಸಾವಿರಾರು ಮಾತಾಡುವ ಬದಲು ಅವಳೊಂದಿಗೆ ಒಂದು ಸಲ ಈ ಬಗ್ಗೆ
ಚರ್ಚಿಸಬಾರದೆ? ಆದೆಷ್ಟೋ ಗಂಟೆಗಳ ಕಾಲ ಅವಳೊಂದಿಗೆ ಕುಳಿತು ಹರಟೆ ಹೊಡಿತಿಯ ಒಂದು ಸಲ
ಸಿರಿಯಸ್ ಆಗಿ I love you ಅಂತ ಹೇಳಬಾರದೇ?
ಆನಂದ “ ಅಯ್ಯೋ ಇದೇ ಮೂರು ಶಬ್ದ ಹೇಳೇಕು ಅಂತ ಕಳೆದ ಮೂರು ವರ್ಷದಿಂದ ಅದೆಷ್ಟು ಸಲ ಅವಳ ಮುಂದೆ ಹೋಗಿ ನಿಂತೆನೋ , ಆದ್ರೆ ಅವಳ ಮುಂದೆ ನಿಂತಾಗಲ್ಲೇ ಈ ಶಬ್ದಗಳು ಹೊರಗೆ ಬರುದೇ ಇಲ್ಲ ಕಣೋ
ಪ್ರಕಾಶ “ ನೋಡೋ ಇವತ್ತೇ ನೀನು ಅವಳ ಬಳಿ ಇದನ್ನು ಚರ್ಚಿಸಬೇಕು ಇನ್ನು ನಿನ್ನತ್ರ ಇರುವುದು ಕೇವಲ 5/6ತಿಂಗಳು. ಆಮೇಲೆ ನಿನ್ನನ್ನು ಅಮ್ಮ ಅಮೇರಿಕಕ್ಕೆ ಕಳುಹಿಸುತ್ತಾರೆ.ಅದರ ಬಗ್ಗೆ ನಿನಗೆ ಗೊತ್ತೆ ಇದೆಯಲ್ಲಾ? ಆನಂದ "ಸರಿ ಕಣೋ ಇವತ್ತು ಹೇಳೇ ಬಿಡ್ತೀನಿ. ಅವಳ ಉತ್ತರ ಏನಾದ್ರು ಸರಿ. ಇವತ್ತು ಹೇಳೋದಂತ್ತು
ಗ್ಯಾರಂಟಿ ಅನ್ನುತ್ತಾ ಸ್ವಾತಿಗೆ ಫೋನ್ ಮಾಡತೊಡಗಿದ.
ಅವನಾಸೆಯಂತೆ ಸ್ವಾತಿ ಅಫಿಸಿನಿಂದ ಹೊರಬಂದಾಕ್ಷಣ ಆನಂದನಿಗೆ ಕರೆ ಮಾಡಿದಳು. ಆನಂದ ಅಷ್ಟೊತ್ತಿಗಾಗಲೇ ಹೊರಗೆ ಬಂದು ನಿಂತಿದ್ದನು.
ಸ್ವಾತಿ ನಗುತ್ತಾ “ ಏನೋ ಯಾರಿಗೆ ವೈಟ್ ಮಾಡ್ತಿದ್ದೀಯಾ? ಎಂದಳು.
ಆನಂದ " ನಾನು ನಿನ್ನನ್ನಲ್ಲದೆ ಬೇರೆ ಯಾರನ್ನು ವೈಟ್ ಮಾಡಲಿ?" ಮಾತಿನಲ್ಲಿ ಎರಡು ಅರ್ಥಗಳಿದ್ದರೂ ಸ್ವಾತಿಯ ತಲೆಗೆ ಮಾತ್ರ ಅದೆಲ್ಲ ಅರ್ಥವಾಗಿರಲಿಲ್ಲ. ಅವನ ಜೊತೆ ಹೀಗೆ ಹೊರಗೆ ಹೋಗಿ ಬರುವುದು ಇದೇನು ಮೊದಲಲ್ಲವಾದ್ದುದರಿಂದ ತಾನಾಗೇ ಬಂದು ಕಾರಿನ ಡೋರ್ ತೆಗೆದು ಮುಂದಿನ ಸೀಟಲ್ಲೇ ಕುಳಿತಳು.
ಆನಂದ” ಸ್ವಾತಿ ನಿನ್ನತ್ರ ಸ್ವಲ್ಪ ಮಾತಾಡೇಕಿತ್ತು ಸಿರಿಯಸ್ ವಿಷ್ಯ. ಕಾಫಿ ಕುಡಿಯುತ್ತಾ ಮಾತಾಡೋಣ K ನ?
ಸ್ವಾತಿ " ಬೇಡ ಕಣೋ ತಲೆನೋವು ಅಂತ ಸ್ವಲ್ಪ ಹೊತ್ತಿಗೆ ಮುಂಚೆನೇ ಕಾಫಿ ಕುಡಿದೆ. ಇನ್ನೊಂದ್ಸಲ ಬೇಡ. ಎಲ್ಲಾದ್ರೂ ಕಾರು ನಿಲ್ಲಿಸು, ಮಾತಾಡುವಿಯಂತೆ.
ಆನಂದ ಸರಿ ಎಂದು ಜನಸಂಚಾರ ಸ್ವಲ್ಪ ಕಡಿಮೆ ಇದ್ದಲ್ಲಿ ಕಾರು ನಿಲ್ಲಿಸಿದರು.
ಆನಂದ” ಅಂದ ಹಾಗೆ ಹೇಗೆ ನಡೀತಿದೆ ಕೆಲಸ?
ಸ್ವಾತಿ"ಓ ಇದು ಕೇಳೊದಿಕ್ಕೋಸ್ಕರ ಇಲ್ಲಿಗೆ ಕರೆದುಕೊಂಡು ಬಂದ್ಯ?
ಆನಂದ “ ಅಲ್ಲ ಕಣೇ ಅದೂ....
ಸ್ವಾತಿ” ಮತ್ತೆ ಹೇಳೋ ವಿಷ್ಯ... ಅದ್ಯಾಕೆ ಮಾತಿಗೆ ಪೀಠಿಕೆ ಹಾಕ್ತಾ ಇದ್ದಿಯಾ?
ಆನಂದ” ಸರಿ ಹಾಗಾದ್ರೆ ನೆರವಾಗಿ ವಿಷಯಕ್ಕೆ ಬರ್ತಿನಿ... ನಾನು ಒಬ್ಬಳನ್ನು ತುಂಬಾ ಪ್ರೀತಿಸ್ತಿದ್ದೀನಿ,
ಅವಳತ್ತ ಹೇಗೆ ಹೇಳೊದು? ಒಂದು ವೇಳೆ ಅವಳು ನಿರಾಕರಿಸಿದರೆ ಏನ್ ಮಾಡೋದು ಅಂತ
ಗೊತ್ತಾಗಲ್ಲ.
ಸ್ವಾತಿ” ಅಯ್ಯೋ ಇಷ್ಟೇನಾ? ಅದೇನು ಮಹಾ? ಅವಳ ಮುಂದೆ ನಿಂತ್ಕಂಡು ಐ ಲವ್ ಯು ಅನ್ನು , ನಿನ್ನೆ
ಆಗಲ್ಲ ಅಂದ್ರೆ ಬಿಡು, ಅವಳ್ಯಾರು ಅಂತ ನನ್ಗ ತೋರಿಸು ನಾನ್ ಅವಳ ಹತ್ತಿರ ಮಾತಾಡಿ ಒಪ್ಪಿಸತ್ತೀನಿ ಅಷ್ಟಕ್ಕೂ ನೀನು ಇಷ್ಟಪಟ್ಟವಳು, ಅಂದ್ರೆ ಅವಳು ಭಾಗ್ಯವಂತಳೇ, ನಿನ್ನನ್ನು ಯಾರಾದ್ರು ಒಪ್ತ ಒಪ್ಪುತ್ತಾರೆ.
ಆನಂದ “ ಸರಿ ಹಾಗಾದ್ರೆ ಅವಳನ್ನು ತೋರಿಸುತ್ತೇನೆ. ಅವಳನ್ನ ನೀನು ಒಪ್ಪಿಸುತ್ತಿಯಾ?
ಆಕೆ ಸರಿ ಎಂದ ಕೂಡಲೇ ಅವಳಿಂದ ಅವಳ ಪರ್ಸ ಕಿತ್ತು ಕೊಂಡು ಅದರಲ್ಲಿದ್ದ ಚಿಕ್ಕ ಕನ್ನಡಿ ತೆಗೆದು ಅವಳಿಗೆ |
ತೋರಿಸಿದ ಅದರಲ್ಲಿದ್ದ ತನ್ನ ಮುಖವನ್ನು ಕಂಡ ಅವಳು ಬೆಚ್ಚಿ ಬಿದ್ದಳು.
ಆನಂದ * ಇವಳನ್ನು ನಾನು ಮೆಚ್ಚಿದ್ದೇನೆ ಇವಳನ್ನು ಒಪ್ಪಿಸುತ್ತೀಯಾ?
ಸ್ವಾತಿ" ಆನಂದ ಅದೂ.....ಆಗಲ್ಲ ಕಣೋ. ನಿನ್ನ ಅಂತಸ್ತೇನು? ನನ್ನ ಅಂತಸ್ತೇನು?
ನಾವು ಒಳ್ಳೆ ಸ್ನೇಹಿತರಾಗಬಹುದೇ ವಿನಃ ಬಾಳಸಂಗಾತಿಯಾಗಲು ಅರ್ಹರಲ್ಲ.
ಆನಂದ" ಅದೆಲ್ಲ ಮುಂದಿನ ವಿಷಯ ನನ್ನ ಪ್ರಶ್ನೆಗೆ ಮೊದಲು ಉತ್ತರಿಸು ಫೀಸ್ ಸ್ವಾತಿ ನಿರಾಕರಿಸಬೇಡವೇ
ಸ್ವಾತಿ ಕೆಳಗೆ ನೋಡುತ್ತಾ”ನಿಜ ಹೇಳೋಕಂದ್ರೆ ನಾನು ಕೂಡಾ ನಿನ್ನ ಪ್ರೀತಿಸ್ತೀನಿ. ಆದ್ರೆ ಮುಂದೇನಾಗುತ್ತೋ ಎಂಬ ಭಯ
ಮುಖವನ್ನು ಮೇಲೆತ್ತದೆ ಉತ್ತರಿಸಿದಳು,
ಆನಂದ * ಮುಂದೇನು ಆಗಲ್ಲ. ನೀನು ಧೈರ್ಯವಾಗಿರು. ಅಬ್ಬಾ ನಿನ್ ಒಪ್ಪಿದ್ಯಲ್ಲ .ಅಷ್ಟು ಸಾಕು. ಈ ವರ್ಷ ನನ್ನ ಕಾಲೇಜು ಮುಗಿದ ತಕ್ಷಣ ಅಮ್ಮನಿಗೆ ಈ ವಿಷಯ ಹೇಳಿಬಿಡ್ತೇನೆ. ಮತ್ತೇನೋ ಯೋಚಿಸುತ್ತಾ ಅಂದ ಹಾಗೇ ಮುಂದಿನ ವರ್ಷ ನಾನು ಅಮೇರಿಕಾಕ್ಕೆ ಹೋಗ್ತಿದ್ದೇನೆ.
ಬಂದ ಕೂಡಲೇ ಇಲ್ಲಿ ಆಫೀಸ್ಗೆ ಸೇರಿ ಬಿಸ್ನೆಸ್ ನೋಡ್ಕೋಬೇಕು ಅಂತಿದ್ದೀನಿ.
ಸ್ವಾತಿ” ಏನು ನೀನು ಅಮೇರಿಕಾ ಹೊಗ್ತಿದಿಯಾ? ಎಂದು ಕಣ್ಣರಳಿಸಿ ನೋಡಿದವಳ ತಲೆಗೊಂದು ಸಣ್ಣದಾಗಿ
ಹೊಡೆದು “ಬರೀ ಮೂರು ವರ್ಷ ಕಣೆ” ಎಂದನು.
ಸ್ವಾತಿ” ಹೂಂ. ಅಲ್ಲಿಂದ ಬರುವಾಗ ಬಿಳಿಜಿರಳೆಯನ್ನು ಗಂಟು ಹಾಕ್ಕೊಂಡು ಬರಲ್ಲ ತಾನೇ !
ಆನಂದ “ ಯಾಕೆ ನನ್ನ ಮೇಲೆ ಭರವಸೆ ಇಲ್ವೇನೆ ಮುದ್ದು? ಎಂದ ಅವಳನ್ನು ತನ್ನ ಬಳಿಗೆ ಎಳೆದುಕೊಳ್ಳುತ್ತಾ.
ಸ್ವಾತಿ "ಖಂಡಿತಾ ಇದೆ. ಸುಮ್ಮೆ ಕೇಳಿದೆ ಎಂದಳು ಅವನ ಎದೆಗೊರಗುತ್ತಾ.
ಕಾಲೇಜಿನ ಪರೀಕ್ಷೆಗಳು ಮುಗಿದು ಹೊರಬಂದ ಆನಂದ ನೇರವಾಗಿ ಸ್ವಾತಿಯ ಅಫಿಸಿನ ಕಡೆ ಬಂದನು. ಇಬ್ಬರೂ ಹೋಟೆಲಿಗೆ ಹೋಗಿ ತಿಂಡಿಗೆ ಆರ್ಡರ್ ಮಾಡಿದರು.
ಆನಂದ” ಅಂದ ಹಾಗೇ ಸ್ವಾತಿ ಇವತ್ತು ಅಮ್ಮನ ಹತ್ತಿರ ನಿನ್ನ ವಿಷ್ಯ ಮಾತಾಡಲಾ?
ಸ್ವಾತಿ” ಬೇಡ ಕಣೋ. ಇಷ್ಟು ಬೇಗ ಬೇಡ. ನೀನು ಅಮೇರಿಕಾಕ್ಕೆ ಹೋಗಿ ಬಾ. ಅಷ್ಟರಲ್ಲಿ ನನ್ನ ಅಮ್ಮನ
ಆರೋಗ್ಯವೂ ಸ್ವಲ್ಪ ಸುಧಾರಿಸುತ್ತೆ, ಆಮೇಲೆ ಹೇಳಿದರಾಯಿತು.
ಆನಂದ” ಓಕೆ ಮುದ್ದು ನಿನ್ನಿಷ್ಟ.
ಸ್ವಾತಿ " ನಂಗೊಂದ್ ಆಸೆ ಕಣೋ
ಆನಂದ "ಏನೋ ಅದು ನನ್ ಮುದ್ದರಗಿಣಿ
ಸ್ವಾತಿ "ನೀನು ಹೋಗಿ ಬರೋತಂಕ ಯಾವದೇ ಕಾರಣಕ್ಕೂ ನಾವು ಒಬ್ಬರಿಗೊಬ್ಬರು phn ಆಗ್ಲಿ msg ಆಗ್ಲಿ ಮಾಡಬಾರ್ದು.
ಆನಂದ " ಹೊಗೆ ಆಚೆ. ನನ್ ಕೈಲಿ ಆಗಲ್ಲಪ.
ಸ್ವಾತಿ" pls ಕಣೋ . ನಾವು ದೂರ ಇದ್ದಾಗಲೂ ನಮ್ ಪ್ರೀತಿ ಹೀಗೆಯೇ ಇರುತ್ತಾ ಅಂತ ನೋಡೋ ಆಸೆ ಕಣೋ.
ಆನಂದ ಒಲ್ಲದ ಮನಸ್ಸಿನಿಂದ ಅವಳ ಕೈ ಹಿಡಿದು "OK ಮುದ್ದು. ನಿನ್ನಿಷ್ಟ.bt i miss u so mch ಕಣೋ ಬಂಗಾರ.
ಸ್ವಾತಿ "I toooo misss u ಕಣೋ.
ತಿಂಡಿ ತಿಂದು ಹೊರಬಂದ ಅವರು ತಮ್ಮ ತಮ್ಮ ಗೂಡುಗಳಿಗೆ ವಾಪಸ್ಸಾದರು.
ಇದೆಲ್ಲದರ ಪರಿವೆಯೇ ಇಲ್ಲದ ಆನಂದನ ತಾಯಿ ರಾಜಮ್ಮನವರಿಗೆ ಮಗನ ರೂಮಿನ ಕಬೋರ್ಡಿನಲ್ಲಿ ಸ್ವಾತಿಯ ಪೋಟೊ ನೋಡಿ ಆಶ್ಚರ್ಯವಾಗುತ್ತದೆ, ಅದನ್ನು ಅಲ್ಲೆ ತೆಗೆದಿಟ್ಟು ಸಂಜೆ ಆಡ್ಡಾಡಿಕೊಂಡು ಬಂದ
ಮಗನನ್ನು “ ಏನೋ ? ಎಲ್ಲಿಗೆ ಹೋಗಿದ್ದಿ ಯಾವಾಗದಿಂದ ನಿನ್ನತ್ರ ಮಾತಾಡೋಕು ಅಂತಿದ್ರೆ ಮಾತಿಗೆ
ಸಿಗುತ್ತಿಲ್ಲವಲ್ಲ?
ಆನಂದ" ಇಲ್ಲೇ ಫ್ರೆಂಡ್ಸ್ ಮನೆಗೆ ಹೋಗಿದ್ನಮ್ಮ
ರಾಜಮ್ಮು " ಅಲ್ಲಿ ಇಲ್ಲಿ ತಿರುಗುವ ಬಂದಲು ಆಫೀಸಿಗೆ ಹೋಗಿ ಕೆಲಸ ನೋಡೋಕೆ ಆಗಲ್ವಾ ?
ಆನಂದ" ಏನಮ್ಮ ನೀನು , ದಿನಾ ಇದೇ ರಾಗ ಹಾಡ್ತಿಯಾ ಎಂದು ತಾಯಿಯ ಮುಂದಿನ ಮಾತನ್ನು ಕೇಳದೆ
ನೇರವಾಗಿ ತನ್ನ ರೂಮಿಗೆ ಬಂದು ಮಲಗಿದನು. ಕೊನೆಗೂ ಆನಂದ ಆಮೇರಿಕಾಕ್ಕೆ ಹೋಗುವ ದಿನ ಬಂದಿತ್ತು. ಹೊರಡುವ ಮುಂಚಿನ ದಿನ ಸ್ವಾತಿಯೊಂದಿಗೆ ದಿನಾ ಸೇರುವ ಜಾಗದಲ್ಲಿ ಅವರಿಬ್ಬರು ದಿನ ಕಳೆದರು. ಅವಳು
ಆನಂದನ ಎದೆಗೊರಗಿ ಅತ್ತಿದ್ದಳು.
ಆನಂದ " ಇವಾಗ್ಲೂ tim ಇದೆ. ಕೊಟ್ಟ ಮಾತನ್ನು ವಾಪಸು ತೆಗೆದುಕೊ.ದಿನಾ vdo cl ಮಾಡ್ತೀನಿ ಚಿನ್ನ
ಸ್ವಾತಿ " ಬೇಡ. ಮಾತು ಅಂದ್ರೆ ಮಾತು. ಎಲ್ಲಾ ಪ್ರೀತಿ ಬಚ್ಚಿಟ್ಕೊಂಡು ನಿನ್ ಬಂದಾಗ ಎರಡರಷ್ಟು ಕೊಡ್ತೀನಿ. ಆನಂದ " ok but ನಿನ್ ಹೀಗೆ ಅಳ್ತಾ ನನ್ನ ಕಳಿಸಿ ಕೊಡಬಾರ್ದು. ನಗ್ನಗ್ತಾ ಕಲಿಸಬೇಕು ಎಂದು ಅವಳನ್ನು ಸಮಾಧಾನಿಸಿ ಬೇಗ ಬರುವುದಾಗಿ ಹೇಳಿ ಹೊರಟನು.
ಮೊದಮೊದಲು ಸ್ವಲ್ಪ ಕಷ್ಟ ಅಂತ ಅನ್ನಿಸಿದರೂ ತನ್ನ ಕೆಲಸದಲ್ಲಿ ತನ್ಮಯನಾದನು. ನಡುನಡುವೆ ಪ್ರೇಯಸಿಯ ನೆನಪು ಕಾಡದೆ ಇರಲಿಲ್ಲ. ಒಂದೇ ಒಂದ್ ಸಲ ಅವಳ ಜೊತೆ ಮಾತಡಬೇಕಿತ್ತು ಅಂತ ಅನಿಸಿದರೂ ತಮ್ಮ ನಡುವಿನ ಒಪ್ಪಂದ ಆತನನ್ನು ಕಟ್ಟಿಹಾಕಿತ್ತು. ತನ್ನ ಮೂರು ವರ್ಷವನ್ನು ಹೇಗೆ ಕಳೆದನೋ ಅದು ಅವನಿಗೇ ಗೊತ್ತು. ಕೊನೆಗೂ ಮೂರು ವರ್ಷದ ಸೆರೆವಾಸ ಕಳೆದು ಊರಿಗೆ ಬಂದರೆ ಅವನನ್ನು ಸ್ವಾಗತಿಸಲು ಅವಳ ಪತ್ರ ಇತ್ತೇ ವಿನಃ, ಅವಳು ಇರಲಿಲ್ಲ. ಅವಳ ತಂದೆಯ ಬಳಿ ಸ್ವಾತಿ ಎಲ್ಲಿ ಎಂದು ಕೇಳಿದಾಗ ಅವಳು ನಮ್ಮ ಪಾಲಿಗೆ ಸತ್ತು ಹೋದಳು. ನೋಡು ಈ ಕಾಗದ ನಿನ್ಗೆ ಕೊಡಲು ಹೇಳಿದ್ದಾಳೆ ಎಂದು ಒಂದು ಕಾಗದವನ್ನು ಅವನ ಕೈಗಿತ್ತರು, ನಡುಗುವ ಕೈಗಳಿಂದ ಪತ್ರವನ್ನು ಬಿಚ್ಚಿದ ಆನಂದನ ಮನಸ್ಸು ಒಡೆದು ಚೂರಾಗಿತ್ತು. ಅದರಲ್ಲಿ,
ಗೆಳೆಯ ಆನಂದ,
ನನಗೆ ಹೆಚ್ಚು ಬರೆಯಲು ಸಮಯವಿಲ್ಲ. ನೀನು ಇಲ್ಲಿಂದ ಹೋದ ಸಮಯದಲ್ಲಿ ನಾನು ಒಬ್ಬಂಟಿಯಾಗಿದ್ದೆ. ಮೊದಮೊದಲು ನಿನ್ನ ನೆನಪು ಕಾಡುತ್ತಿತ್ತು. ಆದ್ರೆ ಆಮೇಲೆ ಇಲ್ಲಿ ನನ್ನನ್ನು ಬೇರೆಯವರೊಬ್ಬರು ಪ್ರೀತಿಸುವ ವಿಷಯ ತಿಳಿಯಿತು. ಅವರ ಒಡನಾಟ ನನಗೆ ಪ್ರಿಯವೆನಿಸಿತು. ಬರ್ತಾ ಬರ್ತಾ ನಮ್ಮ ಪರಿಚಯ ಪ್ರೀತಿಯಾಯಿತು. ನೀನು ಬರುವ ಹೊತ್ತಿಗೆ ನಾನು ಎಲ್ಲಿರುತ್ತೇನೋ ಗೊತ್ತಿಲ್ಲ.ನಾಳೆನೇ ನಾವಿಬ್ಬರು ಈ ಊರು ಬಿಟ್ಟು ಹೋಗಿ ಮದುವೆಯಾಗ್ಗೇಕು ಅಂತಿದ್ದೀವಿ. ದಯವಿಟ್ಟು ನನ್ನನ್ನು ಮರೆತು ಬಿಡು.ನಿನ್ನ ಬದುಕಿನಲ್ಲಿ ಒಳ್ಳೆ ಹುಡುಗಿ ಬರಲೆಂದು ಹಾರೈಸುತ್ತಾ ನನ್ನ ಪತ್ರಕ್ಕೆ ಪೂರ್ಣವಿರಾಮವಿಡುತ್ತೇನೆ.
ಇಂತೀ ನಿನ್ನ ಗೆಳತಿ
ಸ್ವಾತಿ
ಅಂದಿನಿಂದ ಇಂದಿನವರೆಗೆ ಎರಡು ವರ್ಷ. ಮೊದಲ ಮೂರು ಮತ್ತು ಮುಂದಿನ ಎರಡು ಒಟ್ಟು ಐದು ವರ್ಷ
ಕಣ್ಣಿಗೆ ಬೀಳದ ಸ್ವಾತಿ ಇಲ್ಲಿ ಈ ಊರಲ್ಲಿ ಕಾಣಿಸಿದ್ದಳು. ತಾನು ಅಷ್ಟೊಂದು ಪ್ರೀತಿಸಿದ ಹುಡುಗಿನ ಕಂಡು ಖುಷಿ ಆಡಬೇಕು ಅಳಬೇಕೋ ಒಂದೂ ಅರ್ಥವಾಗದ ಸ್ಥಿತಿ ಅವನದು.ಅವಳು ಸ್ವಾತಿ ಹೌದೇ ? ನನ್ನ ಭ್ರಮೆ ಅಲ್ಲ ತಾನೇ? ಛೇ ಛೇ ಸಾಧ್ಯವೇ ಇಲ್ಲ, ಅವಳನ್ನು ನಾನು ಗುರುತಿಸಲಾರೆನೆ? ನಾಳೆ ಪುನಃ ಅದೇ ಹೊತ್ತಿಗೆ ಅದೇ ಬಸ್ಸ ಸ್ಯಾಂಡ ಬಳಿ ಹೋಗಿ ನೋಡೋಕು ಎಂದು ಅಂದುಕೊಂಡು ಕಣ್ಣು ಮುಚ್ಚಿದ. ಗಡಿಯಾರದ ಮುಳ್ಳು ಎಂಟು ಬಡಿದಾಗ ಕಣ್ಣು ಬಿಟ್ಟವನ ಎದುರು ಗೆಳೆಯ ಪ್ರಕಾಶ ಕುಳಿತಿದ್ದನು.
ಆನಂದ ಮೇಲೇಳುತ್ತ" ಏ ಪ್ರಕಾಶ ಯಾವಗ ಬಂದೆ?
ಪ್ರಕಾಶ" ಏನು ರಾತ್ರಿ ಇಡೀ ನಿದ್ರೆ ಮಾಡಿಲ್ಲವೇ? ಅವನ ಕೆಂಪಾದ ಕಣ್ಣುಗಳನ್ನು ಗಮನಿಸಿ ಕೇಳಿದನು.
ಆನಂದ" ಹಾಗೇನಿಲ್ಲ. ಅಂದ ಹಾಗೆ ಆಫೀಸಿಗೆ ಹೋಗ್ಲೀಕೆ ಇಲ್ವೇನೋ?
ಪ್ರಕಾಶ" ಹೋಗ್ಬೇಕೋ. ನೀನು ಅದೆಲ್ಲೋ ಹೋಗೇಕು ಅಂತಿದ್ದಿಯಲ್ಲಾ ನಾನು ಕೂಡ ಬರ್ತೇನೆ . ಆಫೀಸಿಗೆ ಆಮೇಲೆ ಹೋದರಾಯಿತು ಬಿಡು.
ಆನಂದ " ಬೇಡ ಕಣೋ. ನೀನು ಅಷ್ಟು ಹೊತ್ತು ನನಗೋಸ್ಕರ ಕಾಯುವುದು ಬೇಡ ನಾನು ಹೋಗಬೇಕಾದ ಜಾಗಕ್ಕೆ ಡ್ರಾಪ್ ಕೊಡು, ನನ್ನ ಕೆಲಸ ಮುಗಿದಾಕ್ಷಣ ನಿಂಗೆ phn ಮಾಡ್ತೀನಿ ಇಲ್ಲಾಂದ್ರೆ ಆಟೋ ಹಿಡಿದು ನಾನೇ ವಾಪಾಸ್ಸ ಬರ್ತೇನೆ.
ಪ್ರಕಾಶ “ ಹಾಗಂತಿಯಾ.ಸರಿ ಹಾಗಾದ್ರೆ ಬೇಗ ರೆಡಿಯಾಗು. ನಿನ್ನ ಡ್ರಾಪ್ ಮಾಡ್ತೀನಿ” ಎಂದು ಇಬ್ಬರೂ ರೆಡಿಯಾಗಿ ಹೊರಟರು.
ಅಂತೂ ಇಂತೂ ಬಂದ ಕೆಲಸ ಮುಗಿಸಿ ಮನೆಗೆ ಹೊರಡುವಾಗ ಗಂಟೆ ಮದ್ಯಾಹ್ನ ಒಂದುವರೆ ಆಗಿತ್ತು. ಹೊಟ್ಟೆ ಚುರುಗುಟ್ಟತ್ತಿತ್ತು. ಏನಾದರೂ ತಿಂದು ಆಮೇಲೆ ಹೋದರಾಯಿತು ಎಂದು ಕೊಂಡು ಹೋಟೇಲಿನ ಕಡೆಗೆ ಹೋದನು. ಇನ್ನೇನು ಒಳಗೆ ಕಾಲಿಡಬೇಕು ಎನ್ನುವಷ್ಟರಲ್ಲಿ ಬಸ್ ಸ್ಟಾಪ್ನಲ್ಲಿ ಸ್ವಾತಿ ನಿಂತಿರುವುದು ಕಾಣಿಸಿತ್ತು. ಎಸ್ ,
ಅದು ಸ್ವಾತಿಯೇ ತಿಳಿದ ಕೂಡಲೇ ಹೊಟ್ಟೆ ಹಸಿವು ಮರೆತು, ಒಳಗಿಡಬೇಕಾಗಿದ್ದ ಕಾಲು ತಂತಾನೆ ಆಕೆಯತ್ತ
ಹೊರಟಿತು.ಆನಂದನನ್ನು ನೋಡಿದ ಸ್ವಾತಿ ಒಂದು ಕ್ಷಣ ಪೆಚ್ಚಾದಳು. ಯಾಕೋ ಗಲಿಬಿಲಿಗೊಂಡಿದ್ದಳು. ಹಾಯ್
ಎಂದವನಿಗೆ ಪ್ರತಿಯಾಗಿ ವಂದಿಸಲು ಅವಳಿಗೆ ಹತ್ತು ನಿಮಿಷಗಳೇ ಬೇಕಾದವು. ಹಿಂದಿನ ದಿನ ಡಿಕ್ಕಿ
ಹೊಡೆದಾಗಲೇ ಆನಂದನನ್ನು ಗುರುತಿಸಿದ್ದಳು.
ಆನಂದ” ಹೇಗಿದ್ದೀಯಾ ?
ಸ್ವಾತಿ” ನಾನು ಚೆನ್ನಾಗಿದ್ದೀನಿ. ನಿನ್ ಹೇಗಿದಿಯಾ? ಎಂದಳು.
ಚೆನ್ನಾಗಿದಿನಿ ಎಂದವನ ಕಣ್ಣುಗಳು ಒಂದು ಕ್ಷಣ ಅವಳ ಕೊರಳಿಗಿಳಿದವು. ಅಲ್ಲಿ ಅವಳ ಮಾಂಗಲ್ಯ ಕಾಣದೇ ಇರುವುದನ್ನು ನೋಡಿ,
* ಸ್ವಾತಿ ನಿನ್ನ ಮಾಂಗಲ್ಯ ಎಲ್ಲಿ?
ಸ್ವಾತಿ ಒಂದು ಕ್ಷಣ ಸವರಿಸಿಕೊಂಡು” ಅದು ಹಾಂ ಬೆಳಗ್ಗೆ ಸ್ನಾನಕ್ಕೆ ಹೋದಾಗ ತೆಗೆದಿಟ್ಟಿದ್ದೆ ಮರೆತು ಬಿಟ್ಟೆ ಅನ್ಸುತ್ತೆ.
ಆಗಲೇ ಅವಳು ಹತ್ತಬೇಕಾದ ಬಸ್ ಬಂದಿದ್ದರಿಂದ ಬಸ್ ಹತ್ತಲು ಮುಂದಾದಳು, ಹತ್ತಿದ ಅವಳು ಮತ್ತೊಮ್ಮೆ ಹಿಂತಿರುಗಿ “ ಬಾಯ್” ಅಂದಳು. ಆಕೆಯನ್ನೇ ನೋಡಿದ ಆನಂದನಿಗೆ ಸ್ವಾತಿ ತುಂಬಾ ಸಣ್ಣಗಾಗಿದ್ದಾಳೆ ಅನ್ನಿಸಿತ್ತು. ಯಾಕೋ ಅವಳ ಬಗ್ಗೆ ಇನ್ನೂ ತಿಳಿಯಬೇಕು ಎಂದನ್ನಿಸಿತ್ತು. ಆಟೋ ಹಿಡಿದು ಮುಂದೆ ಹೋಗುತ್ತಿರುವ ಬಸ್ಸನ್ನು ಹಿಂಬಾಲಿಸಿದರು. ಒಂದು ಕಡೆ ಆಕೆ ಇಳಿದಾಗ “ ಸ್ವಾತಿ” ಅಂತ ಕರೆದನು.
ಆಕೆ ಮತ್ತೊಮ್ಮೆ ಬೆಚ್ಚಿದಳು ಹಿಂತಿರುಗಿದಾಗ ಅಲ್ಲಿ ಆತ ನಿಂತಿದ್ದ. ಏನು ಎಂಬಂತೆ ನೋಡಿದಳು
ಆನಂದ” ನೀನಂತು ಮನೆಗೆ ಕರೆಯಲಿಲ್ಲ. ನಿನ್ನ ಮನೆ ನೋಡೋಕು ಅಂತ ಅನ್ನಿಸಿತ್ತು. ಅದಕ್ಕೆ ನಾನಾಗಿ
ಬಂದೆ......
ಬರಬಹುದು ಅಲ್ವಾ?
ಸ್ವಾತಿ " ಹಾಂ. ನಂಗೆ ಗೊತ್ತಾಗಿಲ್ಲ.sorry ..ಖಂಡಿತಾ ಬರಬಹುದು. ಇಲ್ಲೆ ಹತ್ತಿರದಲ್ಲೇ ಇದೆ, ಬಾ ನಡ್ಕೊಂಡೇ ಹೋಗೋಣ"
ಸ್ವಾತಿ ಮುಂದೆ ನಡೆದಳು, ಅವಳೊಂದಿಗೆ ಹೆಜ್ಜೆ ಹಾಕಿದ ಅವನು, ಹೀಗೆ ಒಟ್ಟಿಗೆ ನಡೆದು ಎಷ್ಟು ಸಮಯವಾಯ್ತಿ ಅಲ್ವಾ ಮು.... ಸ್ವಾತಿ
ಅವಳು ಉತ್ತರಿಸದೆ ಮುಂದೆ ನಡೆದಳು.ಮನೆ ಸೇರುವವರೆಗೆ ಇಬ್ಬರೂ ಮಾತಾಡಲಿಲ್ಲ
ಸ್ವಾತಿ "ಏನು ತಗೋತಿಯಾ ? ಕಾಫಿ ನಾ ? ಟೀ ನಾ ?
ಆನಂದ " ಏನು ಬೇಡ ಬಾ ಇಲ್ಲಿ ಕೂತ್ಕೋ.ನಿನ್ನತ್ರ ಮಾತಾಡಬೇಕಿದೇ ಅಂದವನ ಮಾತು ಕೇಳಿ ಸ್ವಾತಿ ಕಳವಳಗೊಂಡಳು.
ಅಯ್ಯೋ ಯಾವುದೇ ಮೊದಲಿನ ವಿಷ್ಯ ತೆಗೆಯಲ್ಲ ಕಣೆ.ಒಬ್ಬ ಗೆಳೆಯನಾಗಿ ನಿಂಜೊತೆ ಮಾತಾಡೋ ಹಕ್ಕಿಲ್ವ ನಂಗೆ ಅಂದ. ಇಲ್ಲ ಹಾಗೇನಿಲ್ಲ . ಮಾತಾಡಬಹುದು ಎಂದು ಬಂದು ಕೂತವಳ ಮುಖ ನೋಡಿ ಅಯ್ಯೋ ಅನಿಸಿತು.
ಮನೆ ನೋಡುತ್ತಾ "ಮನೆ ಚಿಕ್ಕದಾದರೂ ಚೆನ್ನಾಗಿದೆ.ಅಂದ ಹಾಗೆ ಏನು ಮಾಡ್ತಾರೆ ನಿನ್ನೆಜಮಾನ್ರು? ಮದುವೆಯಾಗಿ 4-5 ವರ್ಷ ಆಯ್ತಲ್ಲಾ? ಎಷ್ಟು ಮಕ್ಕಳು? ನಿನ್ನ ಮದುವೆ ಫೋಟೋ ಇದ್ರೆ ತೋರಿಸು, ನಿನ್ನ ಕೈ ಹಿಡಿದ ಆ ಪುಣ್ಯವಂತನನ್ನು ಒಮ್ಮೆ ನೋಡೋಕು"
ಸ್ವಾತಿ” ಇಲ್ಲಾ ಫೋಟೋ ಏನು ತೆಗೆಸಿಕೊಂಡಿಲ್ಲ ನಾವು. mbl ಲ್ಲಿ ಕೆಲವೊಂದು ಇತ್ತು .ಅದು ಮೊನ್ನೆನೆ ಏನೋ ಮೆಮೊರಿ ಕಾರ್ಡು ಬ್ಲ್ಯಾಂಕ್ ಆಗಿ ಹೋಯಿತು.ಇನ್ನು ಮಕ್ಕಳು ಮರಿ ಇಷ್ಟು ಬೇಗ ಬೇಡವೆಂದು ನಾವು ಮೊದಲೇ
ನಿರ್ಧರಿಸಿದ್ದೇವೆ. so ಇಲ್ಲ.ನಾವು ಮೊದಲು ಬೇರೆ ಕಡೆ ಇದ್ವಿ, ಈಗ ಒಂದೆರಡು ತಿಂಗಳ ಆಯ್ತು ಇಲ್ಲಿ ಬಂದು.
ಲೈಪ್ ನಲ್ಲಿ ಮೊದಲು ಸೆಟ್ ಆಗಲಿ ಅಂತ.ಇವ್ರು ಆಫೀಸಗೆ ಹೋಗಿದ್ದಾರೆ. ಬರುವಾಗ ತಡವಾಗುತ್ತೆ ಅಂತ ನಗುನಗುತ್ತಾ ಹೇಳಿದಳು.
ಆನಂದ” ಸರಿ ಹಾಗಾದ್ರೆ ನಾನಿನ್ನು ಬರ್ತೇನೆ " ಅಂದು ಮೇಲೆದ್ದನು.
ಸ್ವಾತಿ " ನಾಳೆಯಿಂದ ಆಫಿಸಿನಲ್ಲಿ workload ಜಾಸ್ತಿ ಇದೆ. ಮತ್ತೆ ಇವ್ರಿಗೂ ಕೂಡ ನಾನು ನಮ್ ಕಡೆಯವರ ಜೊತೆ ಜಾಸ್ತಿ ಬೆರೆಯುದು ಇಷ್ಟವಾಗಲ್ಲ.ಸೋ.....
ಒಮ್ಮೆಲೆ ತಿರುಗಿ ಇನ್ಮೇಲೆ ಇಲ್ಲಿಗೆ ಬರಬೇಡ ಅಂತ ಹೇಳ್ತಿದೀಯ ಅಲ್ವಾ?
ಅದು ಹಾಗಲ್ಲ.....
its k ಸ್ವಾತಿ.. ನಂಗರ್ಥ ಆಗುತ್ತೆ..bai ಎಂದು ಹೊರಟವನು ತಿರುಗಿ “ಸ್ವಾತಿ ನೆನಪಿನಿಂದ ಒಳಗೆ ಹೋಗಿ ಮಾಂಗಲ್ಯ ಹಾಕೋ. ಹೀಗಿರುವುದು ಶುಭವಲ್ಲ. ಎಂದು ನಡೆದು ಬಿಟ್ಟನು. ಯಾಕೋ ಅವಳು ಹಾಗೆ ಬರಬೇಡ ಅಂತ ಹೇಳಿರುವುದು ಯಾಕೋ ಅವ್ನಿಗೆ ತುಂಬಾ ಬೇಸರ ತಂದಿತ್ತು. ಛೇ ಬರಲೇ ಬರ್ದಿತ್ತು ಅಂದುಕೊಂಡವನು ಅಷ್ಟಕ್ಕೂ ಅವ್ಳು ಹೇಳಿರುವುದರಲ್ಲಿ ತಪ್ಪೇನಿದೆ ಅಂದುಕೊಂಡು ಸುಮ್ಮನಾದನು.
ಅದಾದ ಎರಡು ವಾರದಿಂದ ಅವಳನ್ನು ಭೇಟಿಯಾಗಿರಲಿಲ್ಲ. ಆ ದಿನ ಅದೇ ಬಸ್ ಸ್ಟಾಂಡ್ ಬಳಿ ಬಂದು ನಿಂತಾಗ ಬೇಡವೆಂದರೂ ಮನಸ್ಸು ಅವಳನ್ನು ನೋಡಬಯಸಿತ್ತು. ಹಾಗೆ ಕಾಯುತ್ತ ನಿಂತವಾನಿಗೆ ಅವಳು ಬಾರದೆ ಇರುವಾಗ ನಿರಾಸೆಯಾಯಿತು.ಮರುದಿನನೂ ಕಾದು ಕುಳಿತನು. ಇಲ್ಲ ಅವ್ಳು ಬರಲೇ ಇಲ್ಲ. ಯಾಕೋ ಮನಸ್ಸು ಕಸಿವಿಸಿಗೊಂಡಿತ್ತು. ಇನ್ನೆಂದೂ ಅವಳ ಮನೆಗೆ ಹೋಗಲೇಬಾರ್ದು ಎಂದುಕೊಂಡಿದ್ದವನು ತನಗೇ ಗೊತ್ತಿಲ್ಲದೆ ನೇರವಾಗಿ ಅವಳ ಮನೆಗೆ ಬಂದನು. ಅಲ್ಲಿ ಮನೆ ಬಾಗಿಲಿಗೆ ಬೀಗ ಹಾಕಿದ್ದು ನೋಡಿ ಪಕ್ಕದ್ಮನೆ ಅಜ್ಜಿಯತ್ತ ಬಂದು ವಿಚಾರಿಸಿದನು.
ಆನಂದ “ ಅಜ್ಜಿ ಸ್ವಾತಿ ಮನೆಯಲ್ಲಿ ಇಲ್ವಾ?
ಅಜ್ಜಿ “ಇಲ್ಲಪ್ಪ.ಬಹುಷಃ ಆಸ್ಪತ್ರೆಗೆ ಹೋಗಿರಬೇಕು.
ಆನಂದ “ ಯಾಕೆ ? ಯಾರಿಗಾದ್ರೂ ಹುಷಾರಿಲ್ವಾ?
ಅಜ್ಜಿ " ಅದೇನಪ್ಪ ಹಾಗೆ ಕೇಳತ್ತೀಯಾ? ಯಾರಿಗಾದ್ರೂ ಅಂದ್ರೆ ಏನು?ಆ ಮನೆಯಲ್ಲಿ ಇರುವುದು
ಅವಳೊಬ್ಬಳೇ. ಅವಳಿಗೆ ಬೇರಾರೂ ಇಲ್ಲವಂತೆ.
ಆನಂದ “ ಏನು? ಮತ್ತೆ ಅವಳ ಗಂಡ ?
ಅಜ್ಜಿ ನಗುತ್ತ" ಅಯ್ಯೋ ಹುಚ್ ಹುಡುಗಿ ಎಲ್ಲೋ ನಿನ್ನತ್ರ ತಮಾಷೆ ಮಾಡಿರಬೇಕು. ಅವಳಿಗೆ ಇನ್ನೂ ಮದುವೆನೇ ಆಗಿಲ್ಲ. ಇನ್ನು ಗಂಡ ಎಲ್ಲಿಂದ ಬರಬೇಕು? ಒಂದು ವಾರದಿಂದ ತಲೆನೋವು ಅಂತಿದ್ದು . 4-5 ದಿನದಿಂದ ಜ್ವರ ಬೇರೆ ಬತ್ತಿತ್ತು. ಎಲ್ಲೋ ಔಷಧಿ ತರಲಿಕ್ಕೆ ಹೋಗಿರಬೇಕು. ಈಗ ಬರ್ತಳೆ ಇರು.......
ಅಜ್ಜಿ ಇನ್ನೇನೋ ಹೇಳ್ತಾ ಇತ್ತು..... ಆದರೆ ಅದ್ಯಾವುದರ ಪರಿವೆ ಅವನಿಗೆ ಇರಲಿಲ್ಲ. ಅವನ ತಲೆಯಲ್ಲಿ ಸ್ವಾತಿ
ಯಾಕೆ ನನ್ನ ಹತ್ರ ಸುಳ್ಳು ಹೇಳಿದಳು ಎಂಬ ಪ್ರಶ್ನೆಯೇ ಅವನನ್ನು ಕಾಡತೊಡಗಿತ್ತು.
ಅದನ್ನೆ ಯೋಚಿಸುತ್ತಾ ಕುಳಿತವನಿಗೆ ಆಜ್ಜಿ ಕರೆದು “ ನೋಡು ಮಗ ಸ್ವಾತಿ ಬಂದಿರಬೇಕು. ಮನೆಯ ಬೀಗ ತೆರೆದಿದೆ ಹೋಗಿ ನೋಡು “ ಅಂತು.
ಸರಿ ಅಜ್ಜಿ ಎಂದು ಆನಂದ ನೇರವಾಗಿ ಸ್ವಾತಿ ಮನೆಗೆ ಬಂದನು. ಕರೆಘಂಟೆಯ ಸದ್ದು
ಕೇಳಿ ತಕ್ಷಣ ಹೋರಬಂದ ಸ್ವಾತಿ ಆನಂದನನ್ನು ನೋಡಿ ಆಯ್ಯ್ಯೋ ಮತ್ಯಾಕೆ ಬಂದೆ ಅನ್ನೋ ಮುಖ ಮಾಡಿದಳು.ಮತ್ತೆ ನಗುತ್ತಾ
"ಓ ಆನಂದ ? ನೀನಾ ಬಾ ಒಳಗೆ ಅಂದಳು, ಒಳಗೆ ಬಂದ ಅವನು ಸೋಫಾದಲ್ಲಿ ಒರಗಿ ಕಣ್ಮುಚ್ಚಿದನು.ಯಾಕೋ ಮನಸ್ಸು ಭಾರವಾಗಿತ್ತು. ಒಳಹೊದ ಸ್ವಾತಿ ಕುಡಿಯಲು ನೀರು ತಂದುಕೊಟ್ಟಳು.ನೀರು ಕುಡಿಯುತ್ತಾ" ಯಾಕೆ ಏನಾಯಿತು ಹುಷಾರಿಲ್ವಾ ?
ಸ್ವಾತಿ” ಹಾಗೇನಿಲ್ಲ ಸ್ವಲ್ಪ ಜ್ವರ ಇದೆ ಅಷ್ಟೇ ಎಂದಳು
ಆನಂದ " ನಿನಗೆ ಜ್ವರ ಇದ್ರೂ ನಿನ್ನ ಯಜಮಾನ್ರು ಆಫೀಸಗೆ ರಜೆ ಮಾಡಲಿಲ್ಲವೇ ?
ಸ್ವಾತಿ ಉಂಗುಳು ನುಂಗುತ್ತಾ “ ರಜೆ ಹಾಕ್ತನೆ ಅಂದ್ರು ನಾನೇ ಬೇಡ ಅಂದೆ.
ಹಾಂ. ok. ಅಂದ ಹಾಗೆ ಅವರ ಹೆಸರೇನು ಅಂದೆ?
ತಡವರಿಸುತ್ತಾ ಹಾಂ ವಿವೇಕ್ ಅಂತ.
ಆನಂದ “ ಇವತ್ತು ಕೂಡಾ ಮಾಂಗಲ್ಯ ಹಾಕಿಕೊಳ್ಳಲು ನೆನಪಾಗಲಿಲ್ವೇನೋ?
ಸ್ವಾತಿ” ಛೇ ಛೇ ಹಾಕ್ಕೊಂಡಿದ್ದೆ ಈಗ ಬಂದು ಮುಖ ತೊಳೆಯಲು ಹೋದಾಗ ತೆಗೆದಿಟ್ಟೆ. ತಡಿ ಹಾಕ್ಕೊಂಡು
ಬರ್ತಿನಿ ಎಂದು ಒಳ ಹೋದ ಅವಳನ್ನು ಅವನು ಹಿಂಬಾಲಿಸಿದ್ದು ಅವಳಿಗೆ ತಿಳಿಯಲಿಲ್ಲ. ಒಳ ಹೋದ ಅವಳು ಆನಂದನ ಫೋಟೋ ಎದುರು ನಿಂತು ಅದರ ಮುಂದಿದ್ದ ಮಾಂಗಲ್ಯವನ್ನು ಕೊರಳಿಗೆ ಹಾಕಿಕೊಂಡು ಹಿಂತಿರುಗಿದಾಗ ಅಲ್ಲಿ ಆನಂದ ನಿಂತಿದ್ದನು . ಅವಳಿಗೆ ಏನೂ ಮಾಡಬೇಕೆಂದು ತೋಚದೆ, ತೊದಲು
ನುಡಿಗಳಿಂದ ಆದು..... ಆದು ಎಂದ ಆಕೆಯನ್ನು ತಡೆದ ಆನಂದ" ಬೇಡ ಸ್ವಾತಿ ಈಗಾಗಲೇ ಸುಳ್ಳಿನ ಮೇಲೆ ಸುಳ್ಳು ಹೇಳಿದ್ದು ಸಾಕು, ಇನ್ನು ಬೇಡ pls ಯಾಕೆ? ಯಾಕೆ
ಹೀಗೆ ಮಾಡಿದ್ದೀಯಾ? ನಾನು ನಿನ್ನೆ ಏನು ಮಾಡಿದ್ದೇ ? ನನ್ನ ಫೋಟೋ ಇಟ್ಗೊಂಡು ಪೂಜಿಸುವ ನೀನು ನನ್ನನ್ನು ಯಾಕೆ ದೂರ ಮಾಡ್ತಿದಿಯಾ ?
ಸ್ವಾತಿ "ನಾನು ಯಾರಿಗೂ ಏನೂ ಹೇಳಬೇಕಾಗಿಲ್ಲ. ನನ್ನಿಷ್ಟ ಹೇಗ್ ಬೇಕೋ ಹಾಗಿರ್ತೀನಿ.pls ಇಲ್ಲಿಂದ ಹೊರಟು ಹೋಗು ಎಂದು ಕೈ ಮುಗಿದಳು.
ಆನಂದ "ಮೊದ್ಲು ನನ್ ಪ್ರೆಶ್ನೆಗೆ ಉತ್ತರ ಕೊಡು.ಏನಾಗಿದೆ ನಿಂಗೆ? ಯಾಕೆ ಹೀಗೆ ಹೆತ್ತವರನ್ನು ಪ್ರೀತಿಸಿದವನನ್ನ ದೂರ ಮಾಡಿ ಇಲ್ಲಿ ಒಬ್ಬಂಟಿಯಾಗಿದ್ದೀಯಾ? ಇಷ್ಟೆಲ್ಲ ಕಷ್ಟ ಪಟ್ಟು ಯಾಕಿದಿಯ?
ತಿರುಗಿನಿಂತ ಸ್ವಾತಿಯ ಕಣ್ಣಿಂದ ಕಣ್ಣೀರು ಹರಿಯುತ್ತಿತ್ತೆ ವಿನಃ ಅವನಿಗೆ ಉತ್ತರಿಸಲೂ ಶಬ್ದಗಳಿರಲಿಲ್ಲ. ಆನಂದ ಅವಳ ಭುಜ ಹಿಡಿದು ಅವನೆಡೆಗೆ ತಿರುಗಿಸಿ"ಏನಗಿದ್ಯೋ ನನ್ನ ಮುದ್ದು. ಏನಾದ್ರು ಹೇಳೋ ನನ್ ಬಂಗಾರ.pls ನಂಗ್ ಹುಚ್ ಹಿಡಿತಿದೆ ಕಣೆ. ನನ್ ಕಣ್ಣಾರೆ ಇದನ್ನೆಲ್ಲ ನೋಡಿನೂ ಏನೂ ಅರ್ಥವಾಗದೆ ಇರೋಷ್ಟು ಮೂರ್ಖ ಅಂದ್ಕೊಂಡಿಯ ನನ್ನ. pls ಮುದ್ದು ಹೇಳೇ. pls ಕಣೆ.
"ನಾನು ಹೇಳ್ತನೆ * ಹಿಂದಿನಿಂದ ತನ್ನ ಅಮ್ಮನ ಸ್ವರ ಕೇಳಿ ಆನಂದ ಹಿಂತಿರುಗಿ ನೋಡಿದಾಗ ಅಲ್ಲಿ ಅವನ ಅಮ್ಮ ಹಾಗೂ ಗೆಳೆಯ ಪ್ರಕಾಶ ನಿಂತಿದ್ದರು.
ಆನಂದ * ಆಮ್ಮಾ ನೀನಾ" ?
ಆನಂದನನ್ನು ನೋಡಬೇಕೆನಿಸಿ ಪ್ರಕಾಶನ ಮನೆಗೆ ಬಂದ ಅಮ್ಮನಿಗೆ ಇಲ್ಲಿ ಆನಂದನಿಗೆ ಸ್ವಾತಿ ಸಿಕ್ಕಿದ ವಿಷಯ
ಪ್ರಕಾಶನಿಂದ ತಿಳಿಯಿತು. ಮಧ್ಯಾಹ್ನವಾದರೂ ಆನಂದ ಮನೆಗೆ ಬಾರದೇ ಇರುವುದನ್ನು ಗಮನಿಸಿದ ಪ್ರಕಾಶ
ಆನಂದನನ್ನು ಕರೆತರಲು ಹೊರಟನು. ಅವನು ಸ್ವಾತಿ ಮನೆಯಲ್ಲೇ ಇರಬೇಕೆಂದು ಊಹಿಸಿದ ಅವನ ತಾಯಿ
ಕೂಡಾ ಪ್ರಕಾಶನ ಜೊತೆ ಹೊರಟಿದ್ದರು. ಮನೆ ಹುಡುಕಿ ಹುಡುಕಿ ಇಲ್ಲಿಗೆ ಬಂದು ಸೇರಿದ್ದ ಅವರ ಊಹೆ ನಿಜವಾಯಿತ್ತು.
ಸ್ವಾತಿ..."ಅಮ್ಮಾ...."
ರಾಜಮ್ಮ ಅವಳನ್ನು ನೋಡಿ ಆನಂದನೆಡೆಗೆ ತಿರುಗಿ “ಇದೆಲ್ಲಾ ನನ್ನಿಂದಲೇ ಆಗಿದ್ದು, ನೀನು ಸ್ವಾತಿಯನ್ನು ಪ್ರೀತಿಸುವ ವಿಷಯ ತಿಳಿದು ನನಗೆ ಅಸಮಾಧಾನವಾಗಿತ್ತು. ಎಷ್ಟೆಷ್ಟೋ ಒಳ್ಳೆಸಂಬಂಧಗಳು ಬರುತ್ತಿರಬೇಕಾದರೆ ಇವಳನ್ನು ಅದೂ ನಮ್ಮ ಆಫೀಸಿನ ಒಬ್ಬ ಮಾಮೂಲಿ ನೌಕರನ ಮಗಳನ್ನು ನೀನು ಮದುವೆಯಾಗುವುದು ನನಗೆ ಬೇಡವೆನಿಸಿತ್ತು. ಅದಕ್ಕೆ ನೀನು ಅಮೇರಿಕಾಕ್ಕೆ ಹೋದಾಕ್ಷಣ ಸ್ವಾತಿಯನ್ನು ಕರೆಸಿ ನಿಮ್ಮಿಬ್ಬರ ಸಂಬಂಧದ ಬಗ್ಗೆ ವಿಚಾರಿಸಿದೆ. ನನ್ನ ಅನುಮಾನ ನಿಜವಾಯಿತ್ತು. ನೀನು ಬರುವ ಮುಂಚೆ ಅವಳು ಈ ಊರು ಬಿಟ್ಟು ಹೋಗದೇ ಇದ್ದರೆ, ಅವಳ ತಂದೆಯನ್ನು ಕೆಲಸದಿಂದ ತೆಗೆದು ಹಾಕುತ್ತೇನೆ ಎಂದು ಬೆದರಿಸಿದೆ.ಯಾರಿಗೂ ಹೇಳದೆ ಊರು ಬಿಟ್ಟರೆ ಅವಳ ಅಪ್ಪ ಅಮ್ಮನ ಪೂರ್ತಿ ಜವಾಬ್ದಾರಿ ನಾನೇ ತಗೋತಿನಿ ಅಂತ ಮಾತುಕೊಟ್ಟೆ. ಯಾವುದೇ ಕಾರಣಕ್ಕೂ ಪ್ರಾಣ ಹೋಗೋ ಸ್ಥಿತಿ ಬಂದರೂ ಈ ವಿಷಯ ಯಾರಿಗೂ ಮುಖ್ಯವಾಗಿ ನಿನಗೆ ಈ ವಿಷಯ ತಿಳಿಯ ಕೂಡದು ಎಂದು ಅವಳ ಹತ್ತಿರ ಮಾತು ತಗೊಂಡೆ. ಅವಳು ತಾನಾಗೇ ಬರೆದು ಕೊಟ್ಟ ಪತ್ರವನ್ನು ಓದಿ ನೀನು ಸ್ವಲ್ಪ ಸಮಯದಲ್ಲೇ ಸುಧಾರಿಸಿಕೊಳ್ಳುತ್ತಿಯಂತ ನಾನು ಅಂದುಕೊಂಡೆ. ಆದರೆ ಹಾಗಾಗಲಿಲ್ಲ ಅವಳನ್ನು ಮರೆಯಲಾರದೆ ಹುಚ್ಚನಂತಾಗಿದ್ದ ನಿನ್ನನ್ನು ನೋಡಿ ನನ್ನ ತಪ್ಪಿನ ಅರಿವಾಯಿತು. ಮತ್ತೆ ಅವಳನ್ನು ಹುಡುಕಿಸಿದೆ ಆದರೆ ಅವಳು ಸಿಗಲಿಲ್ಲ. ಇದನ್ನೆಲ್ಲಾ ಹೇಳಿದರೆ ಎಲ್ಲಿ ನೀನು ನನ್ನಿಂದ ದೂರಾಗ್ತಿಯೋ ಎಂದು ನಾನು ಇದನ್ನೆಲ್ಲ ನಿನ್ನಿಂದ ಮುಚ್ಚಿಟ್ಟೆ . ಆದರೆ ವಿಧಿ ಚಿತ್ತ ಬೇರೆಯೇ ಆಗಿತ್ತು.ಅವಳು ನಿಂಗೆ ಇಲ್ಲಿ ಸಿಕ್ಕಿದಳು. ನಾವೇಷ್ಟೇ ಅಂದುಕೊಂಡರೂ ಮೇಲಿನವನು ಆಡಿಸೋ ರೀತಿ ಬೇರೆಯೇ ಇರುತ್ತೆ ಅನ್ನೋದು ನಂಗೆ ಈಗ ಅರ್ಥವಾಯಿತು.
ಇದನ್ನೆಲ್ಲ ಕೇಳಿದ ಆನಂದ " ಅಮ್ಮ ನೀನು ಇಷ್ಟೊಂದು ನಿರ್ಹದಯಿಯಾದೆಯಾ ? ನಾನು ಪ್ರೀತಿಸಿದ್ದು ಅವಳನ್ನು ವಿನಃ ಅವಳ ಅಂತಸ್ಸನ್ನಲ್ಲಮ್ಮ. ದಯಬಿಟ್ಟು ನನ್ನ ಪ್ರೀತಿಗೆ ಅಡ್ಡ ಬರಬೇಡಮ್ಮ.
ರಾಜಮ್ಮ ಕಣ್ತುಂಬಿಕೊಳ್ಳುತ್ತ " ನಿನ್ನಿಷ್ಟದಂತೆ ಆಗಲಿ ಕಣೋ. ಸ್ವಾತಿ ನನ್ನ ಕ್ಷಮಿಸಿ ಬಿಡಮ್ಮ.ಅಂತಸ್ತಿನ ಅಮಲಿನಲ್ಲಿ ಒಳ್ಳೆದ್ಯಾವುದು ಕೆಟ್ಟದ್ಯಾವುದು ಅಂತ ಮರೆತುಬಿಟ್ಟಿದ್ದೆ. ಸೊಸೆಯಾಗಿ ಅಲ್ಲ ನನ್ನ ಮನೆಗೆ ಮಗಳಾಗಿ ಕಾಲಿಡಮ್ಮ ಎಂದು ತಬ್ಬಿಕೊಂಡರು.ಅಷ್ಟರಲ್ಲಿ ಪ್ರಕಾಶ ಸ್ವಾತಿಯ ತಂದೆ ತಾಯಿಗೆ ಫೋನ್ ಮಾಡಿ ಎಲ್ಲಾ
ವಿಷಯ ತಿಳಿಸಿದ್ದನು. ಮಗಳು ತಮಗೋಸ್ಕರ ಮಾಡಿದ ತ್ಯಾಗವನ್ನು ತಿಳಿದು ಹೆತ್ತ ಕರುಳು ನೊಂದಿತ್ತು. ಅವರು ಕೂಡ ಫೋನ್ ಮಾಡಿ ಮಗಳೇ ತಪ್ಪಾಯಿತಮ್ಮ. ಬೇಗನೆ ಊರಿಗೆ ಬಂದು ಬಿಡು ಎಂದರು.
ಅವರಿಬ್ಬರನ್ನೇ ಒಳಗೆ ಬಿಟ್ಟು ಎಲ್ಲರೂ ಹೊರಗೆ ಹೋದರು. ಕಳೆದ ಐದು ವರುಷಗಳಿಂದ ಅಗಲಿದ ಜೋಡಿ ಇಂದು ಇಲ್ಲಿ ಈ ಸ್ಥಿತಿಲಿ ಒಂದಾಗಿತ್ತು. ಇಬ್ಬರ ಕಣ್ಣಲ್ಲೂ ನೀರು. ನಿಜವಾಗ್ಲೂ ಇದೆಲ್ಲ ನಡೀತಿದೆಯ ಅನ್ನೋ ಭಾವ. ಕೊನೆಗೂ ಮೌನ ಮುರಿದ ಆನಂದ “ ಸ್ವಾತಿ ಇನ್ನಾದರೂ ನನ್ನ ಬಳಿ ಬರಬಾರದೆ? ಎಂದನು.ಆಕೆ ನಕ್ಕು ನೆಲ ನೋಡತೊಡಗಿದಳು.ಅವಳನ್ನು ತನ್ನೆಡೆಗೆ ಎಳೆದು ಕೊಳ್ಳುತ್ತಾ ಬಾರೆ ನನ್ನ ಅರಗಿಣಿ. ನೀನಿಲ್ದೆ ನಾನಿಲ್ವೆ ನನ್ನ ಮುದ್ದು. ಇನ್ಯಾವತ್ತು ನನ್ನ ಬಿಟ್ಟು ದೂರ ಹೋಗಬೇಡ ನನ್ನ ಬಂಗಾರ. ತುಂಬಾ ಕಷ್ಟ ಪಟ್ಟೇ ಅಲ್ವಾ. ಇವತ್ತಿಗೆ ಕೊನೆ.ಇನ್ಯಾವತ್ತು ನೀನು ಒಂಟಿ ಅಲ್ಲ ಎಂದನು. ಸ್ವಾತಿ ಸಂತೋಷದಿಂದ ತನ್ನಿನಿಯನ ಎದೆಗೊರಗಿದಳು. ಅಂದು ಹುಣ್ಣಿಮೆ. ಬಾನಲ್ಲಿ ಚಂದ್ರ ಕಂಗೊಳಿಸುತ್ತಿದ್ದ. ಇವರಿಬ್ಬರ ಬಾಳಲ್ಲೂ ಬೆಳದಿಂಗಳೂ ಮೂಡಿತ್ತು. ವಿಧಿ ಚಿತ್ತ ನೆರವೇರಿತ್ತು.
ನೀಮಾ ಲೊಬೋ