ವ್ಯಾಪಾರ ಒಪ್ಪಂದಕ್ಕೆ ಅಮೆರಿಕ ಸರ್ವಾಧಿಕಾರಿ ಧೋರಣೆ ತಪ್ಪು

ವ್ಯಾಪಾರ ಒಪ್ಪಂದಕ್ಕೆ ಅಮೆರಿಕ ಸರ್ವಾಧಿಕಾರಿ ಧೋರಣೆ ತಪ್ಪು

ತನ್ನ ಅಣತಿಯಂತೆ ನಡೆದುಕೊಳ್ಳುತ್ತಿಲ್ಲ ಎಂದು ಭಾರತದ ಆಮದಿನ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಆಡಳಿತ ಶೇ.೨೫ರಷ್ಟು ತೆರಿಗೆ ಅಸ್ತ್ರ ಪ್ರಯೋಗಿಸಿದೆ. ಜೊತೆಗೆ ರಷ್ಯಾದಿಂದ ಭಾರತವು ತೈಲ ಮತ್ತು ಶಸ್ತ್ರಾಸ್ತ್ರ ಖರೀದಿ ಮುಂದುವರೆಸಿದ್ದಕ್ಕೆ ಭಾರೀ ಪ್ರಮಾಣದ ದಂಡದ ಎಚ್ಚರಿಕೆಯನ್ನೂ ನೀಡಿದೆ. ಜೊತೆಗೆ ಭಾರತದ ಆರ್ಥಿಕತೆಯನ್ನು ಡೆಡ್ ಎಕಾನಮಿ ಎನ್ನುವ ಮೂಲಕ ಮಾತಿನ ಎಲ್ಲೆಯನ್ನು ಮೀರಿದ್ದಾರೆ. ತನ್ನ ಆರ್ಥಿಕ, ಸೇನಾ ವಿದೇಶಾಂಗ ಶಕ್ತಿಯ ಮೂಲಕ ಇಡೀ ವಿಶ್ವವನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುವ ಅಮೆರಿಕ, ಭಾರತವೂ ಹಾಗೆಯೇ ನಡೆದುಕೊಳ್ಳಬೇಕು ಎಂದು ಭಾವಿಸಿದಂತಿದೆ. ಆದರೆ ವಸುಧೈವ ಕುಟುಂಬಕಂ ಅಂದರೆ ಇಡೀ ಜಗತ್ತು ಒಂದು ಕುಟುಂಬ ಎಂದು ಭಾವಿಸಿ ಎಲ್ಲಾ ದೇಶಗಳೊಂದಿಗೆ ಸಹಕಾರ ತತ್ವದಡಿ ಸಂಬಂಧ ಪಾಲಿಸುತ್ತಿರುವ ಭಾರತದ ಮೇಲೆ ಅಮೆರಿಕದ ಇಂಥ ಸರ್ವಾಧಿಕಾರಿ ಧೋರಣೆ ಸುತರಾಂ ಒಪ್ಪಲಾಗದು.೧೪೦ ಕೋಟಿ ಜನಸಂಖ್ಯೆಯ ಭಾರತ, ಇಡೀ ವಿಶ್ವದ ಪಾಲಿಗೆ ಬಹುದೊಡ್ಡ ಮಾರುಕಟ್ಟೆ. ಹೀಗಾಗಿಯೇ ಭಾರತವನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಅಮೆರಿಕ ನಾನಾ ತಂತ್ರ ಬಳಸುತ್ತಿದೆ. ಅದರಲ್ಲಿ ವ್ಯಾಪಾರ ಒಪ್ಪಂದಕ್ಕಾಗಿ ಹಲವು ಷರತ್ತು ಹಾಕಿದೆ. ಆದರೆ ಕೃಷಿ, ಪಶುಸಂಗೋಪನೆಯೇ ಪ್ರಮುಖ ಜೀವನಾಡಿ

ವ್ಯಾಪಾರ ಒಪ್ಪಂದದಲ್ಲಿ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳುತ್ತಿರುವ ಭಾರತದ ವಿರುದ್ಧ ಅಮೆರಿಕದ ಒತ್ತಡ, ಬಲವಂತದ ನೀತಿ ಸರಿಯಲ್ಲ.

ಭಾರತ, ಇಡೀ ವಿಶ್ವದ ಪಾಲಿಗೆ ಬಹುದೊಡ್ಡ ಮಾರುಕಟ್ಟೆ. ಹೀಗಾಗಿಯೇ ಭಾರತವನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಅಮೆರಿಕ ನಾನಾ ತಂತ್ರ 'ಬಳಸುತ್ತಿದೆ. ಅದರಲ್ಲಿ ವ್ಯಾಪಾರ ಒಪ್ಪಂದಕ್ಕಾಗಿ ಹಲವು ಷರತ್ತು ಹಾಕಿದೆ. ಆದರೆ ಕೃಷಿ, ಪಶುಸಂಗೋಪನೆಯೇ ಪ್ರಮುಖ ಜೀವನಾಡಿ ಯಾಗಿರುವ ದೇಶದಲ್ಲಿ ಆ ವಲಯವನ್ನು ಕಾಪಾಡಿಕೊಳ್ಳಲು ಭಾರತ ಸರ್ಕಾರವು ಕೆಲವೊಂದು ತಡೆಯನ್ನು ಹಾಕಿಕೊಂಡೇ ಬಂದಿದೆ.

ಇದರ ತೆರವಿಗಾಗಿ ಇದೀಗ ಭಾರತದ ಮೇಲೆ ಅಮೆರಿಕ ಒತ್ತಡ ತಂತ್ರ ಪ್ರಯೋಗಿಸುತ್ತಿದೆ. ಮತ್ತೊಂದು ದೇಶವೊಂದಿಗೆ ದೇಶವೊಂದು ಯಾವ ರೀತಿಯ ವ್ಯಾಪಾರ ಒಪ್ಪಂದ ಮಾಡಿಕೊಳ್ಳಬೇಕು ಎನ್ನುವುದು ಆಯಾ ದೇಶಗಳ ಸಾರ್ವಭೌಮ ಹಕ್ಕು. ಇತರೆ ದೇಶಗಳನ್ನು ಬೆದರಿಸಿದಂತೆ ಭಾರತವನ್ನು ಬೆದರಿಸಲಾಗದು. ಭಾರತವೀಗ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆ, ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ, ತನ್ನ ದೇಶ, ದೇಶದ ಜನತೆ, ಜನರ ಜೀವನ, ಅವರ ಹಕ್ಕು ರಕ್ಷಿಸಿಕೊಳ್ಳುವ ಹೊಣೆ ಮತ್ತು ಅಧಿಕಾರ ಎರಡೂ ಭಾರತ ಸರ್ಕಾರಕ್ಕೆ ಇದೆ ಎನ್ನುವುದು ಅಮೆರಿಕ ತಿಳಿಯಬೇಕು.

ಇತ್ತೀಚಿನ ಭಾರತ- ಪಾಕಿಸ್ತಾನದ ಸಂಘರ್ಷದ ವೇಳೆಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಹೇಳುವ ಮೂಲಕ, ಕೆಲವೊಮ್ಮೆ ತಮ್ಮ ಮಾತನ್ನು ತಾವೇ ತಳ್ಳಿಹಾಕುವ ಮೂಲಕ ತಮ್ಮ ಮನಸ್ಥಿತಿ ಪ್ರದರ್ಶಿಸಿದ್ದರು. ಯುದ್ಧ ಸ್ಥಗಿತ ಕುರಿತ ಅವರ ಹೇಳಿಕೆ ಮತ್ತೊಂದು ದೇಶದ ಆಂತರಿಕ ವಿಷಯದಲ್ಲಿ ಅನಗತ್ಯ ಮಧ್ಯಪ್ರವೇಶ ಎಂದು ಅವರಿಗೆ ಅರಿವಾಗದೇ ಹೋಗಿದ್ದು ದುರಂತ. ಇನ್ನಾದರೂ ಅಮೆರಿಕ ಇಂಥ ನೀತಿ ಬಿಟ್ಟು ಭಾರತದೊಂದಿಗೆ ವ್ಯಾಪಾರ ಒಪ್ಪಂದ ಸೇರಿದಂತೆ ಎಲ್ಲಾ ವಿಷಯಗಳಲ್ಲೂ ಕೊಡು-ಕೊಳ್ಳು ನೀತಿಯನ್ನು ಸೂಕ್ತವಾಗಿ ಪಾಲಿಸಬೇಕು.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೦೨-೦೮-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ