ವೈನ್ ಡೋರ್ಸ್ - ವಿಂಡೋಸ್ ತಂತ್ರಾಂಶದ ಲಿನಕ್ಸ್ ಎಮ್ಯುಲೇಟರ್

ವೈನ್ ಡೋರ್ಸ್ - ವಿಂಡೋಸ್ ತಂತ್ರಾಂಶದ ಲಿನಕ್ಸ್ ಎಮ್ಯುಲೇಟರ್

ಬರಹ

ವಿಂಡೋಸ್ ಸಾಫ್ಟ್ವೇರ್ ಗಳನ್ನ ಲಿನಕ್ಸ್ ನಲ್ಲಿ ಉಪಯೋಗಿಸ್ಬಹುದೇ? ಇದು ಅನೇಕರಿಂದ ಕೇಳ್ಪಟ್ಟ ಪ್ರಶ್ನೆ.

ಏಕಿಲ್ಲ. ಲಿನಕ್ಸ್ ನಲ್ಲಿ wine (ವೈನ್) ಅನ್ನೋ ತಂತ್ರಾಂಶ ಇನ್ಸ್ಟಾಲ್ ಮಾಡಿಕೊಂಡ್ರಾಯಿತು. ನಿಮ್ಮ ವಿಂಡೋಸ್ .exe ಫೈಲ್ ಗಳ ಮೇಲೆ ಕ್ಲಿಕ್ಕಿಸಿ ಉಪಯೋಗಿಸಲಿಕ್ಕೆ ಸಾಧ್ಯ. ಮೊದಮೊದಲು ವೈನ್ ಅನ್ನ ಲಿನಕ್ಸ್ ನಲ್ಲಿ ಇನ್ಸ್ಟಾಲ್ ಮಾಡಿ ಉಪಯೋಗಿಸ್ಲಿಕ್ಕೆ ಬೇಜಾರಾಗ್ತಿತ್ತು. ಇತ್ತೀಚೆಗೆ wine-doors ನೋಡಿ ಅದನ್ನ ಇನ್ಸ್ಟಾಲ್ ಮಾಡಿ ಕೊಂಡ ನಂತರ ವಾವ್! ವಿಂಡೋಸ್ ಅಪ್ಲಿಕೇಶನ್ ರನ್ ಮಾಡೋದು ತುಂಬಾನೇ ಸುಲಭ ಆಯ್ತು.

ವೈನ್ ಡೋರ್ಸ್ ಲಿನಕ್ಸ್ ನಲ್ಲಿ ವಿಂಡೋಸ್ ಅಪ್ಲಿಕೇಶನ್ ಗಳಿಗಿರೋ "Add/Remove Programs" ತರದ ಪ್ಯಾಕೆಜ್ ಮ್ಯಾನೇಜ್ ಮೆಂಟ್ ಟೂಲ್. ಇಂಟರ್ನೆಟ್ ಅಪ್ಲಿಕೇಶನ್ , ಕೆಲವು ವಿಂಡೋಸ್ ಗೇಮ್ಗಳು (ಕ್ವೇಕ್) , ವಿಂಡೋಸ್ ಫಾಂಟ್ಗಳು (ಉಪಯೋಗಿಸಲಿಕ್ಕೆ ನಿಮ್ಮಲ್ಲಿ ವಿಂಡೋಸ್ ಲೈಸೆನ್ಸ್ ಇರಬೇಕು) ಇತ್ಯಾದಿಗಳನ್ನ ಸುಲಭವಾಗಿ ಇನ್ಸ್ಟಾಲ್ ಮಾಡಿ ಕೊಳ್ಳಬಹುದು. ಇದು ವಿಂಡೋಸ್ ಅಪ್ಲಿಕೇಶನ್ ಲಿನಕ್ಸ್ ನಲ್ಲಿ ರನ್ ಆಗಲಿಕ್ಕೆ ಬೇಕಾದ ಎಷ್ಟೋ ಲೈಬ್ರರಿಗಳನ್ನ ಮೊದಲ ಬಾರಿಗೇ ಇನ್ಸ್ಟಾಲ್ ಮಾಡೋದ್ರಿಂದ ಮತ್ತೆ ತಲೇ ನೋವು ಇರೋದಿಲ್ಲ

ಕೆಳಗಿನ ವಿಡಿಯೋ ವೈನ್ ಡೋರ್ಸ್ ಅನ್ನ ಮೊದಲು ಇನ್ಸ್ಟಾಲ್ ಮಾಡಿದಾಗ ಫಾಂಟ್, ಆಟೋ ಕೀ ಇತ್ಯಾದಿಗಳು ಇನ್ಸ್ತಾಲಾಗೋದನ್ನ ತೋರಿಸ್ತದೆ. html ಫಾಂಟ್ ರೆಂಡರಿಂಗ್ ಶೇಕಡ ೯೦ ರಷ್ಟು ಚೆಂದವಾಗಿದೆ ಅಂತ ವೈನ್ ಡೋರ್ಸ್ ಹೇಳಿ ಕೊಂಡಿದೆ.

ಇಂಟರ್ನೆಟ್ ಎಕ್ಸ್ ಪ್ಲೋರರ್ ಹ್ಯಾಗೆ ಲಿನಕ್ಸ್ ನಲ್ಲಿ ಇನ್ಸ್ಟಾಲ್ ಮಾಡ್ಕೊಳ್ಳೋದು ಅಂದ್ರಾ? ಕೆಳಗಿನ ವಿಡಿಯೋ ನೋಡಿ.

ವೈನ್ ಡೋರ್ಸ್ ಬಗ್ಗೆ ಮತ್ತಷ್ಟು ತಿಳಿಯಬೇಕೆ? ಈ ಕೊಂಡಿಯನ್ನ ಸಂಪರ್ಕಿಸಿ.