ವಿಶ್ವಾಮಿತ್ರನಿವನು

ವಿಶ್ವಾಮಿತ್ರನಿವನು

ಕವನ
ವಿಶ್ವಾಮಿತ್ರನಿವನು

ಅಗೋ ನೋಡು ಗೋತ್ರಕಾರ
ಬ್ರಹ್ಮಋಷಿ  ಮಹಾತ್ಮನು
ಕಾಮಧೇನುವನ್ನು ಬಯಸಿ
ಋಷಿವರೇಣ್ಯನಾದನು

ಬೇಕೇ ಬೇಕು ಹಿಡಿದ ಹಠ
ಸಾರ್ಥಕವಾಯಿತು ಕುಲದ ಛಲ
ನಾಡಿನ ತಾಪಸಿಯೊಬ್ಬನ ಧೇನುವು
ಗಳಿಕೆಯನಳಿಸಿದ ದೆಸೆಯಿಂದ
ಗಳಿಸದೆ ಬಿಡುವೆನೆ ಮತ್ತದಕೆರಡನು
ಎನ್ನುತ ನಾಡಿನ ಹೊರವಂ
ಕಡುಹಟದಲಿ ಮುನಿ ಸಾಧಿಸ ಹೊರಟ
ಪಂಚಾಗ್ನಿಯಲೇ ತಾನಿಂತ

"ಧಿಗ್ಭಲಂ ಕ್ಷತ್ರಿಯ ಭಲಂ ಬ್ರಹ್ಮ ತೇಜೋ ಭಲಂ  ಭಲಂ "
ಎಂಬೀ ಘೋಷಣೆಯದಟೆಂತೋ 
ನಾಡಿನ ಅರಸರ ಎಣೆಯುಂಟೋ
ರಾಜಾ ಕೌಶಿಕ ಬದಲಾದ ವಿಶ್ವಾಮಿತ್ರನು ಎಂದಾದ

' ಧೀಯೋ ಯೋನಃ ಪ್ರಚೋಧಯಾತ್ '
ಗಾಯತ್ರಿಯ ಬಲುಮೆಗೆ ಸೋಲುಂಟೇ 
 
ಏರಿದೆತ್ತರಕೆ ಸೂತ್ರವದೆ 
ವಿಶ್ವಕೆ ನೀಡಿದ ಹೆಗ್ಗೊಡಿಗೆ

ವಾಸಿಷ್ಟರ ಮೇಲಿನ ಒಡಲುರಿಯೋ
ಇಲ್ಲಾ,  ತಾನಿಷ್ಟೆಂಬುದಕಿರಬಹುದೋ
ಅಂತೂ ನೃಪತಿಗೆ ಲಭಿಸಿತು ಸುರಭೋಗ

ರಂಭೆಯು ಬೇಡ ಮೇನಕೆಯಿರಲಿ
ಅನಿಕೇತನನಿಗೆ ಸಂಸಾರ
ಹೆಜ್ಜೆ ಹೆಜ್ಜೆ ರೋಮಾಂಚನ
ಆತ್ಮೋನ್ನತಿಗಿದು ಪ್ರೇರಣಾ

ಮಾನವತೆಗೆ ಕೈಗನ್ನಡಿಯಂತಿದೆ
ನರಬಲಿ ಖಂಡನದವಿಧಾನ
ಪಥದೊಳುದ್ದಕು ಪತನಗಳನುಭವ
ಸೋಲೇ ಗೆಲುವಿನ ಸೋಪಾನ

ವಿಶ್ವಾಮಿತ್ರನ ವಿಶಾಲಭಾವ
ರಾಘವಗಾಯಿತು ಆಧಾರ
ಕಲುಷಾರಣ್ಯವ ಪರಿಚಯಿಸಿ
ನರಶಾರ್ದೂಲನ ಎಚ್ಚರಿಸಿ

ಕರ್ತವ್ಯದ ಕರೆಗಿದು ಗುರುರಕ್ಷೆ
ರಾಮನೊಳಂದೆ ಇವನ ನಿರೀಕ್ಷೆ

ಹುಟ್ಟಿದ ಕುಲದೊಳು
ದೊರೆತನ ದೊರೆತರು
ನಭದೇಳರೊಳು ಒಂದಾದ

ಹರಿಶ್ಚಂದ್ರನೊಳು ಖಳ ನಾಯಕನೇ
ಛೇ ಛೇ ಇವನೇ ಸತ್ಯವ ಹೊರತಂದ

                                                                          -  ಸದಾನಂದ






Comments