ವೀರ ಸೈನಿಕ

ವೀರ ಸೈನಿಕ

ಕವನ

ಹೆತ್ತವಳಿಗಿಂತ ಹೊತ್ತವಳು ಮೇಲೆಂದು

ದೇಶ ಸೇವೆಗೆ ಹೊರಟನು

ಚಿತ್ತದಿ ಗತ್ತಿನ ದೇಶ ಪ್ರೇಮದ ಬುತ್ತಿಯ

ಕಟ್ಟಿಕೊಂಡು ಕಾಯುವನು||

 

ನಾನು ನನ್ನದು ಭಾವ ಬದಲಿಗೆ

ನಾವು ನಮ್ಮದು ಎನ್ನುವನು

ಸ್ವಾರ್ಥ ಬದುಕನು ತೊರೆದು ನಾಡಿಗೆ

ತನ್ನನೆ ಮುಡುಪಾಗಿ ಇಟ್ಟವನು ||

 

ಕ್ರಾಂತಿ ಕಿಡಿಯನು ಹಚ್ಚಿ ನಗೊರಿಗೆ

ಭ್ರಾಂತಿ ಬಿಡಿಸುವ ಸೈನಿಕನು

ಶಾಂತಿ ಕದಡುವ ದುರುಳ ದುಷ್ಟರ

ಚಣದಿ ಕೊಲ್ಲುವ ಸೈನಿಕನು

 

ರುದ್ರ ರಮಣೀಯ ನೆಲದಿ ರೌದ್ರ

ರೂಪ ತಾಳುವ ಸೈನಿನು

ಉಗ್ರನಾಗುತ ರುಂಡ ಚಂಡಾಡಿ

ಎಡೆಮುರಿ ಕಟ್ಟುವ ಸೈನಿಕನು ||

 

ಧೀರ ಶೂರನು ನಮ್ಮ ಯೋಧನು

ಭಾರತದ ವೀರ ಸೈನಿಕನು

ಭಾರತಾಂಬೆಯ ಹೆಮ್ಮೆಯ ಪುತ್ರನು

ಚರಿತೆಯ ಪುಟದಲಿ ಅಮರನು ||

 

-ಈರಪ್ಪ ಬಿಜಲಿ ಕೊಪ್ಪಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್