ವಿಶ್ವ ಕವಿತೆ ದಿನದ ಕಾಣಿಕೆ
ಕವನ
ಒಲವ ಕುಣಿಸಿ ಪದಗಳ ಮಾಲೆ ಹಾಕಿದೆ ಕವಿತೆ
ಛಲವ ಮೊಳೈಸಿ ತನುಮನ ಎಲ್ಲ ತಾಕಿದೆ ಕವಿತೆ
ಬಲ ಪ್ರಯತ್ನ ಮಾಡಿದರೆ ಕಾವ್ಯದ ಹುಟ್ಟ ಸಾಧ್ಯವೇ
ಕಾಲ ಕಳೆದಂತೆ ಉತ್ತಮ ಸಮಯ ಬೇಕಿದೆ ಕವಿತೆ
ನಲಿದು ವಾಕ್ಯ ಅರಳುವ ವೇಳೆಗೆ ಕನಸು ಬೀಳುವುದು
ಸಾಲಿನ ಮಿತಿಗೆ ಅಕ್ಷರಗಳ ಜೋಡಿಸಿ ಸಾಕಿದೆ ಕವಿತೆ
ನಾಲಿಗೆ ತುದಿಯಲಿ ಇದ್ದರೂ ಹುಡುಕುವ ಕೆಲಸ ತಲೆಗೆ
ಕಲಿಕೆ ನಿರತ ಹೊಸತು ಪ್ರಯೋಗ ಸೋಕಿದೆ ಕವಿತೆ
ಜಾಲಿಗೆ ಬರೆದ ಕವನ ಚಂದ್ರನ ಹೃದಯ ತಟ್ಟಿದೆ
ಲಲಿತ ಪ್ರಕಾರಗಳ ಭಾವ ಲಹರಿಗೆ ನೂಕಿದೆ ಕವಿತೆ.
-ಚಂದ್ರಶೇಖರ ಶ್ರೀನಿವಾಸಪುರ, ಕೋಲಾರ
ಚಿತ್ರ್