ವಿಶ್ವ ಗುಬ್ಬಿ ದಿನಕ್ಕಾಗಿ ಒಂದಿಷ್ಟು...

ವಿಶ್ವ ಗುಬ್ಬಿ ದಿನಕ್ಕಾಗಿ ಒಂದಿಷ್ಟು...

ಕವನ

ಗಝಲ್

ಚೀಂವ್ ಚೀಂವ್ ಗುಬ್ಬಿಮರಿಗೆ ನೀರಿಡು ಮನುಜ

ಸುತ್ತ ಮುತ್ತ ಹಾರುವ ಪಾಪಚ್ಚಿಗೆ ಕಾಳಿಡು ಮನುಜ

 

ಜೀವ ಉಳಿಸಿಕೊಳ್ಳಲು ಹೆಣಗಾಡುವ ಪರಿಸ್ಥಿತಿ ತಂದೊಡ್ಡಿದೆಯಲ್ಲ

ಭಾವಕೆ ನೆಲೆಬೆಲೆಯಿಲ್ಲದೆ ಕೊರಗಿ ಘೋಳಿಡು ಮನುಜ

 

ಪ್ರಕೃತಿ ನಾಶ ಸಂತಾನಕ್ಕೆ ಕೊಳ್ಳಿ ಇಟ್ಟಿತಲ್ಲ

ವಿಕೃತಿ ಮನಸಿನಲಿ ಉಸಿರು ಹಿಡಿದಿಡು ಮನುಜ

 

ತಂತ್ರಜ್ಞಾನದ ಹೆಸರಿನಲಿ ನಶಿಸುವುದ ನೋಡುತ್ತಿರುವೆ

ಮಂತ್ರಕ್ಕೆ ಮಾವಿನಕಾಯಿ ಉದುರದು ಅರಿತಿಡು ಮನುಜ

 

ರತುನಳ ಸುಂದರ ಕನಸು ನನಸಾಗುವುದೆಂತು

ಕತ್ತಿಯ ಅಲಗಿನ ಹರಿತ ತಿಳಿದಿಡು ಮನುಜ

***

ಗುಬ್ಬಚ್ಚಿ

ಗುಬ್ಬಚ್ಚಿ ಗುಬ್ಬಚ್ಚಿ

ಪಕ್ಷಿಲೋಕದ ಪಾಪಚ್ಚಿ

ನಾ ನಿನ್ನ ನೋಡಿ ಮೆಚ್ಚಿ

 ಟವರಿನಿಂದಾಗಿ ನೀ ನೆಲಕಚ್ಚಿ

ನನಗಾಯಿತು ದುಃಖ ಹೆಚ್ಚಿ

ನೀನೇ ನನ್ನ ಮುದ್ದು ಪಾಪಚ್ಚಿ

***

ಸಂತತಿ ಉಳಿಸುವ...

ಗುಟುಕನರಸಿ ಬಂದವಿಂದು

ಪುಟ್ಟು ಪುಟಾಣಿ ಹಕ್ಕಿಗಳು

ಕಾಳನಿಟ್ಟ ಪುಣ್ಯಾತ್ಮರ

ನೆನೆದು  ಕಾಳು ತಿನ್ನುತ

 

ಬಟ್ಟಲಲಿ  ಹರಡಿದೆ

ಮನಸಾರೆ ತಿಂದಿವೆ

ಜೊತೆಸೇರಿ ಬದುಕೋಣ

ಎಂಬ ತತ್ವ ಸಾರಿವೆ

 

ಗುಬ್ಬಿಗಳನು ಕಾಪಾಡಿ

ಸಂತತಿಯ ಉಳಿಸುವ

ಜಲದ ಜೊತೆಗೆ ಕಾಳನಿಟ್ಟು

ಹಸಿವನ್ನು ನೀಗಿಸುವ

 

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್