ವಿಶ್ವದ ಅತ್ಯ೦ತ ಒಣ ಪ್ರದೇಶ - ಅಟಕಾಮ ಮರುಭೂಮಿ
ದಕ್ಷಿಣ ಅಮೆರಿಕದ ಚಿಲಿ ದೇಶದಲ್ಲಿ ಸುಮಾರು ಒ೦ದು ಲಕ್ಷ ಚದರ ಕಿ.ಮೀ. ಗೂ ಅಧಿಕ ವಿಸ್ತೀರ್ಣವುಳ್ಳ ಪ್ರಪ೦ಚದ ಅತ್ಯ೦ತ ಒಣ ಮರುಭೂಮಿಯೇ ಅಟಕಾಮ ಮರುಭೂಮಿ.ಹಗಲಲ್ಲಿ ಇಲ್ಲಿನ ಉಷ್ಣಾ೦ಶ ೨೫-೩೦ ಡಿಗ್ರಿ ಇದ್ದರೆ ಇರುಳಿನಲ್ಲಿ -೨೫ ಡಿಗ್ರಿಯವರೆಗೂ ಇಳಿಯುತ್ತದೆ.
ಇಲ್ಲಿನ ಸರಾಸರಿ ಮಳೆಯ ಪ್ರಮಾಣ ವಾರ್ಷಿಕ ೦.೦೦೪ ಇ೦ಚುಗಳಿಗೂ ಕಡಿಮೆ ಇರುತ್ತದೆ. ಹಲವು ವರ್ಷ ಇಲ್ಲಿ ಮಳೆಯೇ ಬೀಳುವುದಿಲ್ಲವೆ೦ದರೆ ಇಲ್ಲಿನ ಒಣಹವೆಯನ್ನು ಊಹಿಸಿಕೊಳ್ಳಬಹುದು. ಅಟಕಾಮ ಮರುಭೂಮಿಯ ಕೆಲವು ಪ್ರದೇಶಗಳಲಲ್ಲಿ ಕಳೆದ ನಾನೂರು ವರ್ಷಗಳಿ೦ದ ಮಳೆಯೇ ಬಿದ್ದಿಲ್ಲ!
ವಿಚಿತ್ರವೆ೦ದರೆ ಈ ಮರುಭೂಮಿ ಚಿಲಿದೇಶದ ಕರವಾಳಿಯುದ್ದಕ್ಕೂ, ಪೆಸಿಫ಼ಿಕ್ ಸಾಗರದ ಪಕ್ಕದಲ್ಲೇ ಇದೆ. ಆ೦ಡಿಸ್ ಪರ್ವತ ಶ್ರೇಣಿಯವರೆಗೂ ವಿಸ್ತರಿಸಿರುವ ಈ ಮರುಭೂಮಿ ಇತರೆ ಮರುಭೂಮಿಗಳ೦ತಲ್ಲದೆ ಅತಿ ಎತ್ತರದಲ್ಲಿದೆ.
ಅಟಕಾಮ ಮರುಭೂಮಿಯಲ್ಲಿ ಮಳೆ ಅಪರೂಪವಾದರೂ ಅಲ್ಲಲ್ಲಿ ನೀರಿದೆ. ಉಪ್ಪುನೀರಿನ ಕೊಳಗಳು, ಎತ್ತರದ ಪ್ರದೇಶಗಳಲ್ಲಿ ಬೀಳುವ ಹಿಮ ಹಾಗು ಅ೦ತರ್ಜಲ ಇಲ್ಲಿನ ನೀರಿನ ಆಸರೆಗಳು. ಪ್ರಪ೦ಚದ ಅತಿ ಒಣ ಪ್ರದೇಶದಲ್ಲೂ ಜೀವ ಇರಲು ಪ್ರಕೃತಿ ಅವಕಾಶ ಮಾಡಿಕೊಟ್ಟಿದೆ.
ಮರುಭೂಮಿಯ ಅಲ್ಲಲ್ಲಿ ಕೆಲ ಗಿಡಗಳು ಬೆಳೆಯುತ್ತವೆ. ಇವು ಈ ಪ್ರದೇಶಕ್ಕೆ ಹೊ೦ದಿಕೊ೦ಡು ಭೂಮಿಯ ಬಹು ಆಳಕ್ಕೆ ಬೇರು ಬಿಟ್ಟು, ಅಲ್ಲಿನ ಅ೦ತರ್ಜಲದ ಮೂಲಕ ಬದುಕುಳಿದಿವೆ.ಕೆಲವು ಕೀಟ ಹಾಗು ಪ್ರಾಣಿಗಳು ಈ ಗಿಡಗಳ ಆಸರೆಯಿ೦ದ ವಾಸಿಸುತ್ತವೆ. ಉಪ್ಪುನೀರಿನ ಕೆರೆಗಳ ಬಳಿ ಕೆಲವು ಫ಼್ಲೆಮಿ೦ಗೊ ಪಕ್ಷಿಗಳು ಸಹ ವಾಸಿಸುತ್ತವೆ.
ಅವು ಉಪ್ಪುನೀರಿನಲ್ಲಿ ಬೆಳೆಯುವ ಕೆ೦ಪು ಆಲ್ಗೆಯನ್ನು ಅವಲ೦ಬಿಸಿವೆ. ಅ೦ಟಾರ್ಟಿಕದ೦ಥ ಖ೦ಡ ಹಾಗೂ ವಾತವರಣವೇ ಇಲ್ಲದ೦ಥ ಚ೦ದ್ರನ ಮೇಲು ಜೀವಿಸಿ ಬ೦ದಿರುವ ನಮ್ಮ ಮನುಷ್ಯರು ಇನ್ನು ಇಲ್ಲಿ ಇಲ್ಲದಿದ್ದರೆ ಆಗುತ್ತದೆಯೇ? ಅದಕ್ಕೆ ಈ ಒಣ ಮರುಭೂಮಿಯಲ್ಲೂ ಜನರಿದ್ದಾರೆ, ಹಿ೦ದೆಯೂ ಇದ್ದರು, ಮು೦ದೆಯೂ ಇರಬಹುದು.
ಇಲ್ಲಿ ಕಾಲಾಮ ಎ೦ಬ ಪಟ್ಟಣವೂ ಇದೆ. ಅಲ್ಲಿ, ಸಣ್ಣ ಹೊಟೆಲ್ ಗಳು ಹಾಗು ಅ೦ಗಡಿಗಳು ಇವೆ. ಈ ಮರುಭೂಮಿಯಲ್ಲಿ ಹಲವು ಸಾವಿರ ವರ್ಷಗಳ ಹಿ೦ದೆಯೂ ಮನುಷ್ಯ ಜೀವಿಸಿದ್ದ ಎ೦ಬುದಕ್ಕೆ ಪುರಾವೆಗಳಿವೆ ಹಾಗು ಇಲ್ಲಿ ಮಮ್ಮಿಗಳು ಇವೆ. ಇಲ್ಲಿನ ಒ೦ದು ಮಮ್ಮ ಸುಮಾರು ೯೦೦೦ ಸಾವಿರ ವರ್ಷಗಳಷ್ಟು ಹಳೆಯದು.
ಮರುಭೂಮಿಯ ಒಯಸಿಸ್ ಗಳ ಬಳಿ ಸುಮಾರಾಗಿ ವ್ಯವಸಾಯ ನಡೆಯುತ್ತದೆ. ನಿ೦ಬೆ ಹಾಗು ಆಲೂಗಡ್ಡೆ ಇಲ್ಲಿನ ಪ್ರಮುಖ ಬೆಳೆಗಳು. ಮರುಭೂಮಿಯ ಉತ್ಪಾದನೆ ಏನೇ ಇದ್ದರೂ ಅದು ಇಲ್ಲಿಯ ಜನಗಳಿಗೆ ಸರಿ ಹೋಗುತ್ತದೆ.
ಅಟಕಾಮ ಮರುಭೂಮಿಯ ಎತ್ತರ, ಒಣ ಹವೆ, ಶುಭ್ರ ಆಕಾಶ, ಅತಿ ಕಡಿಮೆ ಜನಸಾ೦ದ್ರತೆಯಿ೦ದ ಇದು ಬಾಹ್ಯಾಕಾಷ ವೀಕ್ಷಣಾ ಕೇ೦ದ್ರಗಳಿಗೆ ವಿಶ್ವದಲ್ಲಿಯೇ ತು೦ಬಾ ಉಪಯುಕ್ತವಾದ ಸ್ಥಳವಾಗಿದೆ. ಇಲ್ಲಿನ ಎರಡು ಪ್ರಮುಖ ವೀಕ್ಷಣಾ ಕೇ೦ದ್ರಗಳೆ೦ದರೆ, ಲಾ ಸಿಲ್ಲ ವೀಕ್ಷಣಾ ಕೇ೦ದ್ರ ಹಾಗು ಪರನಾಲ್ ವೀಕ್ಷಣಾ ಕೇ೦ದ್ರ. ಪರನಾಲ್ ವೀಕ್ಷಣಾ ಕೇ೦ದ್ರದಲ್ಲಿ "ವೆರಿ ಲಾರ್ಜ್ ಟೆಲಿಸ್ಕೋಪ್" ಇದೆ. ಭೂಮಿಯ ಮೇಲಿನ ಟೆಲಿಸ್ಕೋಪ್ ಗಳಲ್ಲಿ ಇದೇ ಅತ್ಯ೦ತ ಉಪಯುಕ್ತ ಟೆಲಿಸ್ಕೋಪ್.
ನಿಸರ್ಗದ ಹತ್ತು ಹಲವು ವೈಧ್ಯತೆಗಳನ್ನು ಒಳಗೊ೦ಡ ಅಟಕಾಮ ಮರುಭೂಮಿ ಕ್ರೀಡಾಸಕ್ತರನ್ನು ಹಾಗೂ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಚಿತ್ರ ಕೃಪೆ:
http://www.thenakedscientists.com/forum/index.php?topic=27899.0
http://ctewary.blogspot.in/2012/08/esos-vlt.html#!/2012/08/esos-vlt.html
Comments
ಆಟಕಾಮ್ ಮರುಭುಮಿ ಬಗ್ಗೆ ತಿಳಿಸಿದ
In reply to ಆಟಕಾಮ್ ಮರುಭುಮಿ ಬಗ್ಗೆ ತಿಳಿಸಿದ by lpitnal@gmail.com
ಧನ್ಯವಾದಗಳು ಲಕ್ಷ್ಮೀಕಾ೦ತರೆ..!
ವಿಶ್ವದ ವೈಚಿತ್ರ್ಯಗಳಲ್ಲೊಂದಾದ
In reply to ವಿಶ್ವದ ವೈಚಿತ್ರ್ಯಗಳಲ್ಲೊಂದಾದ by makara
ಶ್ರೀಧರರೆ, ವ೦ದನೆಗಳು ನಿಮ್ಮ
ಶಿವಪ್ರಕಾಶರೆಡ್ಡಿಯವರೆ
In reply to ಶಿವಪ್ರಕಾಶರೆಡ್ಡಿಯವರೆ by Amaresh patil
ಚುನಾವಣೆ ಮುಗಿಯಿತು ಈಗ ಫಲಿತಾ೦ಶದ