ವೇಗವಾಗಿ ಊಟ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲಾ

ವೇಗವಾಗಿ ಊಟ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲಾ

ಬರಹ
  •      ಯಾರು ವೇಗವಾಗಿ ಮತ್ತು ಹೊಟ್ಟೆ ಭರ್ತಿಯಾಗುವ ತನಕ ತಿನ್ನುತ್ತಾರೋ ಅವರು ಇತರರಿಗಿಂತ ದಪ್ಪಗಾಗುವ ಸಾಧ್ಯತೆ ಮೂರು ಪಟ್ಟು ಹೆಚ್ಚಿರುತ್ತದೆ ಎಂದು ಜಪಾನ್ ಅಧ್ಯಯನವೊಂದು ತಿಳಿಸಿದೆ.
  •      ವೇಗವಾಗಿ ತಿನ್ನುವವರು ಮತ್ತು ತೃಪ್ತಿಯಾಗುವ ತನಕ ತಿಂದು ತೇಗುವವರನ್ನು ಗಮನಿಸಿದಾಗ ಅವರೆಲ್ಲರೂ ಧಡೂತಿ ದೇಹ ಅಥವಾ ಆಕಾರವಿಲ್ಲದ ದೇಹವನ್ನು ಹೊಂದಿದ್ದರು ಮತ್ತು ಶಕ್ತಿವಂತರಲ್ಲ. ಅವರು ಮೂರು ಪಟ್ಟು ಹೆಚ್ಚು ತೂಕ ಹೊಂದಿದ್ದರು ಎಂದು ಸಂಶೋಧನಾಕಾರರು ತಿಳಿಸಿದ್ದಾರೆ.
  •      ಹೆಚ್ಚಿನ ವಯಸ್ಕರು ಕೊಬ್ಬು ಶೇಖರಣೆಗೆ ಅವಕಾಶ ಕೊಡದೆ ಹೆಚ್ಚಿನ ಕ್ಯಾಲೊರಿ ಆಹಾರವನ್ನು ತಿನ್ನುವ ಗೋಜಿಗೆ ಹೋಗುವುದಿಲ್ಲ. ಆದರೆ ತಿನ್ನುವ ಶೈಲಿ ಬದಲಾಗಿದೆ.
  •      ಅಗ್ಗದ ಆಹಾರ ಬಹುಪ್ರಮಾಣದಲ್ಲಿ ತಿನ್ನುವುದು, ಫಾಸ್ಟ್ ಫುಡ್, ಕಡಿಮೆ ಜನರು ಒಟ್ಟಿಗೆ ಕುಳಿತು ಊಟ ಮಾಡುವುದು ಮತ್ತು ಊಟ ಮಾಡುವಾಗ ಗಮನ ಬೇರೆಡೆಗೆ ಹರಿಸುವುದು ಹೆಚ್ಚಾಗುತ್ತಿದೆ. ಉದಾಹರಣೆಗೆ ಕೆಲವರು ಆಹಾರ ಸೇವಿಸುವಾಗ ಟೀವಿ ನೋಡುತ್ತಾರೆ. ಇದರಿಂದ ಕೂಡಾ ದೇಹ ತೂಕ ಹೆಚ್ಚುತ್ತದೆ ಎಂದೂ ಈ ಸಂಶೋಧನೆ ತಿಳಿಸಿದೆ.
  •      ಮಕ್ಕಳಲ್ಲಿ ಆರೋಗ್ಯಕರವಾಗಿ ತಿನ್ನುವ ರೀತಿಯನ್ನು ತಿಳಿಸಿಕೊಡುವಲ್ಲಿ ಹೆತ್ತವರ ಶ್ರಮಿಸಬೇಕಾಗಿದೆ. ನಿಧಾನವಾಗಿ ಊಟ ಮಾಡುವುದು, ಅಗತ್ಯದಷ್ಟು ಮಾತ್ರ ಸೇವನೆ ಮತ್ತು ಗಮನವಿರಿಸಿ ಕುಟುಂಬ ಸಮೇತ ಆಹಾರ ಸ್ವೀಕರಿಸಲು ಸಲಹೆ, ಪ್ರೋತ್ಸಾಹ ನೀಡಬೇಕು.