ವಿಶ್ವವನ್ನೇ ಬೆರಗಾಗಿಸಿದ ಪುಟ್ಟ ದೇಶ !

ಪುಟ್ಟ ದೇಶ ಇಸ್ರೇಲ್ ಮತ್ತೊಮ್ಮೆ ವಿಶ್ವದ ಜನರನ್ನು ದಂಗು ಬಡಿಸಿದೆ. ಕೆಲ ಸಮಯದ ಹಿಂದೆ ಕ್ಷಿಪಣಿಗಳನ್ನು ಆಗಸದಲ್ಲೇ ತಡೆಯುವ ಐರನ್ ಡೋಮ್, ಮನೆಗೆ ನುಗ್ಗಿ ಕೊಂದು ಬರುವ ಕಿಲ್ಲರ್ ಡ್ರೋನ್, ಮೊದಲಾದ ಇಸ್ರೇಲ್ ತಂತ್ರಜ್ಞಾನಗಳು ಶತ್ರುಗಳ ಎದೆ ನಡುಗಿಸಿದ್ದವು. ಈ ಬಾರಿ ಗಂಭೀರ ಯುದ್ಧದ ನಡುವೆ ಒಂದು ಹಾಸ್ಯ ಸನ್ನಿವೇಶವನ್ನು ಇಸ್ರೇಲರು ಸೃಷ್ಟಿಸಿದ್ದಾರೆ.
ಇರಾನ್ ಬೆಂಬಲದಿಂದ ಲೆಬನಾನಿನ ಹಿಜ್ಬುಲ್ಲಾ ಉಗ್ರರು ಕಳೆದ ಹಲವು ತಿಂಗಳುಗಳಿಂದ ಇಸ್ರೇಲ್ ವಿರುದ್ಧ ದಾಳಿ ನಡೆಸುತ್ತಿದ್ದಾರೆ. ಈ ನಡುವೆ ಹಿಜಬುಲ್ಲಾ ನಾಯಕ ಹಸನ್ ನಸ್ರಲ್ಲಾಹ್ ಉಗ್ರರಿಗೆ ಒಂದು ಮಹತ್ವದ ಸಲಹೆ ನೀಡಿದ್ದ. ನೀವು ಯಾವುದೇ ಕಾರಣಕ್ಕೂ ಮೊಬೈಲ್ ಬಳಸ ಬೇಡಿ. ಅದರ ಬದಲಿಗೆ ಪೇಜರ್ ಬಳಸಿ ನಮ್ಮ ಪ್ರತೀ ಸದಸ್ಯರ ಕಿಸೆಯಲ್ಲೂ ಒಂದೊಂದು ಪೇಜರ್ ಇರಬೇಕು ಯಾವುದೇ ಸಂದೆಶಗಳಿದ್ದರೆ ಅದರ ಮೂಲಕವೇ ನೀಡಬೇಕು ಎಂದು ಆದೇಶ ಮಾಡಿದ್ದ. ಹೀಗೆ ಹಿಜ್ಬುಲ್ಲಾ ಉಗ್ರರ ನಡುವೆ ಒಂದು ರಹಸ್ಯ ಪೇಜರ್ ನೆಟ್‌ವರ್ಕ್ ಜಾಲ ಹರಡಿಕೊಂಡಿತ್ತು.
ಲೆಬನಾನಿನ ಬೆಹರೂತ್ , ದಮಿಷ್ಕ್ , ಅಲಿ ಅಲ್‌ನಹಾರ್, ರಿಯಾಕಶ್ಕ್ ಮೊದಲಾದ ಹಿಜ್ಬುಲ್ಲಾಗಳ ಭದ್ರ ಕೋಟೆಗಳೊಳಗೆ ಹುದುಗಿರುವ ಉಗ್ರರನ್ನು ಪತ್ತೆ ಹಚ್ಚುವುದು ಹೇಗೆ ಎಂದು ತಲೆಕೆಡಿಸಿಕೊಂಡಿದ್ದ ಇಸ್ರೇಲಿಗೆ ಈ ಪೇಜರ್ ನೆಟ್‌ವರ್ಕ್ ಇನ್ನಷ್ಟು ಸಂಕಷ್ಟ ಒಡ್ಡಿತು. ಏಕೆಂದರೆ ಪೇಜರ್ ಕಾರ್ಯಾಚರಿಸುವುದು ಅಲ್ಲಿನ ಲೋಕಲ್ ನೆಟ್‌ವರ್ಕ್ ಮೂಲಕ. ಕಿಸೆಯಲ್ಲಿ ಪೇಜರ್ ಸದ್ದು ಮಾಡಿದ ಕೂಡಲೇ ಉಗ್ರರು ಯಾರೋ ಒಬ್ಬರ ಮೊಬೈಲ್ ಪಡೆದು ಇನ್ಯಾರಿಗೋ ಕರೆ ಮಾಡಿ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಇದರಿಂದಾಗಿ ಇಸ್ರೇಲಿ ಬೇಹುಗಾರರಿಗೆ ಇವರ ಚಲನವಲನಗಳನ್ನು ಪತ್ತೆ ಹಚ್ಚುವುದೇ ಸವಾಲಾಗಿ ಹೋಯಿತು. ಇದಲ್ಲದೇ ಹಿಜ್ಬುಲ್ಲಾಗಳು ಬಳಸುತ್ತಿದ್ದ ಪೇಜರ್‌ನಲ್ಲಿ ವಾಕಿಟಾಕಿಯಂತೆ ಕಡಿಮೆ ದೂರಕ್ಕೆ ಸಂವಹನ ನಡೆಸುವ ಸೌಕರ್ಯವೂ ಇತ್ತಂತೆ.
ಈ ಪೇಜರ್‌ಗಳಿಗೊಂದು ಗತಿ ಕಾಣಿಸಬೇಕು ಎಂದು ಇಸ್ರೇಲ್ ಬಹಳ ದಿನಗಳಿಂದ ಹೊಂಚು ಹಾಕಿ ಕೂತಿತ್ತು. ಕಳೆದ ವಾರ ಒಂದು ಮದ್ಯಾಹ್ನ ಇದ್ದಕ್ಕಿದ್ದ ಹಾಗೆ ಹಿಜಬುಲ್ಲಾಗಳು ಕಿಸೆಯಲ್ಲಿಟ್ಟುಕೊಂಡಿದ್ದ ಎಲ್ಲಾ ಪೇಜರ್‌ಗಳು ಏಕಕಾಲಕ್ಕೆ ಸ್ಪೋಟಗೊಂಡಿವೆ! ಸ್ಪೋಟದ ತೀವ್ರತೆಗೆ ೧೦ ಕ್ಕೂ ಅಧಿಕ ಹಿಜ್ಬುಲ್ಲಾಗಳು ಸತ್ತು ಬಿದ್ದಿದ್ದಾರೆ. ಆದರೆ ಏನೂ ಪ್ರಯೋಜನವಿಲ್ಲ. ಈ ದರಿದ್ರ ಪೇಜರ್ ಅಷ್ಟು ಮಾಡಿ ಹಾಕಿದೆ. ಹಿಜ್ಬುಲ್ಲಾಗಳ ಬಳಿ ಇದ್ದ ಸುಮಾರು ೧೭೦೦ ಪೇಜರ್‌ಗಳನ್ನು ನಿನ್ನೆ ಇಸ್ರೇಲ್ ಬಾಂಬ್ ರೀತಿಯಲ್ಲಿ ಬಳಸಿ ಅದನ್ನು ಇಟ್ಟುಕೊಂಡವರಿಗೆಲ್ಲಾ ಒಂದು ಗತಿ ಕಾಣಿಸಿದೆ. ಇದು ಹೇಗಾಗಿರಬಹುದು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಪೇಜರ್ ಇಟ್ಟು ಕೊಂಡಿದ್ದ 2700ಕ್ಕೂ ಅಧಿಕ ಹಿಜ್ಬುಲ್ಲಾಗಳು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಯಾರ ಪೇಜರ್ ಟೇಬಲ್ ಮೇಲಿತ್ತೋ ಅವರ ಟೇಬಲ್ ಮೇಲೆ ಸ್ಪೋಟ ನಡೆದು ದೊಡ್ಡದಾದ ತೂತು ಬಿದ್ದಿದೆ. ಮಾರುಕಟ್ಟೆಯಲ್ಲಿ ಓಡಾಡುತ್ತಿದ್ದ ಉಗ್ರರು ಅಕ್ಕಪಕ್ಕದಲ್ಲಿದ್ದ ಒಂದಿಬ್ಬರ ಜೀವಕ್ಕೂ ಸಂಚಕಾರ ತಂದಿದ್ದಾರೆ. ಒಂದು ಮೂಲದ ಪ್ರಕಾರ ಈ ದೇವದೂತ ಜಿಹಾದಿಗಳಿಗೆ ಈ ಪೇಜರ್ ಡಿವೈಸನ್ನು ಬೇರೆ ಯಾರದ್ದೋ ಮೂಲಕ ಮೊಸಾದಿಗಳೇ ಪೂರೈಸಿರಬಹುದು ಎಂಬ ಮಾಹಿತಿಯೂ ಇದೆ.
ಅದರೊಳಗೆ ಐನೂರು ಡಿಗ್ರಿಯಷ್ಟು ಶಾಖ ಉತ್ಪನ್ನ ಆಗುವಂತ ಶಕ್ತಿಶಾಲಿ ಲೀಥಿಯಂ ಬ್ಯಾಟರಿ ಮತ್ತಿತರ ಸ್ಪೋಟಕಗಳನ್ನು ಮೊದಲೇ ಇಟ್ಟು ಕೊಟ್ಟಿರಲೂ ಬಹುದು ಅದನ್ನು ಪೂರ್ತಿ ಟ್ರ್ಯಾಕ್ ಮಾಡಿ ಏಕಕಾಲದಲ್ಲಿ ಸ್ಪೋಟಿಸಿರುವ ಸಾಧ್ಯತೆಯೂ ಇದೆ. ಈ ದಾಳಿಯಿಂದಾಗಿ ಹಿಜ್ಬುಲ್ಲಾಗಳ ೮೦ ಪ್ರತಿಶತ ಲಡಾಕುಗಳು ಆಸ್ಪತ್ರೆಯ ಬೆಡ್ಡಿನ ಮೇಲೆ ಬಿದ್ದು ಕೊಳ್ಳುವಂತಾಗಿದೆ.
ತಮಾಶೆಯ ಸಂಗತಿ ಎಂದರೆ ಒಂದು ಪೇಜರ್ ಇರಾನ್ ರಾಜದೂತ ಮುಜ್ತಾಬಾ ಅಮಾನಿಯ ಕಿಸೆಯಲ್ಲೂ ಸ್ಪೋಟಗೊಂಡಿದೆ. ಹಿಜ್ಬುಲ್ಲಾಗಳು ಪಾಪ ಸೆಟಲೈಟ್ ಫೋನು, ಮೊಬೈಲ್ ಬಿಟ್ಟು ೯೦ರ ದಶಕದ ಪೇಜರ್ ಬಳಸಲು ಮುಂದಾಗಿ ಅದರಲ್ಲೂ ಕೈ ಮೈ ಎಲ್ಲಾ ಸುಟ್ಟು ಕೊಂಡಿದ್ದಾಯ್ತು. ಇನ್ನು ಅವರಿಗೆ ಉಳಿದಿರುವುದು ೬ನೇ ಶತಮಾನದ ಪಾರಿವಾಳಗಳು ಮಾತ್ರ.
(ಸಂಗ್ರಹ) ಸುರೇಶ್ ಶಿಬರೂರು, ಸುರತ್ಕಲ್
ಚಿತ್ರ ಕೃಪೆ: ಇಂಟರ್ನೆಟ್ ತಾಣ