ವಿರಹದಲಿಮನ
ಬರಹ
ನೀನಿಲ್ಲದೆ ಅನುದಿನ ವಿರಹ ಎನ್ನತುಂಬ
ನಿನ್ನ ಮುಗ್ದಮೊಗವೇ ನೀರಲ್ಲರಳಿದ ನಳಿನಬಿಂಬ
ಪ್ರತಿ ಇರುಳು ಕಾಡುತಿಹುದು ಮೌನ
ಮನಮಾಡುತಿಹುದು ನಿನ್ನ ಹೆಸರದ್ಯಾನ
ಯಾರೇ ಅಡ್ಡಿಮಾಡಲಿ ಯಾವುದೇ ಕಷ್ಟಬರಲಿ
ನಿನ್ನಲಿಗೆ ಬರುವೆ ಎಲ್ಲವ ತೂರಿ ಗಾಳಿಗೆ
ತಾರೆಗಳು ನಗುತಿವೆ ಶಶಿಯಕಂಡು
ಶ್ರಾವಣದ ಇರುಳಚಳಿಗೆ ಇಟ್ಟಿರುವೆ ನೀನಿತ್ತ ಮುತ್ತ
ಕವನದಲ್ಲಿ ಬರೆಯಲಾರೆ ಎನ್ನ ಮನದ ಉತ್ತರ
ನನ್ನವಳೆ ಇಲ್ಲಿ ತಾರೆ ನಿನ್ನ ಅದರ ಹತಿರ
ನಿನ್ನ ನಯನ ದರ್ಪಣದಿ ಮರೆವೆ ಮನದ ಎಲ್ಲ ನೋವನು
ಹೂಬಳ್ಳಿಯಂತೆ ಬಳುಕೊ ನಡುವ ಕುರಿತು ಕವನ ಕೊರೆವೆನು
ಸಂಜೆ ಕೆಂಪು ಪ್ರೀತಿಗೆ ದ್ಯೋತಕ ವಾಗಿದೆ
ಹರಿವ ನೀರು ಶೃಂಗಾರಕ್ಕೆ ದ್ಯೋತಕ ವಾಗಿದೆ
ಕವನ ಕನಸಿನಾಚೆಗೂ ನಿನ್ನ ಪ್ರೀತಿ
ಅಚ್ಚಳಿಯದೆ ಉಳಿವುದು ಓಲವರೀತಿ
ನೋವನುಂಗಿ ಬದುಕೆ ಬಾಳೆ ಹೂವಮಲ್ಲಿಗೆ
ಕಾಡದಿರು ಇನ್ನ ಮುಂದಾದರೂ ನೀ ಬಾಮೆಲ್ಲಗೆ
ಅರಳಿ ಕಂಪಸೂಸೋ ಸಂಜೆ ಮಲ್ಲಿಗೆ
-ಕೃಷ್ಣಮೊರ್ತಿಅಜ್ಜಹಳ್ಳಿ ಬಿ ಎಂ ಎಸ್ ಸಿ ಇ