ವಿಸ್ಮಯ ಬರೀ ವಿಸ್ಮಯ!
ಬರಹ
ಮೊಗೆದ೦ತೆಲ್ಲ ಬಿರಿವ ಮೊಗ್ಗು
ತೋಡಿದಷ್ಟು ಮೂಡುವ ಸುವರ್ಣ
ಸಾಗಿದಷ್ಟು ಸವೆಯದ ಹಾದಿ
ಹಾಡಿದಷ್ಟು ಉಳಿಯುವ ರಾಗ
ಪ್ರೀತಿಸಿದಷ್ಟು ಸನಿಹ ಬರುವ ಮತ್ಸರ
ಚಿಗುರಿದಷ್ಟೇ ಮುರಿವ ಸ೦ಬ೦ಧಗಳು
ಅರಿತಷ್ಟು ಅರಳುವ ಅಜ್ಞಾನ
ಮರೆತಷ್ಟು ಮರಳುವ ನೆನಪುಗಳು
ಬರೆದಷ್ಟೂ ಬಾಕಿಯಿರುವ ಶಬ್ದಗಳು
ಬದುಕಿದಷ್ಟು ಅರ್ಥವಾಗದ ನಿಗೂಢ
ನಲಿದಷ್ಟು ನಲುಗುವ ನೋವು
ಕಡೆಯಲಿ ಕುಲುಕುವ ಸಾವು
ಏನೀ ಅನ೦ತದಾಟ?
ಏನೀ ವಿಶ್ವ ವಿಸ್ಮಯ?!
******