ಶಂಕರಾನಂದ ಹೆಬ್ಬಾಳರ ಒಂದು ಗಝಲ್

ಶಂಕರಾನಂದ ಹೆಬ್ಬಾಳರ ಒಂದು ಗಝಲ್

ಕವನ

ಅಷ್ಟಾದಶ ಪುರಾಣ ದಶೋಪನಿಷತ್ತುಗಳನು

ಪಾರಾಯಣ ಮಾಡಿಸುತ್ತಲಿ ಆಲಿಸು|

ರಾಮಾಯಣ ಮಹಾಭಾರತ ಕಾವ್ಯಗಳನು

ತಿಳಿದು ಓದಿಸುತ್ತಲಿ ಆಲಿಸು||

 

ತೀರ್ಥಂಕರರ ಚರಿತೆ ಶಾಸನದ ಸ್ತುತಿಸಾಲುಗಳ

ಕಣ್ತುಂಬಿಕೊಳುತ್ತ ಹೋಗುವೆ|

ವೈಭವದಿ ಮೆರೆದ ಶ್ರೀಮಂತ ರಾಜಮನೆತನಗಳ 

ಇತಿಹಾಸ ಹಾಡಿಸುತ್ತಲಿ ಆಲಿಸು||

 

ಬೇಲೂರ ಹಳೆಬೀಡು ಜೋಗದ ಸಿರಿಯಲ್ಲಿನ 

ಮಾಧುರ್ಯ ಲಾಲಿತ್ಯವು ಅದ್ಬುತ|

ಕಲ್ಲಿನಲಿ ಕೆತ್ತಿರುವ ಬಾದಾಮಿಯ ಶಿಲ್ಪಕಲೆಗೆ

ಪ್ರಶಂಸಿಸಿ ಸ್ತುತಿಸುತ್ತಲಿ ಆಲಿಸು||

 

ಕಾಳಿದಾಸ ಕುಮಾರವ್ಯಾಸ ರತ್ನಾಕರವರ್ಣಿ

ವಾಲ್ಮೀಕಿಯರ ಕೃತಿಗೆ ನಮಿಸು|

ದಾಸರಲಿ ಪುರಂದರ ಕನಕರ ನೆನೆಯುತ್ತ 

ಜೀವನದಿ ಚಲಿಸುತ್ತಲಿ ಆಲಿಸು||

 

ನಳಮಹರಾಜ ಹರಿಶ್ಚಂದ್ರರ ವಿಕ್ರಮರ ಕಥೆಗಳ

ಅನುಶಿಲಿಸಿ ಅನುಪಾಲಿಸು ನೀನು|

ಗೀತೆಯ ಸಾರದಂತೆ ಅಭಿನವನ ಚೆನ್ನುಡಿಯು

ಅಹರ್ನಿಶಿ ಮೆರೆಸುತ್ತಲಿ ಆಲಿಸು||

 

-ಶಂಕರಾನಂದ ಹೆಬ್ಬಾಳ

 

ಚಿತ್ರ್