ವಿರಹದ ಗುಟ್ಟು ..... !!!

ವಿರಹದ ಗುಟ್ಟು ..... !!!

ಕವನ

 

ರವಿಎತ್ತ ಸಾಗಿಹನೋ ಭುವಿಯನ್ನು ಬಿಟ್ಟು..

ದೇಹವೇ ಕಂಪಿಸಿದೆ ಮುಂಜಾವಿನ ಹೊತ್ತು..

ಮನವಿಲ್ಲ ಬಿಟ್ಟೇಳಲು ಹೊದಿಕೆಗಳ ಕಟ್ಟು...

ಹುಡುಕಲು ಕಾರಣವ , ನಲ್ಲೆಯ ವಿರಹವೇ ಗುಟ್ಟು...!!!!

 

ಮಾಗಿಯಾ ಆರ್ಭಟಕೆ  ಸೃಷ್ಟಿಯೇ ಮಂದ...

ಮೈಮನವ ಪಸರಿಸಿದೆ ಅವಳದೇ ಗಂಧ..

ಇವರೀರ್ವರ ನಡುವೆ ನಾನಿಂದು ಬಂಧ..

ಹೇಗೆಂದು ಬಣ್ಣಿಸಲಿ ನನ್ನವಳ ಅಂದ....!!!!

 

 ಬೆಂಕಿಯಲಿ ಬೆಂದರೂ ನಿಲ್ಲದಾ ನಡುಕ..

ಭೂತಾಯಿ ನಗುತಿಹಳು ಮಾಡೆನ್ನ ಅಣಕ..

ಚೆಲುವೆಯಾ ಎದೆಯಲ್ಲಿ ನನಗಿಲ್ಲ ಮರುಕ..

ಎಂದು ಕಳೆಯುವುದೋ ಈ ನನ್ನ ಕಂಟಕ....!!!!

Comments