ವಿವೇಕಾನಂದರ ಸಮಯ ಸ್ಪೂರ್ತಿ!

ವಿವೇಕಾನಂದರ ಸಮಯ ಸ್ಪೂರ್ತಿ!

ಒಮ್ಮೆ ಸ್ವಾಮಿ ವಿವೇಕಾನಂದರು ವಿಶ್ವವಿಖ್ಯಾತರಾದ ಮೇಲೆ ಅಂದರೆ ಸರ್ವಧರ್ಮ ಸಮ್ಮೇಳನದಲ್ಲಿ ದಿಗ್ವಿಯವನ್ನು ಸಾಧಿಸಿದ ಮೇಲೆ ಅಮೇರಿಕದ ಹಲವಾರು ಪ್ರಸಿದ್ಧ ವ್ಯಕ್ತಿಗಳು ಮತ್ತು ಚರ್ಚುಗಳನ್ನು ಸಂದರ್ಶಿಸಿದರಂತೆ. ಆಗ ಒಂದು ಕಡೆ ವಿಶ್ವದ ಎಲ್ಲಾ ಧಾರ್ಮಿಕ ಪುಸ್ತಕಗಳನ್ನು ಶೇಖರಿಸಿ ಇಡಲಾಗಿತ್ತಂತೆ. ಅದರಲ್ಲಿ ಭಾರತೀಯರನ್ನು ಅವಮಾನ ಪಡಿಸಲೆಂದು ಹಿಂದೂಗಳ ಅತ್ಯಂತ ಪವಿತ್ರ ಗ್ರಂಥವಾದ ಭಗವದ್ಗೀತೆಯನ್ನು ಎಲ್ಲಾ ಪುಸ್ತಕಗಳ ಕೆಳಗೆ ಜೋಡಿಸಿಟ್ಟಿದ್ದರು. ಒಬ್ಬ ಪಾದ್ರಿ ಅದನ್ನು ವಿವೇಕಾನಂದರಿಗೆ ತೋರಿಸುತ್ತಾ ನೋಡಿ ನಿಮ್ಮ ಹಿಂದೂ ಧರ್ಮದ ಪರಿಸ್ಥಿತಿ ಏನಾಗಿದೆ ಎಂದು ವ್ಯಂಗ್ಯವಾಗಿ ನುಡಿದನಂತೆ. ಆಗ ಸ್ವಾಮಿ ವಿವೇಕಾನಂದರು ಸ್ವಲ್ಪವೂ ವಿಚಲಿತಗೊಳ್ಳದೆ, "A Good Foundation" ಎಂದರಂತೆ, ಆಗ ಸಹಜವಾಗಿ ಆ ಪಾದ್ರಿಯ ಮುಖ "ಇಂಗು ತಿಂದ ಮಂಗನಂತಾಯಿತು"

Comments