"ವೈಬ್ರಂಟ್ ಭಾರತ"ಕ್ಕೆ ಮುನ್ನುಡಿಯಾಗಲಿದೆ "ವೈಬ್ರಂಟ್ ಗುಜರಾತ್"!
'ಭಾರತ ಪ್ರಕಾಶಿಸುತ್ತಿದೆ', ಇದು ೨೦೦೪ರ ಚುನಾವಣಾ ಪ್ರಚಾರಕ್ಕೆ ಬಿ.ಜೆ.ಪಿ ಬಳಸಿಕೊಂಡ ಸ್ಲೋಗನ್. ಆದರೆ ಈ ಸ್ಲೋಗನ್ ಬಿ.ಜೆ.ಪಿಗೆ ಅಂಥಾ ಹೇಳಿಕೊಳ್ಳಬಹುದಾದ ಸಹಾಯವನ್ನೇನೂ ಮಾಡಲಿಲ್ಲ. ಆದರೆ 'ಜೀತೇಗಾ ಗುಜರಾತ್' ಎಂಬ ಘೋಷಣೆಯೊಂದಿಗೆ, ಇಂಗ್ಲಿಷ್ ಮಾಧ್ಯಮಗಳ ಬೇಕಾಬಿಟ್ಟಿ ಅಪಪ್ರಚಾರದ ನಡುವೆಯೂ ಸತತ ಮೂರನೇ ಬಾರಿಗೆ ಗೆದ್ದು ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ನರೇಂದ್ರ ಮೋದಿಯವರ ಪ್ರಯತ್ನದ ಫಲವಾಗಿ 'ಗುಜರಾತ್' ಇಂದು ಅಕ್ಷರಶಃ ಪ್ರಕಾಶಿಸುತ್ತಿದೆ.ಅದೂ ಅಂತರಾಷ್ಟ್ರೀಯ ಮಟ್ಟದಲ್ಲಿ !!.
ನರೇಂದ್ರ ಮೋದಿಯವರಿಗೆ ಅಮೇರಿಕಾ ವೀಸಾ ನಿರಾಕರಿಸಿದ್ದನ್ನೇ ನೆಪವಾಗಿಟ್ಟುಕೊಂಡು ಅವರನ್ನು ಟೀಕಿಸುತ್ತಿದ್ದ ಅವರ ವಿರೋಧಿಗಳು ಇನ್ನು ಮುಂದೆ ಟೀಕಿಸಲು ಬೇರೆ ವಿಷಯ ಹುಡುಕಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ! ಜನತೆಯಿಂದ ಚುನಾವಣೆಯಲ್ಲಿ ಆಯ್ಕೆಯಾದಾಗಲೂ ಸಹ ಇಂಗ್ಲಿಷ್ ಮಾದ್ಯಮಗಳು 'ಗೆದ್ದರೇನಂತೆ? ಅಮೆರಿಕಾ ವೀಸಾ ಸಿಗಲ್ಲ' ಅಂತ ಅವರನ್ನ ಜರಿದಿದ್ದವು. ಬೇರೆ ಯಾರೋ ಆಗಿದ್ದರೆ ಅದರ ವಿರುದ್ಧ ಇನ್ನೊಂದು ಹೇಳಿಕೆ ನೀಡಿ ಸುಮ್ಮನಾಗುತ್ತಿದ್ದರು. ಆದರೆ ಮೋದಿಯವರು, 'ನನಗೆ ಅಮೆರಿಕಾ ವೀಸಾ ಕೊಡದಿದ್ದರೇನಾಯ್ತು? ನಾನು ಗುಜರಾತಿನಲ್ಲೇ ಅಮೆರಿಕಾ ಸೃಷ್ಟಿಸುತ್ತೇನೆ, ನೀವು ಬನ್ನಿ ವೀಸಾ ಕೇಳಿಕೊಂಡು!' ಅಂತಾ ಹೇಳಿಕೆ ನೀಡಿದ್ದರು. ಅಮೇರಿಕನ್ನರು ಭಾರತದ ವೀಸಾ ಅರಸಿ ಗುಜರಾತಿಗೆ ಬರಲು ಹಂಬಲಿಸುವ ಕಾಲ ದೂರವಿಲ್ಲ. ಇತ್ತೀಚೆಗೆ ಗುಜರಾತಿನಲ್ಲಿ ನಡೆದ ವೈಬ್ರಂಟ್ ಗುಜರಾತ್ ಬಂಡವಾಳ ಹೂಡಿಕೆದಾರರ ಸಮ್ಮೇಳನದಲ್ಲಿ ಪಾಲುದಾರ ರಾಷ್ಟ್ರಗಳಾಗಿ ಜಪಾನ್ ಮತ್ತು ಕೆನಡಾ ಭಾಗವಹಿಸಿದ್ದವು.ಕಾರ್ಯಕ್ರಮದಲ್ಲಿ ಮಾತನಾಡಿದ ಅಮೇರಿಕದ ಡೆಲಿಗೇಟ್ ಒಬ್ಬರು ’ಈ ಸಮ್ಮೇಳನದಲ್ಲಿ ಕೆನಡ ಮತ್ತು ಜಪಾನ್ ಪಾಲುದಾರ ರಾಷ್ತ್ರಗಳಾಗಿ ಪಾಲ್ಗೊಂಡಿವೆ, ನನ್ನ ಗುರಿ ಮುಂದಿನ ಸಮ್ಮೇಳನದಲ್ಲಿ ಅಮೇರಿಕಾವನ್ನು ಪಾಲುದಾರ ರಾಷ್ಟ್ರವಾಗಿಸುವುದು’ ಎಂದಿದ್ದಾರೆ!
ಕರ್ನಾಟಕ ನಡೆಸಿದ 'ಅಡ್ವಾಂಟೇಜ್ ಕರ್ನಾಟಕಾ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ'ಕ್ಕೆ ವೈಬ್ರಂಟ್ ಗುಜರಾತ್ ಸಮಾವೇಶವೇ ಮಾದರಿ. ಗುಜರಾತಿನಲ್ಲಿ ೨೦೦೩ರಿಂದ ಪ್ರತಿ ೨ ವರ್ಷಕ್ಕೊಮ್ಮೆ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಮೋದಿಯವರ ಸರ್ಕಾರ ಆಯೋಜಿಸುತ್ತ ಬಂದಿದೆ. ಈ ಜನೆವರಿ ೧೨,೧೩ರಂದು ನಡೆದ ಸಮ್ಮೇಳನಕ್ಕೆ ಮೋದಿಯವರು ಉದ್ಯಮಿಗಳನ್ನು ಆಹ್ವಾನಿಸಿದ್ದು ೨೦೦೯ರ ಜನೆವರಿ ೧೩ರಂದು! ಈ ವರ್ಷವೂ ಸಹ ಮುಂದಿನ ವರ್ಷ ೨೦೧೩ರ ಜನೇವರಿ ೧೨,೧೩ರಂದು ಸಮ್ಮೇಳನಕ್ಕೆ ಉದ್ಯಮಿಗಳನ್ನು ಆಹ್ವಾನಿಸಿದ್ದಾರೆ! ಅವರ ಸಿದ್ಧತೆ ಎಷ್ಟು ಅಚ್ಚುಕಟ್ಟು ಎಂಬುದಕ್ಕೆ ಇದೇ ಸಾಕ್ಷಿ.೨೦೦೯ರ ಸಮ್ಮೇಳನದಿಂದ ಮಾಧ್ಯಮಗಳೂ ಸಹ ಸ್ವಯಂ ಪ್ರೇರಂಣೆಯಿಂದ ವೈಬ್ರಂಟ್ ಗುಜರಾತ್ ಸಮಾವೇಶಕ್ಕೆ ಪ್ರಾಮುಖ್ಯತೆ ನೀಡುತ್ತಾ ಬಂದಿವೆ(ನೀಡದೆ ಬೇರೇ ದಾರೀನೇ ಇಲ್ಲ!).
ಈ ಬಾರಿ ನಡೆದ ೫ನೇ ವೈಬ್ರಂಟ್ ಗುಜರಾತ್ ಸಮಾವೇಷ ಹಲವು ವಿಶೇಷತೆಗಳನ್ನು ಪಡೆದಿತ್ತು. ೨೦೦೯ರ ಸಮಾವೇಶದಲ್ಲಿ ಮೋದಿಯವರು ೨೦೧೧ರ ಸಮಾವೇಶವನ್ನು ಪ್ರತಿ ವರ್ಷ ಸ್ವಿಡ್ಜರ್ಲೆಂಡಿನ ’ದಾವೋಸ್’ನಲ್ಲಿ ನಡೆಯುವ ’ವರ್ಲ್ಡ್ ಎಕೊನೊಮಿಕ್ ಫೋರಮ್’ಗೆ ಸಮಾನವಾಗಿ ನಡೆಸಲಾಗುವುದೆಂದು ಹೇಳಿದ್ದರು. ೨೦೧೦ ಗುಜರಾತಿನ ಸುವರ್ಣ ಮಹೋತ್ಸವದ ವರ್ಷವಾಗಿತ್ತು.’ಪೆಂಡಾಲ್ ಹಾಕಿ ಸಮಾವೇಷ ನಡೆಸುವುದು ಸರಿ ಆಗಲ್ಲ’ ಎಂದು ನಿರ್ಮಿಸಿದ ’ಮಹಾತ್ಮ ಮಂದಿರ’ ಎಂಬ ಹೊಸ ಸಭಾಭವನದಲ್ಲಿ ಈ ಬಾರಿ ಸಮಾವೇಷ ನಡೆಸಲು ಉದ್ದೇಶಿಸಲಾಗಿತ್ತು. ಭಾರತದ ಅತಿ ದೊಡ್ಡ ಸಭಾ ಭವನವಾದ ’ಮಹಾತ್ಮಾ ಮಂದಿರ’ವನ್ನು ನಿರ್ಮಿಸಲು ಗುಜರಾತ್ ಸರ್ಕಾರ ತೆಗೆದುಕೊಂಡ ಸಮಯ ಕೇವಲ ೧೮೨ ದಿನಗಳು! ಈ ಬಾರಿಯ ಸಮಾವೇಶದ ವಿಶೇಷತೆಗಳಿವು.
*ಜಪಾನ್ ಮತ್ತು ಕೆನಡಾ ಪಾಲುದಾರ ರಾಷ್ಟ್ರಗಳಾಗಿ ಭಾಗವಹಿಸಿದ್ದು.
*ನಮ್ಮ ದೇಶದಲ್ಲಿ ನಡೆದ ಅತಿ ದೊಡ್ಡ ಬಂಡವಾಳ ಹೂಡಿಕೆದಾರರ ಸಮಾವೇಶ ಎಂಬ ಖ್ಯಾತಿ.
*೧೦೧ ದೇಶಗಳ(ಜಗತ್ತಿನ ಮೂರನೆ ಒಂದು ಭಾಗಕ್ಕಿಂತ ಹೆಚ್ಚಿನ ದೇಶಗಳು!) ೩೫,೦೦೦ ಪ್ರತಿನಿಧಿಗಳು ಭಾಗವಹಿಸಿದ್ದು.
*೨೦.೮೩ಲಕ್ಷ ಕೋಟಿ ರೂಪಾಯಿಗಳ ಒಡಂಬಡಿಕೆ!*ಅಂದಾಜು ೫೨ ಲಕ್ಷ ಜನರಿಗೆ ಉದ್ಯೋಗದ ಅವಕಾಶ.
ಮೋದಿ ಮಾತು:
*ಕೇವಲ ಬಂಡವಾಳ ಹೂಡಿಕೆಯೊಂದೇ ಈ ಸಮಾವೇಷದ ಉದ್ದೇಶವಲ್ಲ; ಜ್ಞ್ಯಾನ ಮತ್ತು ತಂತ್ರಜ್ಞ್ಯಾನಗಳ ಜಾಗತಿಕ ಜಾಲವನ್ನು ನಿರ್ಮಿಸಿ ಜನರ ಜೀವನ ಮಟ್ಟವನ್ನು ಸುಧಾರಿಸುವುದು.
*ನನ್ನ ಧ್ಯೇಯವಾಕ್ಯ: ಭಾರತದ ಬೆಳವಣಿಗೆಗಾಗಿ ಗುಜರಾತಿನ ಬೆಳವಣಿಗೆ.('Gujarat's Growth for India's Growth')*ಕೈಗಾರಿಕೆ,ಕ್ರಷಿ , ವಿದ್ಯುತ್, ಮೂಲಭೂತ ಸೌಲಭ್ಯ ಮೊದಲಾದ ಕ್ಷೇತ್ರಗಳಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿರುವ ಗುಜರಾತ್ ’ಭಾರತದ ಅಭಿವ್ರುದ್ದಿ ಯಂತ್ರ(Growth engine of India)’ವಾಗಿದೆ.
*ಗುಜರಾತ್ ಯಾಕಾದರೂ ಅಭಿವೃದ್ಧಿ ಹೊಂದುತ್ತಿದೆ ಎಂದು ಹಲುಬುತ್ತಿರುವವರಿಗೆ ನನ್ನ ಮಾತು: "ಸ್ನೇಹಿತರೇ ನನ್ನ ಗುಜರಾತ್ ಮುನ್ನಡೆಯುತ್ತಿದೆ, ಏಕೆಂದರೆ ನಮಗೆ ಭಾರತವನ್ನು ಮುನ್ನಡೆಸಬೇಕಿದೆ!"
*ಹಲವಾರು ವಲಯಗಳಲ್ಲಿ ಭಾರತದಲ್ಲೇ ನಂಬರ್ ಒನ್ ಸ್ಥಾನದಲ್ಲಿರುವ ಗುಜರಾತನ್ನು ಆ ವಲಯಗಳಲ್ಲಿ ಜಾಗತಿಕ ಶಕ್ತಿಕೇಂದ್ರವಾಗಿಸುವುದು ನನ್ನ ಗುರಿ.
ಎಲ್ಲದಕ್ಕೂ ಕೇಂದ್ರ ಸರ್ಕಾರದವರನ್ನು ಬಯ್ಯುತ್ತ ಕೈಚೆಲ್ಲಿ ಕುಳಿತುಕೊಳ್ಳುವ ನಮ್ಮ ದೇಶದ ಇತರ ರಾಜ್ಯಗಳ ಮುಖ್ಯಮಂತ್ರಿಗಳು ಮೋದಿಯವರ ಕಾರ್ಯಶೈಲಿ ನೋಡಿ ಕಲಿಯಬೇಕಾದದ್ದು ಬಹಳಷ್ಟಿದೆ. ದೂರದೃಷ್ಟಿ, ಪರಿಸರಪ್ರಜ್ಞೆ, ರಾಷ್ಟ್ರೀಯ ದೃಷ್ಟಿಕೋನ, ಆಶಾವಾದ, ಆತ್ಮವಿಶ್ವಾಸ, ಇಚ್ಚಾಶಕ್ತಿ ಉಳ್ಳ ನಮ್ಮ ದೇಶದ ಹೆಮ್ಮೆಯ,ಅಪರೂಪದ ರಾಜಕಾರಣಿ ನರೇಂದ್ರ ಮೋದಿ.ಮಾನವನ ತಿಳಿಗೇಡಿ ನಡೆಯಿಂದ ಪರಿಸರದ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಅಲ್ಗೋರ್ ’ಇನ್ ಕನ್ವೀನಿಯೆಂಟ್ ಟ್ರುತ್’ (Inconvenient truth) ಎಂಬ ಡಾಕ್ಯುಮೆಂಟರಿ ಮೂಲಕ ತಿಳುವಳಿಕೆ ಮೂಡಿಸಿದರೆ, ಅದನ್ನು ಹೇಗೆ ಸುಧಾರಿಸಬಹುದೆಂಬುದರ ಕುರಿತು ಮೋದಿಯವರು ’ಕನ್ವೀನಿಯೆಂಟ್ ಆಕ್ಷನ್’ (Convenient action) ಎಂಬ ಪುಸ್ತಕ ಬರೆದಿದ್ದಾರೆ! ಇಡೀ ದೇಶದಲ್ಲಿ ಅಂತರ್ಜಲದ ಮಟ್ಟ ಇಳಿಮುಖವಾಗುತ್ತ ಸಾಗಿರುವಾಗ ಗುಜರಾತಿನಲ್ಲಿ ನಿರ್ಮಿಸಿದ ಚೆಕ್ ಡ್ಯಾಂಗಳಿಂದಾಗಿ ಗುಜರಾತಿನಲ್ಲಿ ಅಂತರ್ಜಲದ ಮಟ್ಟ ಹೆಚ್ಚಿಗೆ ಆಗಿರುವುದು ಕಂಡು ಬಂದಿದೆ. ಗುಜರಾತಿನ ಹಲವು ನಗರಗಳು ಪರಿಸರ ಸ್ನೇಹಿ ಮತ್ತು ಅತೀ ವೇಗದಲ್ಲಿ ಮುಂದುವರಿಯುತ್ತಿರುವ ನಗರಗಳೆಂಬ ಖ್ಯಾತಿಗೆ ಪಾತ್ರವಾಗಿವೆ.
ಮೋದಿಯವರು ಈ ಸಮ್ಮೇಳನದ ಯಶಸ್ಸನ್ನು ಅರ್ಪಿಸಿರುವುದು ಯುವಜನತೆಗೆ ಮತ್ತು ಮಹಿಳಾ ಸಬಲೀಕರಣಕ್ಕೆ!!
ಸಮಸ್ತ ಕನ್ನಡಿಗರ ಪರವಾಗಿ ಮೋದಿಯವರಿಗೆ ಅಭಿನಂದನೆಗಳು.
ಸಂಕ್ರಾಂತಿಯ ಶುಭಾಶಯಗಳೊಂದಿಗೆ,
ಇಂತಿ ಎಲ್ಲರವ,
ಕಾಡಸಿದ್ಧೇಶ್ವರ ಕರಗುಪ್ಪಿ
ಹಿಡಕಲ್ ಡ್ಯಾಂ
Comments
ಉ: "ವೈಬ್ರಂಟ್ ಭಾರತ"ಕ್ಕೆ ಮುನ್ನುಡಿಯಾಗಲಿದೆ "ವೈಬ್ರಂಟ್ ಗುಜರಾತ್"!
In reply to ಉ: "ವೈಬ್ರಂಟ್ ಭಾರತ"ಕ್ಕೆ ಮುನ್ನುಡಿಯಾಗಲಿದೆ "ವೈಬ್ರಂಟ್ ಗುಜರಾತ್"! by rajgowda
ಉ: "ವೈಬ್ರಂಟ್ ಭಾರತ"ಕ್ಕೆ ಮುನ್ನುಡಿಯಾಗಲಿದೆ "ವೈಬ್ರಂಟ್ ಗುಜರಾತ್"!