ವಿರಹವೂ ಅಲ್ಲ. ಪ್ರೇಮವೂ ಅಲ್ಲ ಇದೇನೋ ಹೊಸ ಭಾವ...

ವಿರಹವೂ ಅಲ್ಲ. ಪ್ರೇಮವೂ ಅಲ್ಲ ಇದೇನೋ ಹೊಸ ಭಾವ...

ಅವಳು... ಯಾರು ಬೇಕಾದರೂ ಆಗಬಹುದು. ಇಂಗ್ಲೀಷ್ ನಲ್ಲಿ she ಅಂತೀವಲ್ಲ. ಹಾಗೆ ಕನ್ನಡದಲ್ಲಿ. ಈಕೆಯನ್ನ ಹುಡುಕುತ್ತ ಹೋದಾಗ, ಸಿಗೋ ಜಾಯಮಾನ ಕಂಡಿತ ಇರಲಿಲ್ಲ. ಕಣ್ಣಿಗೆ ಬೀಳೋರೆಲ್ಲ `ನನ್ನವಳೇ' ಅನಿಸೋರು. ಆದರೆ, ಲೈಫ್ ಹಾಗೆ ಅಲ್ಲವೇ ಅಲ್ಲ. ಯಾರನ್ನೋ ಎಲ್ಲೋ ಜೋಡಿ ಮಾಡಿ ಇಟ್ಟಿರುತ್ತದೆ ಅಂತಾರೆ. ಅದು ದೇವರೂ ಅನ್ನೋರಿದ್ದಾರೆ. ನನ್ನಗೆ ಗೊತ್ತಿಲ್ಲ. ನನಗೆ ಜೋಡಿ ಮಾಡಿರೋ ಹುಡುಗಿ ದೇವರಿಂದ ಸಿಕ್ಕಳೋ. ನನ್ನ ಟೈಮ್ ನೆಟ್ಟಗಿತ್ತೋ ತಿಳಿಯುತ್ತಿಲ್ಲ. ನಮ್ಮ ನಡುವೆ ಅದೇನೂ ಸೆಳೆತ ಇರಲಿಲ್ಲ. ಪ್ರೀತಿ ಮೊದಲೇ ಇರಲಿಲ್ಲ. ಪ್ರೀತಿಗೆ ಸೌಂದರ್ಯದ ಇನ್ವಿಟೇಷನ್ ಬೇಕಂತೆ. ನನ್ನವಳಲ್ಲಿ ಕಂಡತ ಅದು ಇರಲೇ ಇಲ್ಲ. ಅರ್ಧ ಸಿಟಿ. ಇನ್ನರ್ಧ ಗ್ರಾಮ. ಅಂತ ಏರಿಯಾದಲ್ಲಿ ಬೆಳದವಳು ನನ್ನವಳು. ಆದರೆ, ಕಳೆದ 20 ದಿನದಿಂದ ಒಂಟಿಯಾಗಿದ್ದೇನೆ.ಅವಳಿಲ್ಲದೇ..

 

ತುಂಬಾ ಕಷ್ಟ ಅಗುತ್ತಿದೆ. ಮಾತು ಮರೆತು ಹೋಗುತ್ತಿವೆ. ಮೌನ ಆವರಿಸಿಕೊಂಡು ಒಂಟಿತನ ಕಾಡುತ್ತಿದೆ. ಮನೆಗೆ ಬಂದರೇ, ಅವಳದೇ ನೆನಪು. ಅವಳಿಲ್ಲದೇ ಇರೋದು ಹೇಗೆಂಬ ಪ್ರಶ್ನೆ. ಎಲ್ಲ ಪ್ರಶ್ನೆಗಳನ್ನ ದಾಟಿ ಹೊರಗೆ ಬರೋನ ಎಂದ್ರೇ, ಅವಳದೇ ಮಾತುಗಳ ಸುಳಿ. ಸಾಯಲಿ. ಕೆಲಸದಲ್ಲಿ ಮರೆಯೋನ ಅಂದ್ರೆ, ಎಲೆಕ್ಷನ್ ಬೇರೆ. ಸಿನಿಮಾದವರಿಗೆ ನೋ ಕೆಲಸ. ಮಾಡಿದ್ದು ಉಣ್ಣೊ ಮಾರಾಯ ಅನ್ನೋ ಹಾಗೆ, ಖಾಲಿ ಕುಳಿತು ಹಾಡುಗಳನ್ನೇ ಕೇಳೋದು. ಮೊದಲೇ ನಮಗೆ ಲವ್ ನೆತ್ತಿಗೇರಿದೆ.ಹಾಗಾಗಿ, ಕೇಳೋ ಹಾಡುಗಳೂ ವಿರಹ ವೇದನೆಯ ಗೀತೆಗಳೇ. ಇಲ್ಲ ಪ್ರೇಮ ನಿವೇದನೆಯ ಹಾಡುಗಳು. ಇನ್ನೇನೂ ಕೇಳಬೇಕು. ಲವ್ ಗೆ..ಲವ್ವೇ ಕಿಕ್ ಕೊಡ್ತಾಯಿದೆ. 

ನಮ್ಮ ಹುಡುಗಿ ಅಣ್ಣನ ಮದುವೆ. ಆಕೆ ಅಲ್ಲಿಗೆ ಹೋಗಿದ್ದಾಳೆ. ನಾವು ಇಲ್ಲಿ ಹರಾ..ಶಿವಾ ಅಂತ ಜಪ ಮಾಡೋ ಪರಸ್ಥಿತಿ. ಗೆಳಯರು ಇದ್ದಾರೆ. ಒಬ್ಬಳೇ ಗುಡ್ ಫ್ರೆಂಡ್. ಇವರೆಲ್ಲರನ್ನ ಬಿಟ್ಟರೇ, ಅವಳೇ ನನಗೆ. ಅದಕ್ಕೇ ಒಂಟಿ ತನ ಗುಮ್ಮುತ್ತಿ. ಯಾರ ಜೊತೆಗೆ ಮಾತನಾಡೋದು ಕಷ್ಟ. ಇಂಟ್ರೋವರ್ಟ್ ಅನ್ನೋ ಬ್ರ್ಯಾಂಡ್ ಬೇರೆ. ಅದನ್ನ ಹೊಡೆದು ಹಾಕಿ, ಮಾತಿಗೆ ಕುಳಿತರೇ, ನನ್ನ ಮಾತಿನ ಬಗ್ಗೆ ನನಗೆ ಭಯ. ಮಾತು ಒರಟು. ಮನಸ್ಸು ಮೃದು. ಯಾರಿಗೆ ಅರ್ಥ ಆಗಬೇಕು. ನಾನು ಆಡಿದ ಮಾತು ನನ್ನಗೆ ನೋವು ಕೊಡುತ್ತವೆ.

ವಿರಹ ವೇದನೆ ಇಲ್ಲ. ಒಳ್ಳೆಯದು. ಮನ್ಯುಷ್ಯ ಸಜಹ ಆಕರ್ಷಣೆ ಇದೆ. ಅದನ್ನ ಬೇರೆ ಜಾಗದಲ್ಲಿ ಬಳಸೋ ಆಸೆ ಇಲ್ಲ. ಅವಳಿಗೂ ಅದು ಸುತಾರಾಮ ಇಷ್ಟ ಇಲ್ಲ. ನಿನ್ನೆ ಹೀಗೆ ಅವಳೊಟ್ಟಿಗೆ ಚಾಟ್ ಮಾಡುತ್ತಿದೆ ಫೋನ್ ನಲ್ಲಿ. ಏನೋ ಮನಸ್ಸಿಗೆ ತುಂಬಾ ಬೇಜಾರು. ಪರೋಕ್ಷವಾಗಿ, ನನ್ನ ಫ್ರೆಂಡ್ ಬುದ್ದಿ ಹೇಳೋ ಕೆಲಸ ಮಾಡಿದ್ರು. ನಾನೇ ಮಾಡಿದ ತಪ್ಪಿಗೆ. ಅದನ್ನ ಹಂಚಿಕೊಂಡೆ ನನ್ನ ಹುಡುಗಿ ಜೊತೆಗೆ.  ಅಷ್ಟೆ. ಅಲ್ಲಿಂದ ಆಳವಾದ ಭಾವಗಳು ಅಕ್ಷರವಾದವು. ನೋವು ವಿಸ್ತಾರವಾಯಿತು. ಅವಳ ಸಾಂತ್ವನದಿಂದ ಮನಸ್ಸು ಹಗುರವಾಯಿತು. ಅವಳೇ ತುಂಬಿ ಕೊಂಡಳು. ಬೆಳಗ್ಗೆ ಫೋನೇ ಮಾಡಿದೆ. ಅವಳು ಫುಲ ಬ್ಯೂಜಿ. ಮಾತಿಗ ಅಲ್ಲ. ಎಸ್.ಎಂ.ಎಸ್ ಗೂ ಸಿಗಲಿಲ್ಲ. ರಾತ್ರ್ರಿ ಆಡಿದ ಮಾತುಗಳು ಬೆಳಗ್ಗೆ ಕನಸ್ಸಾಗಿ ಕಳೆದು ಹೋದುವು. ಅವಳು ಇನ್ನೂ ಊರಲ್ಲಿಯೇ ಇದ್ದಾಳೆ. ನಾನು ಅವಳ ಬರುವಿಕೆಗೆ ಕಾಯುತ್ತಿದ್ದೇನೆ. 

-ರೇವನ್ ಪಿ.ಜೇವೂರ್