ವಿಸ್ಮಯ
ಬರಹ
ಮಂದಗಮನೆ ಕಾವೇರಿಯಂದದಿ ಜೀವನದಿ
ದೃಶ್ಯಕ್ರಿಯೆಯ ನಿತ್ಯ ನಿಯಮ ಸೊಂಕಿಲ್ಲದ ಸ್ಥಿರ ಲಯ
ಸಹನ ಭಾವನದ ಪ್ರವಾಹ ಪ್ರಕೋಪ ವಿಕೋಪದ ಸುಳಿವಿಲ್ಲ
ಸುಳಿಯಿಲ್ಲ ಸೆಳವಿಲ್ಲ ಹಸನು ಮಾಡಿ ಹರಿಯುವ ಮಂದಸ್ಮಿತವಿದು
ಸ್ಮರಣ ಪ್ರಜ್ನೆ ಸುಪ್ತ ಮಥನ ಮನ್ಯುವ ಗೆಲುವ ಜಿಜ್ನಾಸೆ
ಜಾಗೃತಿಸುವ ಜನಪದ ಪ್ರಕೃತಿ ಮನದ ಮಾಯಾಲೋಕ
ಕೇಶವನ ನೆನೆದು ಗಂಧ ಧರಿಸಿ ಮುಗಿದೆ ಕೈಯ ಭಾವ ಮನೋಹರ
ಜನ್ಮ ಲಾವಣ್ಯದ ಮೂಲೆಯ ನೆನಪ ಕಂಪು ವಾಸನೆಯ ಸದ್ಭಾವವ ಸ್ಫುರಿಸಿ