ವ್ಯಾಕರಣ‌ ದೋಷಗಳು

ವ್ಯಾಕರಣ‌ ದೋಷಗಳು

ಅಗಲೀಕರಣ‌ ಕೈಗಾಱಿಕಾ ವಸಾಹತು, ಕಲಿಕಾಕೇಂದ್ರ‌, ಜಗದೋದ್ಧಾರನ‌ ಎಲ್ಲವೂ ತಪ್ಪು ಅಗಲ‌ (ಕನ್ನಡ‌) + ಕರಣ‌ (ಸಂಸ್ಕೃತ‌) ಆದ್ದಱಿಂದ‌ ಅಗಲೀಕರಣ‌ ತಪ್ಪು ಕೈಗಾಱಿಕೆ ಕಲಿಕೆ ಕನ್ನಡ‌ ಶಬ್ದ‌ ಅದು ಸಮಾಸದಲ್ಲಿ ಕೈಗಾಱಿಕಾ ಮತ್ತು ಕಲಿಕಾ ಆಗಲು ಸಾಧ್ಯವಿಲ್ಲ‌. ಆದರೆ ಕಲಿಕಾ=ಚಿಕ್ಕ‌ ಮೊಗ್ಗು (ಎಂಬರ್ಥವಾದರೆ) ಕಲಿಕಾಕೇಂದ್ರ‌=(ಹೂ) ಮೊಗ್ಗುಗಳನ್ನು ಬೆಳೆಸುವ‌ ಕೇಂದ್ರವೆಂಬರ್ಥದಲ್ಲಿ ಸಂಸ್ಕೃತ‌ ಪದವಾಗುತ್ತದೆ. ಜಗತ್+ಉದ್ಧಾರನ‌ =ಜಗದುದ್ಧಾರನ‌ (ಸಂಸ್ಕ್ರೃತ‌ ಶಬ್ದವಾದರೂ) ಅಥವಾ ಜಗದ‌ (ಷಷ್ಠೀ ವಿಭಕ್ತಿ ಕನ್ನಡದಲ್ಲಿ) + ಉದ್ಧಾರನ‌ ಎಂದು ಸೇರಿಸಿದರೆ ಲೋಪ‌ ಸಂಧಿಯಾಗಿ ಜಗದುದ್ಧಾರನ‌ (ಪುರಂದರದಾಸರ‌ ಮೂಲಪ್ರತಿಯಲ್ಲೂ ಜಗದುದ್ಧಾರನ‌ ಎಂದೇ ಇದೆ. ಈ ವಿಷಯವಾಗಿ ಹಂಸಾನಂದಿಯವರು ಸ್ಪಷ್ಟ‌ ಪಡಿಸಬೇಕು) ಎಂಬ‌ ರೂಪವೇ ಸರಿ.