ವಿಶ್ವ ಏಡ್ಸ್ ದಿನ - ಒಂದು ಗಝಲ್
ಕವನ
ಸ್ನೇಹವಿರಲಿ ಅತಿ ಸಲುಗೆ ಮಾಡದಿರು ಮನುಜ
ಪ್ರೀತಿಯಿರಲಿ ಇತಿ-ಮಿತಿ ತಿಳಿದಿರು ಮನುಜ
ಅಸುರಕ್ಷಿತ ಲೈಂಗಿಕತೆ ಮಾರಕವಾಗಿ ಉಸಿರನ್ನೇ ನಿಲ್ಲಿಸಬಹುದಲ್ಲವೇ
ರಕ್ಷಣೆಯ ಉಪಾಯವ ಬದುಕಿನಲಿ ಅರಿತಿರು ಮನುಜ
ಇರುವ ಒಂದು ಜನುಮವನು ಚಂದದಲಿ ನಿಭಾಯಿಸೆಂದು
ಬರುವ ರೋಗವು ಬಾರದಂತೆ ಎಚ್ಚರಿಕೆಯಲಿರು ಮನುಜ
ಇತರರ ಜೀವಕ್ಕೂ ಬೆಲೆಯಿದೆ ಮಾನವಂತನಾಗಿ ಬಾಳು
ಪರರ ಮೇಲೆ ದೃಷ್ಟಿ ನೆಡದಿರು ಮನುಜ
ಮಮತೆ ಒಲವಿನ ಪರಿಧಿಯ ರತುನಳು ಮೀರಲಾರಳು
ಕ್ಷಮತೆಯ ಹಾದಿಯಲಿ ಮರ್ಯಾದೆಯಿಂದ ಸಾಗುತಿರು ಮನುಜ
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್