ವಿಶ್ವ ಚೆಸ್ ದಿನ
ಚದುರಂಗ ಅಥವಾ ಚೆಸ್ ಎನ್ನುವುದು ಬಹಳ ಪ್ರಾಚೀನವಾದ ಆಟ. ನಮ್ಮ ಬುದ್ದಿಮತ್ತೆಗೆ ಸವಾಲಾದ ಆಟವಿದು. ಇದರಲ್ಲಿ ದೈಹಿಕ ಚಟುವಟಿಕೆಗಳಿಲ್ಲದೇ ಹೋದರೂ ಮಾನಸಿಕವಾಗಿ ಬಹಳ ಗಟ್ಟಿಯಾಗಿರಬೇಕಾಗುವುದು ಅತ್ಯಗತ್ಯ. ಆಟದಲ್ಲಿ ನಮ್ಮ ಪ್ರತಿಯೊಂದು ನಡೆಯು ಜಾಗರೂಕತೆಯಿಂದ ಕೂಡಿರಬೇಕು. ಇಲ್ಲದೇ ಹೋದರೆ ನೀವು ನಿಮ್ಮ ಪ್ರಮುಖ ಆಟಗಾರರನ್ನು ಕಳೆದುಕೊಳ್ಳಬೇಕಾಗುತ್ತದೆ. ಮಕ್ಕಳಿಗೆ ತಮ್ಮ ಏಕಾಗ್ರತೆಯ ಶಕ್ತಿಯನ್ನು ಬೆಳೆಸಲು ಈ ಆಟವನ್ನು ಆಡುವಂತೆ ಪ್ರೋತ್ಸಾಹಿಸಬಹುದು. ಈ ಆಟ ಆಡುವುದರಿಂದ ಅವರಲ್ಲಿ ಏಕಾಗ್ರತೆ, ಸಂಯಮ ಹಾಗೂ ಸರಿಯಾದ ಸಮಯದಲ್ಲಿ ಯೋಗ್ಯ ನಿರ್ಧಾರ ಕೈಗೊಳ್ಳುವ ಕ್ಷಮತೆ ಹೆಚ್ಚುತ್ತದೆ.
ಚೆಸ್ ಪ್ರಪಂಚದಾದ್ಯಂತ ಜನಪ್ರಿಯವಾಗಿರುವ ಒಂದು ಕ್ರೀಡೆಯಾಗಿದೆ. ಬಹಳಷ್ಟು ವೃತ್ತಿಪರರು ಮತ್ತು ಹವ್ಯಾಸಿಗಳು ಈ ಕಷ್ಟ, FIDE ಯ ಖಾತೆಯಲ್ಲಿ ಅಂತರರಾಷ್ಟ್ರೀಯ ಸಂಘಟನೆ ಇದೆ ಮತ್ತು ಜುಲೈ 20 ರಂದು ಪ್ರತಿವರ್ಷ ವಿಶ್ವ ಚೆಸ್ ದಿನವನ್ನು ಆಚರಿಸಲಾಗುತ್ತದೆ
ಚದುರಂಗದ ಆಟವನ್ನು ಭಾರತದಲ್ಲಿ ಕಂಡುಹಿಡಿಯಲಾಯಿತು. 7 ನೇ ಶತಮಾನದಲ್ಲಿ ಅವರು ಇದೇ ರೀತಿಯ ಆಟ ಆಡುತ್ತಿದ್ದರು ಎಂದು ತಿಳಿದು ಬರುತ್ತದೆ. ಚದುರಂಗದ ರೀತಿಯ ಹಲವಾರು ಆಟಗಳನ್ನು ಭಾರತದ ಪ್ರಾಚೀನ ರಾಜಮನೆತನದವರು ಆಡುತ್ತಿದ್ದರು. ಚದುರಂಗದಾಟದ ಬೇರುಗಳು 1924 ರಲ್ಲಿ ಪ್ಯಾರಿಸ್ ನಲ್ಲಿ ವಿಶ್ವ ಚೆಸ್ ಸಂಸ್ಥೆ, ಅಥವಾ FIDE ಸ್ಥಾಪನೆಯಾದ ಬಳಿಕ ವಿಶ್ವದಾದ್ಯಂತ ಹರಡಲಾರಂಭಿಸಿತು. ನಂತರ 1966 ರಲ್ಲಿ ಚೆಸ್ ಸ್ಪರ್ಧೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಜುಲೈ 20 ರಂದು 'ವಿಶ್ವ ಚೆಸ್ ದಿನ' ಎಂಬ ಆಚರಣೆಯನ್ನು ಜಾರಿಗೆ ತರಲಾಯಿತು. ಅಂದಿನಿಂದ ಪ್ರತೀ ವರ್ಷ ಜುಲೈ 20 ನ್ನು 'ವಿಶ್ವ ಚೆಸ್ ದಿನ' ಎಂದು ಆಚರಿಸಲಾಗುತ್ತಿದೆ.
ಸಾಮಾನ್ಯವಾಗಿ, ಚೆಸ್ ಒಂದು ಅತ್ಯಂತ ಸಾಮಾನ್ಯ ಆಟವಾಗಿದ್ದು, ಪ್ರಪಂಚದ ನೂರಕ್ಕೂ ಹೆಚ್ಚಿನ ದೇಶಗಳಲ್ಲಿ ಗುರುತಿಸಲ್ಪಟ್ಟಿದೆ. ಇದು ಜನಪ್ರಿಯತೆ ಮಾತ್ರವಲ್ಲದೆ ಅನೇಕ ಜನರಿಗೆ ಅದರ ಮಹತ್ವವೂ ಕೂಡಾ ಹೇಳುತ್ತದೆ. ಚೆಸ್ ಆಟಗಾರರು ವಿವಿಧ ಪಂದ್ಯಾವಳಿಗಳಿಗೆ ಸಾಕಷ್ಟು ಸಮಯವನ್ನು ವಿನಿಯೋಗಿಸುತ್ತಾರೆ ಮತ್ತು ನಿರಂತರವಾಗಿ ತಮ್ಮನ್ನು ತಾವು ಬೆಳೆಸಿಕೊಳ್ಳುತ್ತಾರೆ, ಆಟದ ಕೌಶಲ್ಯ ಮತ್ತು ಅವರ ಮನಸ್ಸನ್ನು ಅಭಿವೃದ್ಧಿಪಡಿಸುತ್ತಾರೆ. ಎಲ್ಲಾ ನಂತರ, ನೀವು ತಿಳಿದಿರುವಂತೆ ಚೆಸ್, ಯಾವಾಗಲೂ ಮಾನಸಿಕ ಒತ್ತಡದ ಅಗತ್ಯವಿರುವ ಒಂದು ಆಟವಾಗಿದೆ, ಆದ್ದರಿಂದ ಈ ಅದ್ಭುತ ಆಟದ ಆಟಗಾರರು ಸ್ವಲ್ಪ ಚುರುಕಾದ ಆಗಲು ಸಹ ಆಶ್ಚರ್ಯವೇನಿಲ್ಲ.
ವಿಶ್ವದಾದ್ಯಂತ ಪ್ರತೀ ವರ್ಷ ಹಲವಾರು ಚೆಸ್ ಆಟದ ಪಂದ್ಯಾಟಗಳು ನಡೆಯುತ್ತವೆ. ಚೆಸ್ ನಲ್ಲಿ ಅತ್ಯುತ್ತಮ ಸಾಧನೆ ಮಾಡಿದವರನ್ನು ಗ್ರಾಂಡ್ ಮಾಸ್ಟರ್ ಎಂದು ಕರೆಯುತ್ತಾರೆ. ಭಾರತದಲ್ಲಿಯೂ ಹಲವಾರು ಮಂದಿ ಅತ್ಯುತ್ತಮ ಚೆಸ್ ಪಟುಗಳಿದ್ದಾರೆ. ಅವರಲ್ಲಿ ಖ್ಯಾತವೆತ್ತವರು ವಿಶ್ವನಾಥನ್ ಆನಂದ್. ಇವರು ಹಲವಾರು ಮಂದಿ ವಿದೇಶೀ ಆಟಗಾರರನ್ನು ಪರಾಭವಗೊಳಿಸಿದ್ದಾರೆ. ಭಾರತದ ಗ್ರಾಂಡ್ ಮಾಸ್ಟರ್ ಗಳ ಪೈಕಿ ಪೆಂಟಾಳ ಹರಿಕೃಷ್ಣ, ಸಂತೋಷ್ ವಿದಿತ್, ಬಿ ಅಭಿಬನ್ ಮೊದಲಾದವರು ಪ್ರಮುಖರು. ಭಾರತದಲ್ಲಿ ಸುಮಾರು ೭೫ಕ್ಕೂ ಅಧಿಕ ಮಂದಿ ಗ್ರಾಂಡ್ ಮಾಸ್ಟರ್ ಗಳಿದ್ದಾರೆ.
ಭಾರತದ ಚೆಸ್ ಆಟಗಾರರಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ. ಕೊನೆರು ಹಂಪಿ ಭಾರತದ ಮಹಿಳಾ ಗ್ರಾಂಡ್ ಮಾಸ್ಟರ್. ಮೊದಲು ಬಹಳ ಸಮಯ ತೆಗೆದುಕೊಳ್ಳುತ್ತಿದ್ದ ಚೆಸ್ ಆಟವನ್ನು ಜನಪ್ರಿಯಗೊಳಿಸಲು ಈಗ ರಾಪಿಡ್ (ವೇಗವಾಗಿ) ಚೆಸ್ ಪಂದ್ಯಾಟಗಳನ್ನು ನಡೆಸಲಾಗುತ್ತಿದೆ. ಕಂಪ್ಯೂಟರ್ ಜೊತೆಗೂ ಪಂದ್ಯಾಟವನ್ನು ಆಡುತ್ತಿದ್ದಾರೆ.
ಜುಲೈ 20 ರಂದು ವಿಶ್ವ ಚೆಸ್ ದಿನ. ಕೆಲವು ಆಟಗಳನ್ನು ಆಡಲು ಮತ್ತು ಎಷ್ಟು ಕಷ್ಟ ಪ್ರೇಮಿಗಳು ಮತ್ತು ವೃತ್ತಿಪರರು ಈ ಕಠಿಣ, ಆದರೆ ನಿಸ್ಸಂಶಯವಾಗಿ ಕುತೂಹಲಕಾರಿ ಆಟಕ್ಕೆ ಒಳಗಾಗಲು ಯೋಚಿಸುತ್ತಾರೆ ಎಲ್ಲಾ ಸ್ನೇಹಿತರಿಗೂ ವಿಶ್ವ ಚೆಸ್ ದಿನದ ಶುಭಾಶಯಗಳು...
(ಆಧಾರ) ಅರುಣ್ ಡಿ'ಸೋಜ, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ