ವೇದನೆ ಮತ್ತು ವಿರಹ
ಕವನ
ಹೊತ್ತು ಕಂತಿದರೂ ಬರಲಿಲ್ಲ ನೀನಿಂದು
ನನ್ನ ವೇದನೆ ನೂರು
ಕನಸೆಲ್ಲ ಕರಗುತಲೆ ನನಸಿಂದು ಮೂಡಿಹುದು
ನನ್ನೊಡಲ ಸವಿಯ ಹೀರು
ಊರೂರು ತಿರುಗುತಲಿ ಎಲ್ಲಿ ನೆಲೆಸಿರುವೆಯೊ
ಬಂದಿಂದು ನನ್ನ ನೋಡು
ಕೈಹಿಡಿದು ಸಂತೈಸು ಕಣ್ಣೀರ ಒರೆಸುತಲಿ
ಬೆಸುಗೆಯೊಳು ಸುಖವ ನೀಡು
ಮಳೆಯಿಂದು ಸುರಿಯುತಲೆ ನಿನ್ನ ನೆನಪಾಗುತಲೆ
ಮದನ ಮೋಹನನೇ ಆಗು
ಸವಿಯಾಗು ಖುಷಿಯಲ್ಲಿ ನನ್ನ ಇನಿಯನೇ ಆಗು
ಬಳಿ ಇರುತ ನಲ್ಲನಾಗು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್