ವ್ಯಾಸರಾಯಬಲ್ಲಾಳ್, ನಮ್ಮನ್ನಗಲಿದರು- ಮುಂಬೈ ಕನ್ನಡಿಗರ ಆತ್ಮೀಯ ಹಿರಿಯ ಚೇತನಕ್ಕೆ, ಶತ-ಶತನಮನಗಳು !

ವ್ಯಾಸರಾಯಬಲ್ಲಾಳ್, ನಮ್ಮನ್ನಗಲಿದರು- ಮುಂಬೈ ಕನ್ನಡಿಗರ ಆತ್ಮೀಯ ಹಿರಿಯ ಚೇತನಕ್ಕೆ, ಶತ-ಶತನಮನಗಳು !

ಬರಹ

ಮುಂಬೈ ಕನ್ನಡಿಗರ ಕಣ್ಮಣಿ, ವ್ಯಾಸರಾಯ ಬಲ್ಲಾಳರನ್ನು ಎಲ್ಲ ಕನ್ನಡಿಗರೂ ಬಲ್ಲರು. ಮಿತಭಾಷಿ, ಸರಳ ಸಜ್ಜನಿಕೆಯ ಪ್ರತಿರೂಪವಾದ ಅವರ ಸ್ನೇಹಾಭಿಲಾಷಿಗಳು ಹಲವರು ! ಮುಂಬೈ ನ ಕರ್ನಾಟಕಸಂಘದ ಸಂಸ್ಥಾಪಕರಾದ, ಶ್ರೀ. ವರದರಾಜಆದ್ಯರ ಜೊತೆ-ಜೊತೆಗೆ ದುಡಿದು ಅದನ್ನು ಕಟ್ಟಿ-ಬೆಳೆಸಲು ದುಡಿದ ಕೆಲವಾರು ಗಣ್ಯರಲ್ಲಿ ಅವರು ಪ್ರಮುಖರು. ಶ್ರೀ. ಸನದಿ, ಅರ್ವಿಂದ ನಾಡಕರ್ಣಿ, ಶ್ರೀಪತಿಬಲ್ಲಾಳ, ಕಿಶೋರಿಬಲ್ಲಾಳ್, ಡಾ. ಸುನಿತಾಶೆಟ್ಟಿ, ಡಾ ಸಂಜೀವಶೆಟ್ಟಿ, ಶ್ರೀ ಸದಾನಂದಶೆಟ್ಟಿ, ಎ. ಎಸ್. ಕೆ. ರಾವ್, ಸದಾನಂದ ಸುವರ್ಣ, ಜಿ. ಡಿ. ಜೋಷಿ, ಯಶವಂತ ಚಿತ್ತಾಲ್, ಮತ್ತು ಹಲವಾರು ಮಂದಿ ಅವರ ಜೊತೆಗಾರರು.

ಕರ್ನಾಟಕಸಂಘ, ಮಾಹಿಮ್, ಮುಂಬೈ ನ ಪ್ರತಿಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಭಾಗವಹಿಸಿ, ಅದರ ಯಶಸ್ಸಿಗೆ ಕಾರಣರಾಗಿರುವ, ಬಲ್ಲಾಳರವರನ್ನು ಮುಂಬೈ ಕನ್ನಡ ಅಭಿಮಾನಿಗಳು, ಅತ್ಯಂತ ಭಾರವಾದ ಮನಸಿನಿಂದ ನೆನೆಯುತ್ತಿದ್ದಾರೆ. ಅವರ ನೆನಪುಗಳು ನಮ್ಮ ಮನಸ್ಸಿನಲ್ಲಿ ಎಂದೆಂದಿಗೂ ಹಸಿರಾಗಿರುತ್ತವೆ. ಮತ್ತೊಮ್ಮೆ ಅವರಿಗೆ ನಮನವನ್ನು ಸಲ್ಲಿಸಿ, ಅವರ ಕುಟುಂಬದ ಎಲ್ಲ ಸದಸ್ಯರಿಗೂ ಈ ಅಪಾರದುಖವನ್ನು ಸೈರಿಸುವ ಶಕ್ತಿಯನ್ನು ಭಗವಂತನು ಅನುಗ್ರಹಿಸಿಲೆಂದು ಪ್ರಾರ್ಥಿಸುತ್ತೇವೆ.

ಎಲ್ಲ ಕನ್ನಡ-ಸಂಘಸಂಸ್ಥೆಗಳ ಅಭಿಮಾನಿ ಬಳಗ,

ಮುಂಬೈ.

ಗುರುವಾರ, ಜನವರಿ, ೩೧, ೨೦೦೮.