ವಿಶ್ವ ಮಾನವನಾಗು...
ಕವನ
ನೀನೊಬ್ಬ ಮಿಡಿವ ಹೃದಯದ ಮಾನವನಾಗು
ವಿಶ್ವ ಜೀವಿಗಳಿಗೇ ತುಡಿವ ಅಂತರಾತ್ಮವಾಗು!
ತಂದೆ ತಾಯಿಗಳಿಗೆ ಸುವಿಧೇಯ ಮಗನಾಗು
ಗುರುವಾಜ್ಞೆಯ ಪಾಲಿಪ ಪರಮ ಶಿಷ್ಯನಾಗು
ಸ್ನೇಹಿತರ ಪಾಲಿನ ನಂಬಿಕೆಯ ಮಿತ್ರನಾಗು
ಮಡದಿ ಕಷ್ಟ-ಸುಖಗಳಿಗೆ ಪ್ರಿಯ ಸಖನಾಗು!
ಮಕ್ಕಳಾಭಿವೃದ್ಧಿಗೆ ಶ್ರಮಿಸುವ ಪ್ರೀತಿ ಪಿತನಾಗು
ಬೇಡಿದವರಿಗೆ ನೀಡುವ ಪರಮ ದಾನಿಯಾಗು
ನೊಂದವರ ಕಣ್ಣೀರೊರೆಸುವ ಕರವಸ್ತ್ರವಾಗು
ಸಮಾಜಕಾಗಿ ಮಿಡಿವ ಕರ್ಮಯೋಗಿಯಾಗು!
ನಿನ್ನ ಕಾಯಕಕೆ ಪರಮ ನಿಷ್ಠೆಯ ಸೇವಕನಾಗು
ದೇಶಕೆ ನೀಡುವ ಸರ್ವಸಂಗ ಪರಿತ್ಯಾಗಿಯಾಗು
ಸ್ವಾಮಿ ವಿವೇಕಾನಂದರೊಲು ಶ್ರೇಷ್ಠ ಗುರುವಾಗು
ಈ ವಿಶ್ವಕೇ ನೀನು ಆದರ್ಶ ವಿಶ್ವ ಮಾನವನಾಗು!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
