ವಿಷದ ವಿಷಯ ವಿಹಾರ...

ವಿಷದ ವಿಷಯ ವಿಹಾರ...

ಕವನ

 

ಅಂದು ಅಂಕೆಯಲಿದ್ದೆ ನಾನು 
ಬಂದು ಕರೆದೊಯ್ದೆ ನೀನು 
ಬೆಂಕಿ ತಗುಲಿಸಿ  ಬೇಲಿಗೆ;
 
ಹಲವು ದಿನಗಳು  ಬಾಳಲಿಲ್ಲ 
ಒಲವು ಹಾಗೆ ಬಾಡಿತಲ್ಲ 
ಶಂಕೆಯದು ಚಾಚಿತು ನಾಲಿಗೆ ;
 
ಕೊಂಕು ಮಾತನು ಹೊಸೆದೆಯಲ್ಲ 
ಮಂಕು ಕವಿಸಿ ಮನಕೆ ನೀನು 
ಉರಿಯ ಹಚ್ಚಿ ಹೂ ಮಾಲೆಗೆ;
 
ನೇಯ್ದ ಕನಸೆಲ್ಲ ಕೊಯ್ದೆ 
ನಾಳೆ ಬಾಳನು ಎಳೆದು ಒಯ್ದೆ 
ಹಾಲಹಲವನು ಬೆರೆಸಿ ಬೆಳ್ನೊರೆ  ಹಾಲಿಗೆ.
-ಮಾಲು