ವೀರ ಸೈನಿಕ

ವೀರ ಸೈನಿಕ

ಕವನ

ವೀರ ಸೈನಿಕ

ಹೆಮ್ಮೆಯ ನಾವಿಕ

ಜೀವಕೆ ಜೀವವ

ಕೊಡುವ ಪ್ರೇರಕ||

 

ಧೈರ್ಯ ಸಾಹಸಕೆ

ಹಿಮಾಲಯದಂತೆ

ಚಳಿ ಗಾಳಿ ಮಳೆಗೆ

ಮೈಯೊಡ್ಡಿ ನಿಂತಿಹೆ||

 

ವೈರಿಗಳ  ದಾರಿಗೆ

ಅಡ್ಡವಾಗಿಹೆ ಪುತ್ರ

ಬೆಚ್ಚದೆ ಬೆದರದೆ

ಎದೆಯೊಡ್ಡಿದೆ||

 

ಸೂಕ್ಷ್ಮಾವಸೂಕ್ಷ್ಮತೆಗೆ

ಕಣ್ಣು ಕಿವಿಯಾದೆ

ಮಾತೆ ಭುವನೇಶ್ವರಿಯ

ಚರಣ ಸೇವಕನಾದೆ||

 

ನನ್ನವರ ತನ್ನವರ

ಪಾಶವೆಂದೂ ಇರದು

ಗುರಿಯೊಂದೆ ಛಲವೊಂದೆ

ದೇಶ ಹಿತ ರಕ್ಟಣೆ||

 

ಸಮರ್ಪಣೆ ತ್ಯಾಗ

ಬಾಳ ಹೊಲ ಸಾರ

 ಉಸಿರ ಬಲಿದಾನ 

ನೆತ್ತರ ಕಣಕಣ||

 

ಬುವಿಯ ತಬ್ಬಿದರಲ್ಲಿ

ಬೆಳ್ಳಿ ಬೆಳಕಾದೆ

ಧ್ರುವ ನಕ್ಷತ್ರದಂತೆ

ಅಜರಾಮರನಾದೆ||

-ರತ್ನಾ ಕೆ.ಭಟ್, ತಲಂಜೇರಿ

 

ಚಿತ್ರ್