ವಿನೀತರು ಮತ್ತು ಸೊಕ್ಕುಳ್ಳವರು

ವಿನೀತರು ಮತ್ತು ಸೊಕ್ಕುಳ್ಳವರು

ಬರಹ

ನಿಮ್ಮದು ದೊಡ್ಡ ದೇಶ; ನೀವು ವಿನೀತರಾಗಿರಬೇಕು ಎಂದು ಮುಷರಫ್‍ರವರು ಈಚೆಗೆ ಭಾರತಕ್ಕೆ ಅಪ್ಪಣೆ ಕೊಡಿಸಿದ್ದಾರೆ
ಇದು ಒಂದು ನಿಯಮವನ್ನು ರೂಪಿಸುವಂಥದ್ದು. ಅಂದರೆ
೧. ಉಳ್ಳವರು
೨.ಮುಂದುವರೆದವರು
೩.ಅಭಿವೃದ್ಧಿಹೊಂದಿದ ರಾಷ್ರಗಳು
೪.ವಿಧ್ಯಾಭ್ಯಾಸ ಮಾಡಿದವರು
೫.ಬಹು ಸಂಖ್ಯಾತರು
೬.ಸಬಲರಾದ ಪುರುಷರು
ಇವರುಗಳು ಯಾವಾಗಲೂ ವಿನೀತರೂ, ಒಳ್ಳೆಯವರೂ, ಮೃದು ಸ್ವಭಾವದರೂ, ಸಹಿಷ್ಣುಗಳೂ, ಎಲ್ಲರ ಹೊಡೆತಕ್ಕೂ ತಲೆಕೊಡುವವರೂ, ಆಕಾಂಕ್ಷಾರಹಿತರು, ಹಾಳಾಗಿಹೋಗಲು ತಯಾರಿರುವರೂ, ಸುಳ್ಳಿನ ಪ್ರಚಾರವನ್ನೂ ಒಪ್ಪಿಕೊಂಡು ಕುಳಿತಿರುವವರೂ, ತಮ್ಮನ್ನು ಕಬಳಿಸಿದರೂ ಅದು ಸರಿ ಎನ್ನುವವರೂ ಆಗಿರಬೇಕು.

ಇದಕ್ಕೆ ಅನುಸಿದ್ಧಾಂತವೆಂಬಂತೆ ಯಾರು ಯಾರು ಸೊಕ್ಕಿನಿಂದ ಮತ್ತು ಕೊಬ್ಬಿನಿಂದ ವರ್ತಿಸಬಹುದು
೧. ಬಡವರು
೨. ಹಿಂದುಳಿದವರು
೩. ಹಿಂದುಳಿದ ರಾಷ್ರಗಳು
೪. ಅನಕ್ಷರಸ್ಥರು
೫.ಅಲ್ಪ ಸಂಖ್ಯಾತರು
೬.ಅಬಲೆಯರಾದ ಮಹಿಳೆಯರು.
ಇವರುಗಳು ತಮ್ಮ ಯಾವುದೋ ಒಂದು ಕೊರತೆಯನ್ನು ಮುಂದಿಟ್ಟುಕೊಂಡು ಎಲ್ಲ ಅನೀತಿ ಮಾರ್ಗ ಅನುಸರಿಸಲು ಇವರುಗಳಿಗೆ ಪರವಾನಿಗೆ ಇದೆಯೆಂದಾಯಿತೆ?