ವಿಮಾನ ಆಸುಪಾಸು...

ವಿಮಾನ ಆಸುಪಾಸು...

ಬರಹ

ನಾಗರೀಕತೆ ಅರಣ್ಯಗಳನ್ನು ಹಿಮ್ಮೆಟ್ಟಿಸುತ್ತವೆ ಎಂಬುದು ಹಳೆಯ ಕಲ್ಪನೆ ಅಥವಾ ಮಾತು. ಆದರೀಗ ಇದನ್ನು ಪುನಾರವಲೋಕಿಸಬೇಕಿದೆ. ಜನರಿಗೆ, ಸರ್ಕಾರ ಅಥವಾ ಸಮಾಜ ಅಭಿವ್‌ಋದ್ದಿ ಎಂಬ ವಿಶ್ಲೇಷಣೆ ತಪ್ಪು ನೀಡಿರಬಹುದೇ? ಅಥವಾ ಸಾಕ್ಷರತೆಯ ಪ್ರಮಾಣದ ಕೊರತೆಯ ಎಂಬುದು ಸ್ಪಷ್ಟವಾಗಬೇಕಿದೆ. ಅಭಿವ್‌ಋದ್ದಿ ಅಂದರೆ ರಸ್ತೆ ನಿರ್ಮಾಣ, ಪಾಶ್ಚಾತೀಕರಣ, ನಗರೀಕರಣ ಹಾಗೂ ಮಾತಿನ ಶೈಲಿ ಆಹಾರ ಬಟ್ಟೆಯ ಶೈಲಿ ಬದಲಾಯಿತೆಂದರೆ ಅದೇ ಅಬಿವ್‌ಋದ್ದಿ ಎನ್ನುವ ಹಂತಕ್ಕೆ ಬಂದಿದ್ದಾರೆ.

ನಿಜವಾಗಲೂ ಇಂದಿನ ಜನತೆ ತಿಳಿಯಬೇಕಿದೆ. ಅಭಿವ್‌ಋದ್ದಿ ಹೆಸರಲ್ಲಿ ಶನಿ ನಮ್ಮ ಹೆಗಲೇರಿ ಆಸೀನನಾಗಿದ್ದಾನೆಂಬುದು. ಏಕೆಂದರೆ ಬೆಂಗಳೂರಿಗೆ ೩೫ ಕಿಮೀ ದೂರದಲ್ಲಿರುವ ದೇವನಹಳ್ಳಿ ಸುತ್ತು ಬಂದರೆ ಇದಕ್ಕೆ ಅರ್ಥಸಿಗಬಹುದು. ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗುತ್ತೆ ಎಂದು ೨ ದಶಕಗಳಿಂದ ಕೇಳಿ ಬಂದ ಸುದ್ದಿ ನಿಜವಾಗಿದೆ.
ಇದರಿಂದ ಈ ಭಾಗಕ್ಕೆ ಆದ ಅನುಕೂಲಗಳೇನು ಎಂಬುದಕ್ಕೆ ಉತ್ತರ ಮಾತ್ರ ತನಿಖೆಯಲ್ಲಿದೆನ್ನಬಹುದು. ಕ್‌ಋಷಿ ಭೂಮಿಯಲ್ಲಿ ಬಡಾವಣೆಗಳು ನಿರ್ಮಾಣಗೊಂಡಿವೆ. ತಾರಸಿ ಮನೆಗಳು ಪ್‌ಐಪೋಟಿಗಿಳಿದಿವೆ. ಪಬ್‌ ಬಾರ್‍, ಹೋಟೆಲ್‌ ರೆಸ್ಟೋರೆಂಟ್‌ಗಳು ಸಮ್‌ಋದ್ದವಾಗುವತ್ತ ನಡೆದಿವೆ. ಸಿಲ್ಕ್ ಆಂಡ್ ಮಿಲ್ಕ್ ಎಂಬುದಕ್ಕೆ ಹೆಸರಾಗಿದ್ದ ಟಿಪ್ಪು ಹುಟ್ಟೂರು ಇಂದು ಅತ್ಯದಿಕ ಹಾಲ್ಕೋಹಾಲ್ ಪ್ರಿಯರ ತವರಾಗಿ ಮಾರ್ಪಟ್ಟಿದೆ.
ಎತ್ತುಗಳಿಗೆ ನೊಗ ಹೊರಸಿ ನೇಗಿಲು ಹಿಡಿಯುವ ನೇಗಿಲಯೋಗಿ ಈಗ ಕಾಣಸಿಗಲ್ಲ. ಹೆಂಚಿನ ಮನೆಗಳು ಕರಗಿ ಅಲ್ಲಿ ತಾರಸಿ ಮನೆಗಳು ಸೆಟೆದು ನಿಂತಿವೆ. ಅದೇ ರೈತನೀಗ ಸಿಟ್ಟಿಂಗ್, ಡೀಲಿಂಗ್ ಹಾಗೂ ಲಿಂಗೋ ಭಾಷೆಯಲ್ಲಿ ಮಾತನಾಡಲು ಶುರು ಮಾಡಿದ್ದಾನೆ. ಆಂದರೆ ಅರ್ಥಾತ್ ಬ್ರೋಕರ್‍ ಅಲಿಯಾಸ್ ದಲ್ಲಾಳಿ. ಮಳೆ ಬೆಳೆ ಎನ್ನುತ್ತಿದ್ದ ರೈರನ ಮನೆ ಮುಂದೆ ದನಕರುಗಳಾಗಲಿ, ನೇಗಿಲು, ಎತ್ತು ಗಾಡಿಯಾಗಲಿ ಅಷ್ಟೇಕೆ ಕಟ್ಟಿಗೆ ಒಲೆ ಕೂಡ ನಾಪತ್ತೆಯಾಗಿದೆ. ದನಕರುಗಳನ್ನು ಕಟ್ಟುವ ಸ್ಥಳವನ್ನು ಸ್ಕ್ರಾಪಿಯೋ ಕಾರು ಆಕ್ರಮಿಸಿದೆ. ನವೀನ ಕಾರು, ಮಸಿ ಕಾಣದ, ಕೆಸರಾಗದ ಬಟ್ಟೆ ದೇಹ ಕಾಣಸಿಗಲ್ಲ. ಆ ದೇಹಗಳ ಮೇಲೆ ಗ್ರಾಂಗಟ್ಟಲೆ ಚಿನ್ನಾಭರಣ ಹೀಗೆ ಒಂದೇ ಎರಡೆ? ಗಂಡಸರಂತೂ ರಾತ್ರಿ ಸಮಯದಲ್ಲಿ ಗುಂಡು ಪಾರ್ಟಿ ಹಾಗೂ ಬಾಡೂಟುಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಈ ಸನ್ನಿವೇಷ ಅಲ್ಲಿನ ಎಲ್ಲಾ ಜನರಿಲ್ಲದಿದ್ದರೂ ಕೇವಲ ೨ ಹೆಕ್ಟೇರ್‍ ಜಮೀನುಳ್ಳವರ ಕತೆಯೂ ಇದಾಗಿರುವುದಂತೂ ಸತ್ಯ.
ಒಂದೆಕೆರೆ ಜಮೀನು ೩-೪ ಕೋಟಿ ರೂಪಾಯಿ ಬಾಳುತ್ತಿದೆ. ಗುಂಟೆಗಳ ಲೆಕ್ಕಾಚಾರದಲ್ಲಿದ್ದ ಜಮೀನಿಗೆ ಈಗ ಸಾವಿರ ಲಕ್ಷಗಳೆಂಬುದಕ್ಕೆ ಲಕ್ಷ್ಯವೇ ಕೊಡುತ್ತಿಲ್ಲ. ಈ ಭಾಗದ ಅನೇಕ ಜನರು. ಇಲ್ಲೇನಿದ್ದರೂ ಕೋಟಿಗಳೆಂಬ ಜಿಜ್ಞಾಸೆಯಲ್ಲಿ ಇಲ್ಲಿನ ಜನತೆ ನಮ್ಮ ಜನ ಪಿತಾಮಹರ(ಕೋತಿ) ಗುಣಗಳನ್ನು ಬಿಡುತ್ತಿಲ್ಲ.
ಕ್‌ಋಷಿಬೂಮಿ ಕತೆ ಇದಾದರೆ, ಇಲ್ಲಿಗೆ ಸಮೀಪವಿರುವ ನಂದಿ ಗಿರಿಧಾಮ ಹಾಗೂ ಅರ್ಕಾವತಿ ನದಿಗಳ ಉಗಮ ಸ್ಥಾನವಾದ ನಂದಿ ಬೆಟ್ಟಕ್ಕೆ ಸಂಚಾಕಾರ ಕಟ್ಟಿಟ್ಟ ಬುತ್ತಿಯಾಗಿದೆ. ಈ ಗಿರಿಧಾಮದ ಹೋರಾಟಕ್ಕೆ ಇಂದಲ್ಲ ನಾಳೆ ಇಲ್ಲಿನ ಪ್ರಜ್ಞಾವಂತ ಜನತೆ ಮುಂದಾದರೆ ಆಶ್ಚರ್ಯ ಪಡಬೇಕಿಲ್ಲ. ಈಗಾಗಲೇ ಅರ್ಕಾವತಿ ಹೋರಾಟ ಸಮಿತಿ ಆಗಾಗ ಕಂಪಿಸುತ್ತಿದ್ದಾರೆ.
"ನಿಧಿ ಇದ್ದರೂ ವಿಧಾನ ಬೇಕು, ಕಸ ತಿನ್ನೋಕಿಂತ ತುಸು ತಿನ್ನೋದು ಲೇಸು, ಹಾಲು ಉಕ್ಕಿದ್ದಷ್ಟು ಒಲೆ ಪಾಲು" ಈ ಮೇಲಿನ ಮಾತುಗಳು ಈ ಭಾಗದ ಜನರು ಅಥೈಸಲು ಮುಂದಾಗಬೇಕಿದೆ. ಮನಗಾಣ ಬೇಕಿದೆ. ಇದರಿಂದಾದರು ಹಣ, ಅಂತಸ್ತು ಹಾಗೂ ವ್ಯಾಮೋಹ ಎಂಬ ಜಂಡು ಮೋಹಗಳಿಗೆ ಜನರು ಮರುಳಾಗದೆ ವಾಸ್ತವದತ್ತ ಕಣ್ಣರಳಿಸಬೇಕಿದೆ. ಈ ದಿಸೆಯಲ್ಲಿ ಯೋಚಿಸುವ ಮನಸ್ಸುಗಳಿಗೆ ಟಾನಿಕ್ ನಮ್ಮಿಂದ ಸಾಧ್ಯವೇ ಎಂಬುದು ನಮ್ಮ ಮುಂದಿರುವ ಪ್ರೆಶ್ನೆ ಅಲ್ಲವೇ...
-ಬಾಲರಾಜ್ ಡಿ.ಕೆ