ವ್ಯಾಮೋಹ, ನೀನು ಮತ್ತು ನಾನು

ವ್ಯಾಮೋಹ, ನೀನು ಮತ್ತು ನಾನು

ಕವನ

ಬರಹದಲಿ
ಹಿಡಿದಿಡುವ೦ಥ:ದ್ದಲ್ಲ
ಇಂದು ಉಕ್ಕುತ್ತಿರುವ ಈ ಭಾವ ತೀವ್ರತೆಯು.

ಅಬ್ಬರಿಸಿ ಅಡಗಿಹೋಗುವ
ಬಾಂದಳದ ಕಾರ್ಮೋಡದಂತಲ್ಲ
ಇದರ ಉಷ್ಣತೆಯು.

ನಿನ್ನ ಮಾನವ ನೋಯಿಸುವ ಮನಸಿಲ್ಲ
ನೋಯಿಸದಿರುವಂತೆಯೂ ಇಲ್ಲ
ನೋವನುಂಡು ಮರೆವ ಕಾಯ ಇದಲ್ಲವಲ್ಲ.

ಭೋರ್ಗರೆದು ಅಪ್ಪಳಿಸುತಿದೆ
ಭಾವತರಂಗ
ಐಕ್ಯ ಮಂತ್ರವ ಭೋದಿಸುತಿದೆ
ಈ ಅಂತರಂಗ!!

ಸುಟ್ಟರೂ ಬಿಟ್ಟರೂ ಹೋಗುವುದೇ ಹುಟ್ಟುಗುಣ ?
ಮಾತಲ್ಲಿ ಒಂದು, ಕೃತಿಯಲ್ಲಿ ಇನ್ನೊಂದು
ಎನ್ನುವುದೇ ನನ್ನೀ ಅಂತರಾಳದ ಬೇನೆ
ನಿನ್ನ ಸುಡುತಿರುವ ವ್ಯಾಮೋಹಕೆ ಎಲ್ಲಿದೆ ಕೊನೆ?

ನಾನೊಬ್ಬ ಸರಿಯಾದರೆ ಜಗವು ಸರಿಯಾಗಬಹುದೇ?
ಜಗವು ಸರಿಯಾಗುವ ವೇಳೆ, ಯುಗವೇ ಮುಗಿದಿರಬಹುದೇ?
ಎರಡೂ ಕೈ ಸೇರಿದರೆ ತಾನೇ ಚಪ್ಪಾಳೆ?
ಬದುಕಿರಬಹುದೇ ನಾವು, ಇದು ಅರ್ಥವಾಗುವ ವೇಳೆ?

Comments

Submitted by Maalu Sun, 10/07/2012 - 14:05

ಚೆನ್ನಿದೆ ನಿಮ್ಮ ಕವಿತೆ.
'ಭೋರ್ಗರೆದು ಅಪ್ಪಳಿಸುತಿದೆ
ಭಾವತರಂಗ
ಐಕ್ಯ ಮಂತ್ರವ ಭೋದಿಸುತಿದೆ
ಈ ಅಂತರಂಗ!!'
ಇವು ಅರ್ಥಪೂರ್ಣ ಸಾಲುಗಳು.