ವಿಶ್ವದ ಹಾಸ್ಯನಟ ಸಾರ್ವಭೌಮ ಚಾರ್ಲಿ ಚಾಪ್ಲಿನ್ !

ಸರ್. ಚಾರ್ಲ್ಸ್ ಸ್ಪೆನ್ಸರ್ ಚಾರ್ಲಿ ಚಾಪ್ಲಿನ್ ಕೆ.ಬಿ.ಇ. ಎಂದು ಪತ್ರಿಕೆಗಳಲ್ಲಿ ಪ್ರಸಿದ್ಧರಾಗಿರುವ ಚಾರ್ಲಿ ಚಾಪ್ಲಿನ್, ಸಿಟಿ ಲೈಟ್ಸ್, ಮಾಡರ್ನ್ ಟೈಮ್ಸ್, ದ ಗ್ರೇಟ್ ಡಿಕ್ಟೇಟರ್, ಮೊದಲಾದ ಮೂಕಿ ಚಿತ್ರಗಳನ್ನು ನಿರ್ಮಿಸಿ ಅವುಗಳಲ್ಲಿ ನಟಿಸಿ ವಿಶ್ವದ ಜನರನ್ನು ಹೊಟ್ಟೆಬಿರಿಯುವಂತೆ ನಗಿಸಿದ ಮಹಾನ್ ಹಾಸ್ಯನಟ ಚಾರ್ಲಿ ಚಾಪ್ಲಿನ್ ಜನ್ಮದಿನ ಇವತ್ತೇ ಅಂದರೆ, ೧೬ ಏಪ್ರಿಲ್, ೧೮೮೯ ರಲ್ಲಿ ಅವರು ಇಂಗ್ಲೆಂಡ್ ನ ನಿರ್ಗತಿಕ ಪರಿವಾರದಲ್ಲಿ ಜನಿಸಿದರು.
ವಿಶ್ವದಲ್ಲಿ ಚಲನ ಚಿತ್ರಗಳು ಪ್ರವರ್ಧಮಾನಕ್ಕೆ ಬಂದಿರಲಿಲ್ಲ. ಯಾರಿಗೂ ಅದರ ಬಗ್ಗೆ ತಿಳಿದಿರಲಿಲ್ಲ.ಲಂಡನ್, ಪ್ಯಾರಿಸ್ ಮೊದಲಾದ ಶಹರುಗಳಲ್ಲಿ ಅತಿ ಶ್ರೀಮಂತರ ಹತ್ತಿರ ಕೆಲವು ಕ್ಯಾಮೆರಾಗಳು ಉಪಲಬ್ಧವಿದ್ದವು. ಚಿತ್ರ ತೆಗೆದಾಗ ಅವುಗಳಲ್ಲಿ ಮಾತುಕತೆ ಅಳವಡಿಸಲು ಅನುಕೂಲ ಇರಲಿಲ್ಲ. ಶಬ್ದವನ್ನು ಅಳವಡಿಸುವ ತಂತ್ರಜ್ಞಾನ ಯಾರಿಗೂ ಗೊತ್ತಿರಲಿಲ್ಲ. ಅಂತಹ ಸಮಯದಲ್ಲಿ ಚಾರ್ಲಿ ಚಾಪ್ಲಿನ್ ತಮ್ಮ ಬಡತನದ ಮಧ್ಯೆಯೂ ಚಿತ್ರತಯಾರಿಕೆಯ ಸಾಹಸದ ಕೆಲಸಕ್ಕೆ ಕೈಹಾಕಿದರು.
ಚಾರ್ಲಿ ಚಾಪ್ಲಿನ್ ನಿದ್ದೆಯಿಂದ ಫಕ್ಕನೆ ಎದ್ದು ಏಳುತ್ತಾಬೀಳುತ್ತಾ ತೂರಾಡುತ್ತಾ ನಡೆಯುವ, ಮತ್ತೆ ತೀವ್ರಗತಿಯ ನಡಿಗೆ ಚಲನವಲನ, ಹಾವಭಾವ ವಿಶೇ ಷತೆ.ದೊಗಲೆ ಪ್ಯಾಂಟ್, ತಲೆಯಮೇಲೆ ಒಂದು ಹ್ಯಾಟ್, ಬಿಗಿಯಾದ ಜಾಕೆಟ್ ಮುಖದಲ್ಲಿ ವಿಚಿತ್ರವಾದ ಪುಟ್ಟ ಮೀಸೆ, ತಲೆತುಂಬಾ ಕಪ್ಪು ಗುಂಗರು ಕೂದಲು, ಈ ತರಹದ ಆಗಿನ ಕಾಲದ ಬ್ರಿಟಿಷ್ ಕಾಮಿಕ್ ನಟ, ಮೊದಲು ಮೂಕಿ ಚಿತ್ರನ್ನು ನಿರ್ಮಿಸಿ ನಂತರ ಟಾಕಿ ಚಿತ್ರಗಳನ್ನು ನಿರ್ಮಿಸಿ, ಅವುಗಳಲ್ಲಿ ಅಭಿನಯಿಸಿ, ಪ್ರವರ್ಧಮಾನಕ್ಕೆ ಬಂದರು. ಅವರ ಹೆಸರಾಂತ ’ಟ್ರಂಪ್’ ಎನ್ನುವ ಅಲೆದಾಡುವ ಪಾತ್ರ, ಮರೆಯಲಾರದ ಪರಿಣಾಮ ಬೀರಿತ್ತು. ಚಲನಚಿತ್ರರಂಗದ ಸುಮಾರು ೭೫ ವರ್ಷಗಳ ಜೀವನದಲ್ಲಿ ಅವರು ಅತಿ ಪ್ರಭಾವಿ ವ್ಯಕ್ತಿಯಾಗಿ ಪರಿಗಣಿಸಲ್ಪಟ್ಟರು. ವಿಕ್ಟೋರಿಯನ್ ಯುಗದ ಶಿಶುವೆಂದು ಹೆಸರಾದ ಚಾರ್ಲಿ ತಮ್ಮ ೮೮ ನೆ ವರ್ಷದಲ್ಲಿ ನಿಧನರಾಗುವ ಮುನ್ನ ಹಲವಾರು ಆಕ್ಷೇಪಣೆಗಳನ್ನೂ ಬಿರುನುಡಿಗಳನ್ನೂ, ತಿರಸ್ಕಾರದ ಜೀವನವನ್ನೂ ಅನುಭವಿಸಿದರು. ಹಾಗೆಯೇ ಅವರ ಕೆಲಸಕ್ಕೆ ಒಳ್ಳೆಯ ಪ್ರಶಂಸೆಯ ಮಾತುಗಳು ಹಾಗೂ ಹಣದ ಮಹಾಪೂರವೇ ಬಂತು. ಸನ್. ೧೯೧೯ ರಲ್ಲಿ ಸ್ಪೆನ್ಸರ್ ಟ್ರೇಸಿ, ಕ್ಯಾಥರೀನ್ ಹೆಪ್ ಬರ್ನ್ ಮೊದಲಾದ ಕಲಾವಿದರ ಜೊತೆಸೇರಿ, ಅಮೆರಿಕದಲ್ಲಿ ಯುನೈಟೆಡ್ ಆರ್ಟಿಸ್ಟ್ಸ್ ಎಂಬ ವಿತರಣ ಸಂಸ್ಥೆಯನ್ನು ತೆರೆದರು. ಈ ಸಂಸ್ಥೆಯ ಮೂಲಕ ಹಲವಾರು ಚಿತ್ರಗಳನ್ನು ನಿರ್ಮಿಸಿದರು. ಅದಲ್ಲದೆ ತಾವು ನಿರ್ಮಿಸಿದ ಇತರ ಚಿತ್ರಗಳನ್ನು ವಿತರಿಸಿ ತಮ್ಮ ವ್ಯವಹಾರವನ್ನು ನಿಯಂತ್ರಿಸಿಕೊಳ್ಳಲೂ ಇದು ಸಹಾಯವಾಯಿತು.
೨೦ ನೆಯ ಶತಮಾನದ ಹಲವಾರು ಹಾಸ್ಯನಟರಲ್ಲಿ ಚಾರ್ಲಿ ಅತ್ಯಂತ ಪ್ರತಿಭಾವಂತರೆಂದು ತಜ್ಞರ ಅಭಿಪ್ರಾಯ. ಅವರ ತಂದೆತಾಯಿಗಳು ಒಂದು ಚಿಕ್ಕ ನಾಟಕ ಕಂಪೆನಿಯಲ್ಲಿ ಕೆಲಸಕ್ಕಿದ್ದರು. ಚಾರ್ಲಿ ೧೯೦೬ ರಿಂದಲೇ ಅಲ್ಲಿ ತಾವೂ ಕೆಲಸ ಕಲಿತುಕೊಂಡರು. ೧೯೧೩ ರಲ್ಲಿ ನಾಟಕ ಕಂಪೆನಿಯಲ್ಲಿ ‘ಮೇಕಿಂಗ್ ಎ ಲಿವಿಂಗ್’ ಎಂಬ ನಾಟಕ, ‘ಇನ್ ಕಿಡ್ ಆಟೋ ರೇಸಸ್’ ಎಂಬ ವಿಶಿಷ್ಟ ವಲಯದಲ್ಲಿ ಹೆಸರು ಗಳಿಸಿದರು. ಲಘು ಹಾಸ್ಯಚಿತ್ರಗಳಲ್ಲಿ ನಟಿಸಿ ದರು. ‘ಎಟ್ ವೆನಿಸ್’ ಎಂಬ ಮತ್ತೊಂದು ನಾಟಕ. ಈ ಸಮಯದಲ್ಲಿ ಅವರು ತಮ್ಮ ಪೋಷಾಕು ಮತ್ತು ಅಭಿನಯದ ಕೆಲವು ಮಜಲುಗಳನ್ನು ಕಲಿತರು; ಅವನ್ನು ಖಚಿತಪಡಿಸಿಕೊಂಡರು. ಲಘು ಹಾಸ್ಯಚಿತ್ರಗಳು. ಹೀಗೆ ಚಾರ್ಲಿ ಚಾಪ್ಲಿನ್ ರವರು, ಅಂತಾರಾಷ್ಟ್ರೀಯ ಖ್ಯಾತಿಗಳಿಸಿದರು.
ಮುಂದೆ ೧೯೧೮ ರಲ್ಲಿ ‘ಎ ಡಾಗ್ಸ್, ಲೈಫ್, ‘ಶೆಲ್ಡರ್ಸ್ ಆರ್ಮ್ಸ್’ ಎಂಬ ದೊಡ್ಡ ಚಿತ್ರಗಳನ್ನು ನಿರ್ಮಿಸಿದರು. ೧೯೨೩ ‘ಎ ವಮನ್ ಆಫ್ ಪ್ರಾಮ’ಿಸ್,
೧೯೨೫ ರಲ್ಲಿ ದ ‘ಗೋಲ್ಡ್ ರಶ್’,
೧೯೨೮ ರಲ್ಲಿ ‘ದ ಸರ್ಕಸ್,
೧೯೩೧ ರಲ್ಲಿ ‘ಸಿಟಿ ಲೈಟ್ಸ
೧೯೩೬ ನಲ್ಲಿ ‘ಮಾಡರ್ನ್ ಟೈಮ’್ಸ್,
೧೯೪೦ ರಲ್ಲಿ ‘ಗ್ರೇಟ್ ಡಿಕ್ಟ’ೇಟರ್, ಸಿನೆಮಾಗಳು ಟಾಕಿ ಚಿತ್ರಗಳು.
೧೯೫೨ ‘ಲೈಮ್ ಲೈ’ಟ್,
೧೯೫೭ ‘ಎ ಕಿಮ್ಂಗ್ ಇನ್ ನ್ಯೂಯ’ಾರ್ಕ್, ಚಿತ್ರಗಳು ಅವರ ಜನಪ್ರಿಯತೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದವು.
೧೯೬೬ ರಲ್ಲಿ, ಆ ಸಮಯದ ಬೆಡಗಿ, ಸುಂದರಿ, ‘ಸೋಫಿಯಾ ಲಾರೆನ್’ ನಾಯಕಿಯಾಗಿ ನಿರ್ಮಿಸಿದ ‘ಕಂಟೆಸ್ ಫ್ರಮ್ ಹಾಂಕಾಂಗ್’ ಎನ್ನುವ ಚಿತ್ರ ವಿಫಲವಾಯಿತು.
೧೯೭೨ ರಲ್ಲಿ ‘ಮೋಶನ್ ಪಿಕ್ಚರ್ಸ್ ಆರ್ಟ್ಸ್ ಅಂಡ್ ಸೈನ್ಸ್ ಅಕ್ಯಾಡೆಮಿ ಪ್ರಶ’ಸ್ತಿ,
೧೯೭೩ ರಲ್ಲಿ ‘ಲೈಮ್ ಲೈಟ್’ ಚಿತ್ರಕ್ಕೆ ‘ಅಕ್ಯಾಡಮಿ ಪ್ರಶ’ಸ್ತಿದೊರೆಯಿತು.
೧೯೭೫ ರಲ್ಲಿ ‘ಬ್ರಿಟನ್ನಿನ ಮಹಾರಾಣಿ ೨ ನೆಯ ಎಲಿಝಬ’ೆತ್, ರವರು ‘ನೈಟ್ ಪ್ರಶಸ್ತಿ’ ಪ್ರದಾನಮಾಡಿದರು. ಆಗ ಚಾರ್ಲಿ ಚಾಪ್ಲೆನ್ ರವರಿಗೆ ೮೬ ವರ್ಷ ವಯಸ್ಸಾಗಿತ್ತು.
ಅಷ್ಟು ರಸಿಕರಾದಾಗ್ಯೂ ‘ಚಾರ್ಲಿ ಚಾಪ್ಲಿನ್ ಜೀವ’ನ, ಕೆಲವು ವಿವಾದಗಳಿಂದ ತುಂಬಿತ್ತು. ೧೯೪೦ ರಲ್ಲಿ ‘ಕಮ್ಯುನಿಸಂ’ ಬಗ್ಗೆ ಹೆಚ್ಚು ಒಲವುತೋರಿಸಿದರು. ‘ಹಿಟ್ಲರ್’ ಬಗ್ಗೆ ‘ನಗೆ ಚಿತ್ರ’ ನಿರ್ಮಿಸಿದರು. ತಮ್ಮ ವಯಸ್ಸಿಗಿಂತ ಅತಿ ಕಡಿಮೆ ವಯಸ್ಸಿನ ಕಿಶೋರಿಯರನ್ನು ವಿವಾಹವಾಗಿ ವಿವಾದಗಳಿಗೆ ಗ್ರಾಸವಾಗಿದ್ದರು. ಕೊನೆಗೆ ಅವರು ಅಮೆರಿಕವನ್ನು ಬಿಟ್ಟು ‘ಸ್ವಿಟ್ಝರ್ ಲ್ಯಾಂಡ್’ ದೇಶಕ್ಕೆ ಹೋಗಿ ನೆಲೆಸಿದರು.
ತಮ್ಮ ೮೮ ನೇ ವಯಸ್ಸಿನಲ್ಲಿ ವರನಟ ‘ಚಾರ್ಲಿ ಚಾಪ್ಲಿನ್’ ರವರು, ೨೫, ಡಿಸೆಂಬರ್, ೧೯೭೭ ರಲ್ಲಿ ನಿಧನರಾದರು. ವಿಶ್ವದ ಎಲ್ಲಾ ವಯೋಮಾನದ ಜನರನ್ನು ಹೊಟ್ಟೆ ಬಿರಿಯುವಂತೆ ನಗಿಸಿ ರಂಜಿಸಿದರವರು. ತಮ್ಮ ತಿಳಿ ಹಾಗು ಅಸಹ್ಯವಿಲ್ಲದ ಹಾಸ್ಯಕ್ಕೆ ಒಂದು ಹೊಸಆಯಾಮ, ಮೆರುಗನ್ನು ಕೊಟ್ಟು ಇಂದಿಗೂ ಯುವಜನರನ್ನೂ ನಗೆಕಡಲಿನಲ್ಲಿ ತೇಲಿಸುವ ಮರೆಯಲಾರದ ವ್ಯಕ್ತಿಯಾಗಿ ನಗು ನಗುತ್ತಾ ಕಣ್ಮರೆಯಾದರು. ಅವರ ನಂತರ ಅಮೆರಿಕದಲ್ಲಿ ಪ್ರಖ್ಯಾತ ಹಾಸ್ಯ ನಟರಾದ ‘ಲಾರ’ೆಲ್, ‘ಹಾರ’್ಡಿ, ‘ಮಿ. ಬೀ’ನ್, ಮೊದಲಾದ ವಿದ್ವತ್ಪೂರ್ಣ ವ್ಯಕ್ತಿಗಳಿದ್ದರೂ ‘ಚಾರ್ಲಿ ಚಾಪ್ಲಿನ್‘ ತನ್ನದೇ ಒಂದು ‘ವಿಶಿಷ್ಠ ಛಾ’ಪನ್ನು ಹೊಂದಿದ್ದಾರೆ. ಅವರ ಸ್ಥಾನ ತುಂಬಲು ‘ಮತ್ತೊಬ್ಬ ಚಾರ್ಲಿ ಚಾಪ್ಲಿನ್’ ಬಂದರೆ ಮಾತ್ರಾ ಸಾಧ್ಯ.
-horaMlaveM