ವಿಶ್ವಕರ್ಮ ನಮನ

ವಿಶ್ವಕರ್ಮ ನಮನ

ಕವನ

ವಿಶ್ವದದ್ಭುತ ಸೃಷ್ಟಿಯ ವಿಶ್ವಕರ್ಮನೆ

ಸೃಷ್ಟಿ ಕಾರ್ಯದ ಅಮೂರ್ತ ರೂಪನೆ

ಬ್ರಹ್ಮಾಂಡದ ವಿಶಿಷ್ಠ ವಾಸ್ತು ಶಿಲ್ಪಿಯೆ

ಭವ್ಯ ಭೌವನ ಕುಲದ ಋಷಿ ಶ್ರೇಷ್ಠನೆ॥

 

ಜಗತ್  ಸೃಷ್ಟಿಯ ಪರಬ್ರಹ್ಮರೂಪನೆ

ಈ ಸೃಷ್ಟಿಯ  ಬ್ರಹ್ಮಾಂಡ ನಾಯಕನೆ

ಋಗ್ವೇದ ಪ್ರಥಮ ಪೂಜಾ ವಂದಿತನೆ

ಪರಮಪುರುಷ ವಿರಾಟ ವಿಶ್ವಕರ್ಮನೆ॥

 

ಆ ಶ್ರೇಷ್ಠ ಸ್ವರ್ಗವನೇ ನಿರ್ಮಿಸಿದವನೆ

ಕಾಶೀ ಪಟ್ಟಣದ ಶಿವಲಿಂಗ ಸ್ಥಾಪಕನೆ

ತ್ರೇತಾಯುಗದಿ ಲಂಕೆಯ ನಿರ್ಮಾತೃವೆ

ದ್ವಾಪರದಲಿ ದ್ವಾರಕೆಯನು ಕಟ್ಟಿದವನೆ॥

 

ಆ ಸಪ್ತ ಋಷಿಗಳಿಂ ಪರಮ ಪೂಜಿತನೆ

ಇಂದು ನಿನ್ನಾರಾಧನೆಯ ಶುಭ ದಿನವು

ನಿನ್ನನು ಪಡೆದೀ ಜಗದಲಿ ನಾವೇ ಧನ್ಯ

ಸಹಸ್ರ ಸಹಸ್ರ ನಮನ ಓ ಜಗಮಾನ್ಯ॥

(ವಿಶ್ವಕರ್ಮ ಜಯಂತಿ ಪ್ರಯುಕ್ತ ಬರೆದ ಕವನ)

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್