ಶಂಕರಾನಂದ ಹೆಬ್ಬಾಳರ ಎರಡು ಹನಿಗಳು
ಕವನ
*ಶಾಯರಿ ೧*
ನಿನ್ನ ನೆನಪನ್ಯಾಗ ಹಗಲು ರಾತ್ರಿ
ಆಗಿದ್ದ ಗೊತ್ತಾಗವಲ್ದು
ಬಂಗಾರದಂತ ನಿನ್ನ ಮಾತ ಕೇಳಾಕತ್ರ
ನಾ ಎಲ್ಲಿ ಅದಿನೆಂತನ ತಿಳಿವಲ್ದು
ನಿನ್ನ ಪ್ರೀತಿ ನಶಾ ಏರಿಸಿಕೊಂಡ ಕುಂತಿನಿ
ಅದು ಇನ್ನು ಇಳಿವಲ್ದು..!!
****
*ಶಾಯರಿ ೨*
ನಾ ಹ್ವಾದ ಮ್ಯಾಲ ನೀ ಹೆಂಗ
ಇರತಿ ನೋಡಾಕ ಆಗಂಗಿಲ್ಲ...
ಯಾಕಂದ್ರ ನೋಡಾಕ ಈ ಭೂಮಿ
ಮ್ಯಾಲ ನಾನ ಇರಂಗಿಲ್ಲ....
ಭಗವಂತನ ಆಟ ಎಲ್ಲಾರಿಗೂ
ಜಲ್ದಿ ತಿಳ್ಯಾಂಗಿಲ್ಲ.....!!
-ಶಂಕರಾನಂದ ಹೆಬ್ಬಾಳ
ಚಿತ್ರ್
