ವೈವಾಹಿಕ ಸೇವೆ: ಅಂತರ್ಜಾಲದಿಂದ ಮೊಬೈಲಿನತ್ತ

ವೈವಾಹಿಕ ಸೇವೆ: ಅಂತರ್ಜಾಲದಿಂದ ಮೊಬೈಲಿನತ್ತ

ಬರಹ

ಮದುವೆಯೆನ್ನುವುದು ಸುಲಭದ ಕೆಲಸವಲ್ಲ. ಗಂಡು ಮತ್ತು ಹೆಣ್ಣು ಪರಸ್ಪರ ಒಪ್ಪಿದರಷ್ಟೇ ಸಾಲದು. ಮನೆಯವರಿಗೂ ಒಪ್ಪಿಗೆಯಾಗಬೇಕು. ಹೀಗಾಗಬೇಕಿದ್ದರೆ, ಜಾತಿ,ಕುಲ,ಕುಟುಂಬ ಇವೆಲ್ಲವುಗಳ ಬಗ್ಗೆ ಪರಸ್ಪರ ಒಪ್ಪಿಗೆಯಾಗಬೇಕು. ಒಂದು ಮದುವೆಯಾಗಲು ನೂರಾರು ಸಂಬಂಧಗಳನ್ನು ನೋಡಬೇಕಾಗುತ್ತದೆ. ವರ್ಷಗಟ್ಟಲೆ ಸಮಯ ಹಿಡಿದೀತು.ಜಾತಕವೂ ಕೂಡಿ ಬರಬೇಕು ಎಂದಿದ್ದರೆ ಈ ಮದುವೆ ಏರ್ಪಡಲು ಇನ್ನೊಂದು ಪದರ ಸಂಕೀರ್ಣತೆ ಸೇರುತ್ತದೆ.
ಹಿಂದೆಲ್ಲ ವೈವಾಹಿಕ ಸಂಬಂಧಗಳನ್ನು ಕುಟುಂಬದವರ ಸಲಹೆಯನ್ನು,ಬ್ರೋಕರುಗಳ ಸೂಚನೆಯನ್ನು ಅನುಸರಿಸಿ ಏರ್ಪಡಿಸುತ್ತಿದ್ದರು. ನಂತರದ ದಿನಗಳಲ್ಲಿ ದೇವಾಲಯ ,ಮಠಗಳು ವೈವಾಹಿಕ ಸಂಬಂಧಗಳನ್ನು ಏರ್ಪಡಿಸುವ ಸೇವೆಯನ್ನು ಒದಗಿಸುತ್ತಿದ್ದುವು. ಆಗೆಲ್ಲ ಅಂತಹ ಸೇವಾ ಕೇಂದ್ರಗಳಲ್ಲಿ ಕನ್ಯಾಮಣಿಗಳ ವಿವರಗಳನ್ನು ಮತ್ತು ಒಂದು ಚಿತ್ರವನ್ನು ರಿಜಿಸ್ಟರುಗಳಲ್ಲಿ ಇಟ್ಟಿರುತ್ತಿದ್ದರು. ಮದುವೆ ಸಂಬಂಧ ಹುಡುಕುವ ಯುವಕರು ಅಥವ ಅವರ ಮನೆಯವರು ಈ ವಿವರಗಳನ್ನು ನೋಡಿ,ತಮಗೆ ಒಪ್ಪಿಗೆಯಾದರೆ, ಹುಡುಗಿಯ ವಿಳಾಸಕ್ಕೆ ಪತ್ರ ಬರೆದು, ತಾವು ಹುಡುಗಿಯನ್ನು ನೋಡಲು ಬರುವುದಾಗಿ ಹೇಳಿ ಹೋಗಬೇಕಾಗುತ್ತಿತ್ತು.

ಇಂತಹ ಖಾಸಗಿ ಸೇವಾ ಕೇಂದ್ರಗಳೂ ಆರಂಭವಾದುವು. ಹುಡುಗಿಯ ಕಡೆಯವರಿಂದ ನೊಂದಾವಣೆಗೆ ಶುಲ್ಕ ಪಡೆದು, ಹಣ ಮಾಡುವವರೂ ಇದ್ದರು. ವಿವರಗಳು ಬೇಕಿದ್ದರೆ, ಹುಡುಗನ ಕಡೆಯವರೂ ಶುಲ್ಕ ನೀಡಬೇಕಿತ್ತು.ಹುಡುಗಿಯ ವಿಡಿಯೋ ಚಿತ್ರೀಕರಣವನ್ನು ಲಭ್ಯವಾಗಿಸುವಷ್ಟು ಮುಂದುವರಿದ ಸೇವಾದಾತೃಗಳೂ ಇದ್ದರು.

ಆನ್‌ಲೈನಿನತ್ತ ವೈವಾಹಿಕ ಸೇವೆ

ಅಂತರ್ಜಾಲದ ಮೂಲಕ ಇಂತಹ ಸೇವೆಯನ್ನು ಒದಗಿಸುವುದು ಇತ್ತೀಚೆಗಿನ ಬೆಳವಣಿಗೆ. ನೋಂದಾವಣೆಯನ್ನು ಆನ್‍ಲೈನಿನಲ್ಲಿ ಮಾಡಲು ಅವಕಾಶ ಸಿಕ್ಕಿತು.ಆದರೆ ಭಾರತದಲ್ಲಿ ಹೆಚ್ಚೆಂದರೆ ನಾಲ್ಕು ಕೋಟಿ ಅಂತರ್ಜಾಲ ಬಳಕೆದಾರರಿದ್ದರು. ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮೂವತ್ತು ಕೋಟಿ ಬಳಕೆದಾರರಿರುವ ಮೊಬೈಲ್ ಮಾಧ್ಯಮವನ್ನೀಗ ವೈವಾಹಿಕ ಸೇವೆ ಒದಗಿಸುವ ಕಂಪೆನಿಗಳು ಬಳಸಿಕೊಳ್ಳಲಾರಂಭಿಸಿವೆ. ಮೊಬೈಲ್ ಮೂಲಕ ತಮ್ಮ ಸೇವೆ ಒದಗಿಸಲು ಇವು ಮುಂದಾಗಿವೆ. ಶಾದಿ.ಕಾಮ್ ಕಂಪೆನಿ ವೊಡಾಫೋನ್ ಮತ್ತು ಡಿಶ್ ಟಿವಿ ಡಿಟಿಎಚ್ ಜತೆ ಒಪ್ಪಂದಕ್ಕ ಬಂದಿವೆ. shaadiಭಾರತ್‌ಮ್ಯಾಟ್ರಿಮನಿ.ಕಾಂ ಕಂಪೆನಿಯು ಟಾಟಾ ಸ್ಕೈ ಮತ್ತು ಏರ್‌ಟೆಲ್ ಜತೆ ಒಪ್ಪಂದಕ್ಕೆ ಬಂದಿದೆ.
ಶಾದಿ.ಕಾಂ ಕಂಪೆನಿಯು ಮೊಬೈಲ್ ಮತ್ತು ಡಿಟಿಎಚ್ ಮೂಲಕ ಸೇವೆ ಒದಗಿಸಲು ಆರಂಭಿಸಿದ ಎರಡು ತಿಂಗಳಲ್ಲೇ ಕಂಪೆನಿಯು ಐದು ದಶಲಕ್ಷ ಬಳಕೆದಾರರನ್ನು ಕಂಡಿದೆ.ಎಸೆಮ್ಮಸ್ ಮತು ಧ್ವನಿಯ ಮೂಲಕ ಈ ಸೇವೆಯು ಲಭ್ಯವಿದೆ.ಯುವಕ ಯುವತಿಯವರ ವಿವರಗಳನ್ನು ಒದಗಿಸುವ ಮೂಲಕ ಸೇವೆ ಒದಗಿಸುತ್ತದೆ. ಬಳಕೆದಾರನು ಆಯ್ದ ಅಭ್ಯರ್ಥಿಗಳಿಗ ಕಿರು ಸಂದೇಶ ಕಳುಹಿಸಬಹುದು. shaadiಈ ಸಂದೇಶವನ್ನು ಕಳುಹಿಸಿದವರ ವಿವರಗಳು ಲಭ್ಯವಾಗದಂತೆ ಕಳುಹಿಸಬಹುದು. ಸಂದೇಶ ಸ್ವೀಕರಿಸಿದವರಿಗೆ ಒಪ್ಪಿಗೆಯಾದರೆ ಅವರು ಕಂಪೆನಿಯ ಮೂಲಕ ಮಾರುತ್ತರ ನೀಡಬಹುದು. ವಿವರಗಳು ಬೇಕಿದ್ದರೆ ನಿಗದಿತ ಶುಲ್ಕ ನೀಡಬೇಕು. ಅಭ್ಯರ್ಥಿಗಳು ತಮ್ಮ ವಿವರವನ್ನು ನೋಂದಾಯಿಸಲು ಶುಲ್ಕ ನೀಡಬೇಕು.
ಭಾರತ್ ಮ್ಯಟ್ರಿಮೋನಿಯಲ್-ಏರ್ಟೆಲ್ ವಾರಕ್ಕೆ ಇಪ್ಪತ್ತು ರೂಪಾಯ ಶುಲ್ಕ ವಿಧಿಸಿ,ಬೇಕಾದಷ್ಟು ವೈವಾಹಿಕರ ವಿವರವನ್ನು ಒದಗಿಸುತ್ತದೆ. ಎರಡು ಜನರನ್ನು ಸಂಪರ್ಕಿಸಲು ದರ ಇರುವುದಿಲ್ಲ.ಮತ್ತಿನ ಪ್ರತಿ ಸಂಪರ್ಕಕ್ಕೆ ಹತ್ತು ರುಪಾಯಿ ದರ ವಿಧಿಸಲಾಗುತ್ತದೆ. ಟಾಟಾ ಸ್ಕೈ ಪ್ರತಿ ಎಸೆಮ್ಮೆಸ್‍ಗೆ ಹತ್ತು ರುಪಾಯಿ ಶುಲ್ಕ ಇರುತ್ತದೆ.
ಈ ಸೇವೆಯನ್ನು ಅಂತರ್ಜಾಲ ಮತ್ತು ಮೊಬೈಲ್ ಎರಡರಲ್ಲಿಯೂ ಸರಾಗವಾಗಿ ಬಳಸಲು ಅನುಕೂಲವಾಗುವಂತೆ ರೂಪಿಸಲಾಗಿದೆ.