ವೈರುಧ್ಯ
ಕವನ
ತೇಗುತಲಿರುವಗೆ ಮೃಷ್ಟಾನ್ನ
ಹಸಿದವಗಿಲ್ಲ ಭಿಕ್ಷಾನ್ನ
ಗಳಿಕೆ ಸಿರಿವಂತರಿಗೆ
ಸೋರದ ಮಾಳಿಗೆ
ತೂತುಬಿದ್ದ ಗುಡಿಸಲು
ಮಳೆಗೆ ಸೋರಲು
ದುರ್ಬಲಗೆ ಚಳಿ
ಸಿರಿವಂತಗೆ ಓಕುಳಿ
ದೀಪವಿರದೆ ಕತ್ತಲು
ಕಾಣದ ಕಣ್ಣೀರು
ಮಿನುಗುವ ಬೆಳಕು
ಕಿರುಚಾಟ ಮೋಜು
ದೇಹದ ಕಲೆಗಳು
ಜೀತದ ಕುರುಹು
ಒಡವೆ ಆಭರಣ
ಒಡೆಯನ ಮೆರಗು..
-ನಿರಂಜನ ಕೆ ನಾಯಕ, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
