ವೀರ ಯೋಧರಿಗೆ ನಮನ

ವೀರ ಯೋಧರಿಗೆ ನಮನ

ಕವನ

ಭರತಮಾತೆಯ ವೀರ ಪುತ್ರರು

ಹೆಮ್ಮೆಯ ಕದನ ಕಲಿಗಳು| 

ಜನನಿ ಜನಕಗೆ ಹೆಸರ ತರುವರು

ದುಡಿವರೊಂದೇ ಮನದಲಿ||

 

ಗಾಳಿ ಮಳೆ ಚಳಿಯ ಲೆಕ್ಕಿಸದೆ

ಗಡಿಯ ರಕ್ಷಣೆ ಮಾಡ್ವರು|

ವೈರಿ ಪಡೆಯ ಅತಿಕ್ರಮಣವನ್ನು

ಸೂಕ್ಷ್ಮ ದೃಷ್ಟಿಲಿ ನೋಡ್ವರು||

 

ಯುದ್ಧ ರಂಗದಿ ಹಿಮ್ಮೆಟ್ಟದೆ

ಎದುರಾಳಿಯ ಸದೆಬಡಿದರು|

ಕೆಚ್ಚಿನಿಂದಲಿ ಕೊಚ್ಚಿ ಹಾಕುತ

ಧೀರ ಶೂರತನ ಮೆರೆಯುತ||

 

ತಮ್ಮವರ ಪ್ರಾಣ ಜತನದಿ ಉಳಿಸಿ

ಎದುರಾಳಿಗಳ ಪತನಗೊಳಿಸಿದ ಶೂರರು|

ಸಿಂಹದ ಮರಿಗಳು ಸಿಡಿಲಬ್ಬರದ ಕುವರರು

ಆಹಾರ ವಿಹಾರ ಐಷಾರಾಮಿ ತ್ಯಜಿಸಿದ ಪುತ್ರರು||

 

ಸೆರೆಸಿಕ್ಕರು ಚಿತ್ರ ಹಿಂಸೆ ನೀಡಿದರು

ಇಂಚು ಇಂಚು ಕಿಚ್ಚಲ್ಲಿ ದೇಹ ಸುಟ್ಟರು |

ವೀರ ಯೋಧರಿಗೆ ನಮನ ಸಲಿಸುವೆ

ತಾಯ್ನಾಡ ಸೇವೆಯಲಿ ಜೀವ ತೆತ್ತರು||

 

-ರತ್ನಾ ಕೆ ಭಟ್. ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್