ವಿನೋದ ಕಥೆಗಳು

ವಿನೋದ ಕಥೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಸಂಗ್ರಹ : ವಿ.ರಾಮಚಂದ್ರ ಶಾಸ್ತ್ರಿ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ.೭೦.೦೦, ಮುದ್ರಣ: ೨೦೨೧

ನವಕರ್ನಾಟಕ ಪ್ರಕಾಶನ ಸಂಸ್ಥೆಯು ಹೊರತಂದಿರುವ ನವಕರ್ನಾಟಕ ಕಿರಿಯರ ಕಥಾ ಮಾಲೆಯ ಸರಣಿಯ ಪುಸ್ತಕವೇ 'ವಿನೋದ ಕಥೆಗಳು'. ಈ ಪುಸ್ತಕದಲ್ಲಿ ವಿವಿಧ ಲೇಖಕರ ಆಯ್ದ ಉತ್ತಮ ಕಥೆಗಳನ್ನು ಆರಿಸಿ ಪ್ರಕಟ ಮಾಡಿದ್ದಾರೆ. ಮಕ್ಕಳಿಗೆ ಓದಲು ಹಾಗೂ ಓದಿ ಹೇಳಲು ಅನುಕೂಲಕರವಾದ ಪುಸ್ತಕ ಇದು. ಈಗಾಗಲೇ ೧೧ ಮುದ್ರಣಗಳನ್ನು ಕಂಡಿದೆ. 

ಪ್ರಕಾಶನದ ಪರವಾಗಿ ಆರ್ ಎಸ್ ರಾಜಾರಾಮ್ ಅವರು ತಮ್ಮ ನುಡಿಯಲ್ಲಿ " ಮಕ್ಕಳ ಓದುವ ಅಭಿರುಚಿಗೆ ಸಹಾಯಕವಾಗುವ ಉದ್ದೇಶದಿಂದ ಪ್ರಕಟವಾಗುತ್ತಿರುವ 'ವಿನೋದ ಕಥೆಗಳು' ಒಂದು ವಿಶಿಷ್ಟ ಕಥಾಸಂಕಲನ. ಮಕ್ಕಳಿಗೆ ಹೆಚ್ಚು ಪ್ರಿಯವಾಗುವ, ಸರಳ ಶೈಲಿಯ ಕಥೆಗಳು ಇಲ್ಲಿವೆ. ಗಂಭೀರ ವಾತಾವರಣವನ್ನು ತಿಳಿಗೊಳಿಸುವ ನಕ್ಕು ನಲಿಯುವಂತೆ ಮಾಡುವ ವಿನೋದದ ಮೂಲಕ ಒಳ್ಳೆಯ ವಿಚಾರವನ್ನು ಹೇಳಿಕೊಡುವ ಕಥೆಗಳಿವು. ಚಿತ್ರಕಾರ ಹರಿಣಿಯವರು ಈ ಕಥೆಗಳಿಗೆ ಸೂಕ್ತ ಚಿತ್ರಗಳನ್ನು ಬಿಡಿಸಿ, ವಿನೋದದ ಸೊಗಸನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

'ಕಿವುಡ ಕೆಂಚ' ಕಥೆಯಲ್ಲಿ ಕೆಲಸಗಾರ, ಯಜಮಾನ ಇಬ್ಬರೂ ಕಿವುಡರಾದರೆ ಹೇಗಿರುತ್ತದೆ, 'ಕೃಪಣ ಪಂಡಿತ'ದಲ್ಲಿ ನಗು ಮನಸ್ಸನ್ನು ಹಗುರಗೊಳಿಸುವುದಲ್ಲದೇ ಅದು ಮನಸ್ಸಿನ ಕೊಳೆಯನ್ನು ತೊಳೆಯುತ್ತದೆ ಎನ್ನುವ ದೊಡ್ದ ಸತ್ಯವನ್ನು ತಿಳಿಯಬಹುದು. ಹೀಗೆಯೇ, 'ಪಂದ್ಯದ ಪದ್ಮಕ್ಕ, ಪುಟ್ಟಿಗೊಂದು ಪಾಪು, ಚಿನ್ನದಂತಹ ಚಿನ್ನಪ್ಪ, ಅತ್ತೆ-ಅಳಿಯರ ಕಥೆ, ಶ್ರಮದ ಕೆಲಸ, ಹೆಬ್ಬಂಡೆಗೆ ಸುಣ್ಣ ಬಳಿದಂತೆ ಇನ್ನೂ ಇನ್ನೂ ಕಥೆಗಳಿವೆ. ನೀವೇ ಆನಂದಿಸಿ.

ಇಲ್ಲಿರುವ ಕಥೆಗಳನ್ನು ನವಗಿರಿನಂದ, ನೀಲಾಂಬರಿ, ಪಳಕಳ ಸೀತಾರಾಮ ಭಟ್ಟ, ಮತ್ತೂರು ಸುಬ್ಬಣ್ಣ, ಪ ರಾಮಕೃಷ್ಣ ಶಾಸ್ತ್ರಿ, ಪಾರ್ವತಮ್ಮ ಮಹಾಲಿಂಗ ಭಟ್ಟ, ಬಿ ಕೆ ತಿರುಮಲಮ್ಮ, ಬೇಬಿ ಎಮ್. ಮಾಣಿಯಾಟ್ ಇವರುಗಳ ಕಥೆಗಳಿವೆ." ಎಂದು ವಿವರಣೆ ನೀಡಿದ್ದಾರೆ. ಸುಮಾರು ೧೨೫ ಪುಟಗಳ ಪುಟ್ಟ ಪುಸ್ತಕದ ಕಥೆಗಳು ಸೊಗಸಾಗಿವೆ ಮತ್ತು ಪುಟ್ಟದ್ದಾಗಿವೆ.