ವಿಶ್ವಕಪ್ ಫುಟ್ಬಾಲ್ : ಇದುವರೆಗಿನ ಪಂದ್ಯಗಳ ಸಮೀಕ್ಷೆ

ವಿಶ್ವಕಪ್ ಫುಟ್ಬಾಲ್ : ಇದುವರೆಗಿನ ಪಂದ್ಯಗಳ ಸಮೀಕ್ಷೆ

ಬರಹ

  ಪ್ರಸಕ್ತ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಇದುವರೆಗೂ ೧೧ ಪಂದ್ಯಗಳು ನಡೆದಿದ್ದು ಆ ಪೈಕಿ ಏಳು ಪಂದ್ಯಗಳು ಅಚ್ಚರಿಯ ಫಲಿತಾಂಶ ತಂದಿತ್ತಿವೆ. ೧೧ ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳು ಡ್ರಾ ಆಗಿವೆ. ಈ ಅಚ್ಚರಿ ಹೀಗೇ ಮುಂದುವರಿದರೆ, ತಜ್ಞರ ಲೆಕ್ಕಾಚಾರಗಳನ್ನೆಲ್ಲ ಮೀರಿ ಅನಿರೀಕ್ಷಿತ ತಂಡಗಳು ಈ ಸಲ ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಾಕೌಟ್ ಹಂತ ಪ್ರವೇಶಿಸುತ್ತವೆ.
  ಪ್ರಬಲ-ದುರ್ಬಲ ತಂಡಗಳ ನಡುವೆ ಈ ಸಲ ನಡೆಯುತ್ತಿರುವ ಸಮಬಲದ ಹೋರಾಟಕ್ಕೆ ಪ್ರಮುಖ ಕಾರಣ ದುರ್ಬಲ ತಂಡಗಳು ರೂಪಿಸಿಕೊಂಡಿರುವ ಆಕ್ರಮಣಕಾರಿ ಆಟ. ಆಕ್ರಮಣದ ಜೊತೆಗೆ ಹೊಂದಾಣಿಕೆ ಮತ್ತು ತಂತ್ರಗಾರಿಕೆಯೂ ಇದ್ದರೆ ಗೆಲುವು ಸುಲಭಸಾಧ್ಯ ಎಂಬುದಕ್ಕೆ ೪೭ನೇ (ವಿಶ್ವ)ಶ್ರೇಯಾಂಕಿತ ದಕ್ಷಿಣ ಕೊರಿಯಾವು ೧೩ನೇ (ವಿಶ್ವ)ಶ್ರೇಯಾಂಕದ ಗ್ರೀಸನ್ನು ೨-೦ ಗೋಲುಗಳಿಂದ ಸೋಲಿಸಿದ್ದೇ ಸಾಕ್ಷಿ. ಆದರೆ, ಶಿಸ್ತುಬದ್ಧತೆ, ಕಲಾತ್ಮಕತೆ, ಲೆಕ್ಕಾಚಾರ ಹಾಗೂ ನೈಪುಣ್ಯ ಇವುಗಳ ಸಹಿತ ತಂಡವು ಹೊಂದಾಣಿಕೆಯಿಂದ ಆಟವಾಡಿದರೆ ಅಂಥ ತಂಡಕ್ಕೆ ಭರ್ಜರಿ ಜಯ ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಆಸ್ಟ್ರೇಲಿಯಾ ವಿರುದ್ಧ ಜರ್ಮನಿ ಗಳಿಸಿದ ೪-೦ ಗೋಲುಗಳ ಗೆಲುವು ಉತ್ತಮ ನಿದರ್ಶನ.
  ಮುಂದಿನ ದಿನಗಳಲ್ಲಿ ಯಾವ ಗುಣಗಳು ಮೇಲುಗೈ ಪಡೆಯುತ್ತವೆಂಬುದನ್ನು ನೋಡೋಣ.