ವಿಶ್ವ ಮಾನವನಿಗೊಂದು ನಮನ

ವಿಶ್ವ ಮಾನವನಿಗೊಂದು ನಮನ

ಎಲ್ಲಾದರೂ ಇರು ; ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು : ಕನ್ನಡವೇ ಸತ್ಯ; ಕನ್ನಡವೇ ನಿತ್ಯ, ಎನ್ನುವ ಕನ್ನಡದೊಲುಮೆಯ ಕಂದ, ಸರ್ವಮಾನ್ಯರಾದ ಶ್ರೀ ಕುವೆಂಪುರವರ ಜನುಮ ದಿನವಿಂದು. ಜಗದಕವಿ, ಯುಗದಕವಿ, ನಮ್ಮೊಲವಿನ ಕವಿ, ಹೇಳಲು ಪದಗಳಾದರೂ ಇದೆಯೇ? ಖಂಡಿತಾ ಇಲ್ಲ. ಅಂತಹ ಶ್ರೇಷ್ಠ ಕವಿಪುಂಗವರು , ಸಾಹಿತಿಯವರು, ಈ ಮಣ್ಣಿನ ಕೊಡುಗೆ, ನಮ್ಮೆಲ್ಲರ ಹಿರಿಮೆ, ಮೇರು ವ್ಯಕ್ತಿತ್ವ, ಮೇರು ಪರ್ವತ, ಈ ಕನ್ನಡ ನಾಡಿನ, ಅಲ್ಲಲ್ಲ ಈ ಭರತಖಂಡದ * ಕಲ್ಪತರು* ,ರಾಷ್ಟ್ರಕವಿ ಕುವೆಂಪುರವರು. ಇವರನ್ನು ನೆನಪಿಸಿಕೊಳ್ಳುವುದು ಕನ್ನಡಿಗರಾದ ನಮ್ಮೆಲ್ಲರ ಆದ್ಯ ಕರ್ತವ್ಯ ಸಹ.

ಶ್ರೀಯುತ ವೆಂಕಟಪ್ಪ ಗೌಡ, ಶ್ರೀಮತಿ ಸೀತಮ್ಮ ದಂಪತಿಗಳ ಮುದ್ದಿನ ಮಗನಾಗಿ, ಶಿವಮೊಗ್ಗದ ತೀರ್ಥಹಳ್ಳಿಯ, ಕುಪ್ಪಳಿ ಯಲ್ಲಿ ೨೯-೧೨-೧೯೦೪ರಲ್ಲಿ ಜನಿಸಿದವರು. ೧೦-೧೧-೧೯೯೪ರವರೆಗೆ ಬದುಕಿ ಸಾಹಿತ್ಯ ಸರಸ್ವತಿಯ ಸೇವೆಯನ್ನು ಮಾಡಿದ ಹಿರಿಯ ಚೇತನ ಇವರು.

ಇವರಿಗೆ ಸಂದ ಪ್ರಶಸ್ತಿಗಳನ್ನು ಲೆಕ್ಕ ಹಾಕಲು ಕಷ್ಟ. ೧೯೫೮---ಪದ್ಮಭೂಷಣ, ೧೯೬೪-ರಾಷ್ಟ್ರಕವಿ, ೧೯೬೮-ಜ್ಞಾನ ಪೀಠ, ೧೯೮೮-ಪಂಪ ಪ್ರಶಸ್ತಿ, ೧೯೯೨-ಕರ್ನಾಟಕ ರತ್ನ,ಪ್ರಶಸ್ತಿಗಳು ಸಂದಿವೆ. ೧೯೫೭ರಲ್ಲಿ  ೩೬ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠವನ್ನು ಧಾರವಾಡದಲ್ಲಿ ಅಲಂಕರಿಸಿದವರು.

ಆತ್ಮಕಥನ, ನೆನಪಿನದೋಣಿ, ಮಹಾಕಾವ್ಯ, ಶ್ರೀರಾಮಾಯಣ ದರ್ಶನಂ ಬರೆದವರು. ಜ್ಞಾನ ಪೀಠ  *ಶ್ರೀ ರಾಮಾಯಣ ದರ್ಶನ*ಮಹಾಕಾವ್ಯಕ್ಕೆ ಸಂದಿದೆ. ಲೆಕ್ಕವಿಲ್ಲದಷ್ಟು ಸಾಹಿತ್ಯದಲ್ಲಿ ಕೈಯಾಡಿಸಿದವರು, ಕವನ ಸಂಕಲನಗಳು, ಮಕ್ಕಳ ಸಾಹಿತ್ಯ ರಚಿಸಿದವರು., *ವಿಶ್ವ ಮಾನವ ಸಂದೇಶ* ಕವನ ಸಂಕಲನ.

ಕುವೆಂಪು ಕಾವ್ಯನಾಮದಿಂದ ಪ್ರಖ್ಯಾತರಾದವರು. ಕವಿತೆ, ಕಾದಂಬರಿ, ದೇಶಪ್ರೇಮ, ಆಧ್ಯಾತ್ಮ, ವಿಚಾರ ಸಾಹಿತ್ಯ, ನವೋದಯ, ಹೀಗೆ ಹಲವು ಮಜಲುಗಳಲ್ಲಿ ರಚನೆಯ ಕಾರ್ಯವನ್ನು ಮಾಡಿದವರು. ಇವರ ಮೇಲೆ ಪ್ರಭಾವ ಬೀರಿದವರು ಮಹಾತ್ಮಾ ಗಾಂಧೀಜಿ, ವರ್ಡ್ ವರ್ತ್ ,ರವೀಂದ್ರನಾಥ ಠಾಗೋರ್ ಅವರು. ಇಂತಹ ಧೀಮಂತ ಸಾಹಿತಿ,*ವಿಶ್ವಮಾನವ ಸಂದೇಶ* ಸಾರಿದವರಿಗೆ ನಮ್ಮದೊಂದು ನುಡಿನಮನ.

ಜೈ ಕನ್ನಡಾಂಬೆ

ಸಿರಿಗನ್ನಡಂ ಗೆಲ್ಗೆ

-ರತ್ನಾಭಟ್ ಭಟ್ ತಲಂಜೇರಿ

(ಸಂಗ್ರಹ)