ವೆಜ್ ಸೂಪ್

ವೆಜ್ ಸೂಪ್

ಬೇಕಿರುವ ಸಾಮಗ್ರಿ

ಅರ್ಧ ಕಪ್ ಚಿಕ್ಕದಾಗಿ ಹೆಚ್ಚಿದ ಕ್ಯಾರೆಟ್, ಅರ್ಧ ಕಪ್ ಚಿಕ್ಕದಾಗಿ ಹೆಚ್ಚಿದ ಬೀನ್ಸ್ , ಅರ್ಧ ಕಪ್ ಹಸಿ ಬಟಾಣಿ, ಒಂದೂವರೆ ಕಪ್ ಬೀಜ ತೆಗೆದು ಬೇಯಿಸಿದ ಟೊಮ್ಯಾಟೋ ರಸ, ಒಂದು ಟೀ ಸ್ಪೂನ್ ಬೆಳ್ಳುಳ್ಳಿ ಪೇಸ್ಟ್ , ಒಂದು ಟೀ ಸ್ಪೂನ್ ಶುಂಠಿ ಪೇಸ್ಟ್ , ಎರಡು ಟೀ ಸ್ಪೂನ್ ಚೆನ್ನಾಗಿ ಹಚ್ಚಿದ ಕೊತ್ತಂಬರಿ ಸೊಪ್ಪು, ೩-೪ ಟೀ ಸ್ಪೂನ್ ಬೆಣ್ಣೆ , ಎರಡು ಟೀ ಸ್ಪೂನ್ ಕಾರ್ನ ಫ್ಲೋರ್, ಅರ್ಧ ಕಪ್ ಹಾಲು, ೩ ಗ್ಲಾಸ್ ನೀರು, ರುಚಿಗೆ ತಕ್ಕಷ್ಟು ಉಪ್ಪು, ಹಾಗೂ ಪೆಪ್ಪರ್ , ಅಲಂಕಾರಕ್ಕೆ ತುರಿದ ಚೀಸ್.

ತಯಾರಿಸುವ ವಿಧಾನ

ಕುಕ್ಕರ್ ನಲ್ಲಿ ಬೆಣ್ಣೆಯನ್ನು ಕರಗಿಸಿ ಅದಕ್ಕೆ ಬೆಳ್ಳುಳ್ಳಿ, ಶುಂಠಿ ಪೇಸ್ಟ ಸೇರಿಸಿ ಫ್ರೈ ಮಾಡಿ. ನಂತರ ಅದಕ್ಕೆ ಹೆಚ್ಚಿದ ಕ್ಯಾರೆಟ್, ಬೀನ್ಸ್, ಹಸಿ ಬಟಾಣಿ, ಟೊಮ್ಯಾಟೋ ಪ್ಯುರಿ ಸೇರಿಸಿ, ೩ ಗ್ಲಾಸ್ ನೀರು ಹಾಕಿ ೫-೬ ನಿಮಿಷಗಳ ಕಾಲ ಕುಕ್ಕರ್ ನಲ್ಲಿ ಬೇಯಿಸಿ. ನಂತರ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ೨-೩ ನಿಮಿಷಗಳ ಕಾಲ ಕುದಿಸಿ, ಅರ್ಧ ಕಪ್ ಹಾಲಿನಲ್ಲಿ ಕಾರ್ನ ಫ್ಲೋರ್ ಮಿಕ್ಸ್ ಮಾಡಿ ಸೇರಿಸಿ, ಉಪ್ಪು ಹಾಗೂ ಪೆಪ್ಪರ್ ಸೇರಿಸಿ, ಅಲಂಕಾರಕ್ಕೆ ಚೀಸ್ ತುರಿದು ಹಾಕಿ. ಬಿಸಿ ಬಿಸಿ ಸೂಪ್ ಚಳಿಗೆ ಹಿತವಾಗಿರುತ್ತದೆ.