ವೇದ ನಿನದೇ ಎಲ್ಲ ...

ವೇದ ನಿನದೇ ಎಲ್ಲ ...

ಕವನ

ಮೊದಲ ಸವಿಮಾತು
 ಅದರ ಸಿಹಿಗತ್ತು
ಕೊಡದ ಸಿಹಿಮುತ್ತು
 ಇನ್ನೂ ಬೇಕಿತ್ತು

ಉಸಿರ ತೊಳಲಾಟ
 ನನ್ನ ಕಾಡಿತ್ತು
ಎಂದೂ ಎಂದೆಂದೂ
 ಪ್ರೀತಿ ನಿನದಾಯ್ತು

ಯಾಕೋ ನನಗಿಂದು
ಧ್ಯಾನ ಬೇಕಾಯ್ತು
ಅವಳ ಜಗಕಿಂದು
ನನ್ನ ಅಣಿಯಾಯ್ತು

ನನ್ನ ಬಾಳಲ್ಲಿ
ಆ ಏಕಾಂತ ಜಾರೊಯ್ತು
ನಿನಗೆ ಎನ್ನೊಲವೆ
ಈ ಬಾಳು ಮುಡಿಪಾಯ್ತು

ಏನೂ ಉಳಿದಿಲ್ಲ
ಮಾತೂ ನಾನದಲ್ಲ
ಮೌನ ಸರಿಯಲ್ಲ
ವೇದ ನಿನದೇ ಎಲ್ಲ ...
        ನಿನದೇ ಎಲ್ಲ...

                                  © ರಾಜು