ವಿಶ್ವ ಪುಸ್ತಕ ದಿನ

ವಿಶ್ವ ಪುಸ್ತಕ ದಿನ

ಉತ್ತಮ ಪುಸ್ತಕವೊಂದು ಒಳ್ಳೆಯ ಗೆಳೆಯನಿದ್ದಂತೆ.. ಪುಸ್ತಕ ಓದುವ ಹವ್ಯಾಸ ಬೆಳಸಿಕ್ಕೊಂಡ ದಿನಗಳು ನೆನಪು ಮಾಡಿಕ್ಕೊಂಡಾಗ ಮನಸ್ಸಿಗೆ ಸಂತೋಷವಾಗುತ್ತದೆ. ಬೋಟ್ ಲ್ಲಿ ಸಮುದ್ರಕ್ಕೆ ಇಳಿಯುವಾಗ ನಮ್ಮೊಂದಿಗೆ ವಾರ ಪತ್ರಿಕೆ ಮಂಗಳ ಪುಸ್ತಕ ಇರುತಿತ್ತು. ಒಬ್ಬರು ಓದಿ ಆದ ಮೇಲೆ ಮತ್ತೊಬ್ಬರು ಓದುವ ಹವ್ಯಾಸ ಕೆಲವು ಮೀನುಗಾರರಲ್ಲಿ ಇತ್ತು. ಅಂದಿನ ನೆನಪು ಆದಾಗ ಹೆಮ್ಮೆ ಆಗುತ್ತದೆ. ಅದರಲ್ಲಿ ಬರುವ ಚೆಂದದ ಧಾರವಾಹಿ, ಕಾದಂಬರಿ, ಕಥೆಗಳು, ಚುಟುಕು ನಮ್ಮ ಮನಸ್ಸನ್ನು ಸೆಳೆದು ಇಟ್ಟುಕೊಳ್ಳುತ್ತಿತ್ತು. ಪ್ರತಿ ವಾರವು ಕುತೂಹಲ. ಪುಸ್ತಕ ಒಂದು ಅಂಗಡಿಯಲ್ಲಿ ಸಿಗದಿದ್ದಾಗ ಬೇರೆ,ಅಂಗಡಿಯನ್ನು ಹುಡುಕಿಕೊಂಡು ಹೋಗಿ ತರುತ್ತಿದ್ದೆವು. ಪುಸ್ತಕ ಓದುವುದರಿಂದ ಬರುವ ಸ್ವಲ್ಪ ಜ್ಞಾನ ಮತ್ತು ತಿಳುವಳಿಕೆ ಮನುಷ್ಯನ ಉತ್ತಮ ದಾರಿಯಲ್ಲಿ ಕರೆದುಕೊಂಡು ಹೋಗುತ್ತದೆ.

ಜೀವನದ ದಾರಿಯಲ್ಲಿ ಉತ್ತಮ ಪುಸ್ತಕಗಳು ಸಂಗಾತಿಯಾದರೆ, ಸುಂದರ ಬದುಕಿನ ಪಯಣ. ಎಪ್ರಿಲ್ ೨೩ ವಿಶ್ವ ಪುಸ್ತಕ ದಿನ. ಎಲ್ಲರಿಗೂ ಶುಭಾಶಯಗಳು.

-‘ಕಡಲಕವಿ’ ಶಿವಾನಂದ ಬಿ ಮೊಗೇರ, ಭಟ್ಕಳ

ಚಿತ್ರ ಕೃಪೆ: ಇಂಟರ್ನೆಟ್ ತಾಣ