ಶಂಭೊ ಸಿದ್ದಲಿಂಗ:ಅಪ್ಪನಿಗೆ ಶುಗರ್
ಶಂಭೊ ಸಿದ್ದಲಿಂಗ:ಅಪ್ಪನಿಗೆ ಶುಗರ್
ಸಿದ್ದಲಿಂಗನ ಅಪ್ಪ ಮರಿಲಿಂಗನಿಗೆ ಏಕೋ ಮೈ ಹುಷಾರಿಲ್ಲ ಸದಾ ಸುಸ್ತು ಸಿದ್ದಲಿಂಗನ ಅಮ್ಮ ತನಗೆ ತಿಳಿದ ಎಲ್ಲ ಕಷಾಯಗಳನ್ನು ಮಾಡಿ ಕುಡಿಸಿದಳು ಅವನು ಹಾಗೆ. ಕಡೆಗೆ ಊರಲ್ಲಿದ್ದ ಆಯುರ್ವೇದ ಪಂಡಿತನ ಬಳಿಗೆ ಕರೆದೋಯ್ದ ಸಿದ್ದಲಿಂಗ ಅಪ್ಪನನ್ನು. ಆ ಪಂಡಿತ 'ಟೂ ಇನ್ ವನ್' ಅಂದರೆ ಜನಗಳಿಗೆ ಮಾತ್ರವಲ್ಲ ಅಲ್ಲಿಯ ದನಗಳಿಗೂ ಅವನೇ ಪಂಡಿತ ಹಾಗಾಗಿ ಅವನು ಮನೆಯಿಂದ ಹೊರಹೊರಟರೆ ದನಗಳು ಇವನನ್ನು ಕಂಡು ದೂರಹೋಗುತ್ತಿದ್ದವ್ವು (ಕಹಿ ಔಷದಿಯ ನೆನಪು).
"ಎಷ್ಟಾಯ್ತು ವಯಸ್ಸು" ಕಾಯಿಲೆ ಏನೆಂದು ಕೇಳದೆ ವಯಸ್ಸು ಕೇಳುತ್ತಿರುವ ಪಂಡಿತನತ್ತ ನೋಡಿ ನರಳುತ್ತ ಹೇಳಿದ ಮರಿಲಿಂಗ " ಸ್ವಾಮಿ ಗಾಂದಿತಾತ ಸತ್ತನಲ್ಲ ಮೂರು ವರ್ಷಕ್ಕೆ ನಾನು ಹುಟ್ಟಿದ್ದು ಅಂತ ನಮ್ಮಪ್ಪ ಹೇಳ್ತೀದ್ದ"
ಪಂಡಿತ ತಲೆಕೆರೆದುಕೊಂಡ ಅವನಿಗೆ ಗಾಂದಿತಾತನು ಗೊತ್ತಿಲ್ಲ ಅವನು ಸತ್ತಿದ್ದು ಮೊದಲೆ ಗೊತ್ತಿಲ್ಲ. ಹೇಗೋ ಅವನ ಕಾಯಿಲೆಯನ್ನೆಲ್ಲ ಕೇಳಿ ಕೆಲವು ಔಷದಿಗಳನ್ನು ಕೊಟ್ಟು ವಾರ ಬಿಟ್ಟು ಬರುವಂತೆ ತಿಳಿಸಿದ.ವಾರದ ನಂತರ ಮರಿಲಿಂಗನ ಕಾಯೆಲೆ ಎರಡುಪಟ್ಟಾಗಿ ನಡೆಯಲು ಅಗದೆ ಹೇಗೊ ಪಂಡಿತನ ಹತ್ತಿರ ಬಂದ, ಜೊತೆಯಲ್ಲಿ ಯಥಾಪ್ರಕಾರ ಸಿದ್ದಲಿಂಗ. "ಸ್ವಾಮಿ ನಮ್ಮಪ್ಪನಿಗೆ ಏನ್ ಔಷದಿ ಕೊಟ್ಟಿದ್ರಿ " ಸಿದ್ದಲಿಂಗ ಪ್ರಶ್ನಿಸಿದ , ಅವನಿಗೆ ಅನುಮಾನ ಈ ವಯ್ಯ ದನಕ್ಕೆ ಕೊಡುವ ಔಷದವೇನಾದರು ನಮ್ಮಪ್ಪನಿಗೆ ಕೊಟ್ಟಿದ್ದಾನ ಅಂತ. "ಯಾಕೊ?? ಪಟಿಂಗ ಏನೇನೊ ಪ್ರಶ್ನೆ ಕೇಳ್ತಿ ? ನಿನಿಗೇನು ತಿಳಿಯುತ್ತೆ" ಪಂಡಿತನಿಗೆ ಮೂಗತುದಿಯಲ್ಲೆ ಕೋಪ. "ಹಾಗಲ್ಲ ಸ್ವಾಮಿ ಯಾಕೋ ನಮ್ಮಪ್ಪನಿಗೆ ಜಾಸ್ತಿಯಾಯ್ತು ಅದಕ್ಕೆ ಕೇಳಿದೆ" , ನಿಜಕ್ಕೆ ಪಂಡಿತನಿಗು ನೆನಪಿಲ್ಲ ಇವನಿಗೆ ಏನು ಕೊಟ್ಟೆ ಅಂತ. ಹೆಚ್ಚಿಗೆ ರಿಸ್ಕ್ ತೆಗೆದುಕೊಳ್ಳದೆ ಹೇಳಿದ "ನೋಡೊ ಸಿದ್ದಲಿಂಗ ನಿಮ್ಮಪ್ಪನಿಗೆ ವಯಸಾಯ್ತು , ಈಗ ಏನೇನೊ ರೋಗಗಳೂ ಬರುತ್ವೆ ಹೇಗಾಗ್ಲಿ ಒಂದ್ಸಾರಿ ಬೆಂಗಳೂರಿಗೆ ಹೋಗಿ ಸಕ್ಕರೆ ಕಾಯಿಲೆ ಏನಾದರು ಇದೆಯ ಅಂತ ಪರೀಕ್ಷೆ ಮಾಡಿಸು ಅಂದರು.ಬೆಂಗಳೂರು ಅಂತಿದ್ದಾಗೆ ಅಪ್ಪ ಮಕ್ಕಳ ಹೃದಯ ಕಾಲಿಗೆ ಇಳಿದೋಯ್ತು "ಸಕ್ಕತ್ ದೊಡ್ಡ ಕಾಯೆಲೆನೆ ಇರಬೇಕು" ನಮ್ಮಪ್ಪಂಗೆ ಅಂತ ಸಿದ್ದಲಿಂಗ ಗಾಬರಿಯಾದ. ಮನೆಗೆ ಬಂದವನೆ ತನ್ನ ನೆಚ್ಚಿನ ಮೇಷ್ಟ್ರರ ಬಳಿ ಓಡಿದ ಎಲ್ಲ ಕೇಳಿದ ಮೇಷ್ಟ್ರು ಹೇಳಿದರು "ಏನು ಹೆದರಬೇಡವೂ ಈಗ ಇದೆಲ್ಲ ಸಾಮಾನ್ಯ ನೀನು ನಿಮ್ಮ ಅಪ್ಪನ ಜೊತೆಗೆ ಹೋಗು , ನಾನು ಹೇಗೆ ಹೋಗೋದು ಅಂತ ವಿವರವೆಲ್ಲ ಹೇಳ್ತೀನಿ ಎಲ್ಲ ಬರದುಕೊಡ್ತೀನಿ ಆದರೆ ಬೆಂಗಳೂರಿಗೆ ಹೋಗುವಾಗ ಹೆಜ್ಜೆ ಹೆಜ್ಜೆಗೂ ಉಷಾರ್ ತುಂಬಾ ಮೋಸ ನಿನ್ನ ಹತ್ರ ದುಡ್ಡಿದೆ ಅಂತ ಗೊತಾಯ್ತ ಅಷ್ಟೆ ಅಂತ ಹೆದರಿಸಿದರು. ಅಲ್ಲದ ತಮ್ಮ ಬಳಿಯಿದ್ದ ಎರಡುನೂರರಷ್ಟು ಹಣವನ್ನು ಅವನಿಗೆ ಕೊಟ್ಟು ಹುಷಾರು ಮುಂಡೇದೆ ಅಂತ ಪುನಃ ಎಚ್ಚರಿಸಿದರು. ಸಿದ್ದಲಿಂಗನಿಗೆ ಕಣ್ಣೀರು ಇಂತ ಒಳ್ಳೆ ಮೇಷ್ಟ್ರೀಗೆ ಎಂತೆಂತ ತೊಂದರೆ ಕೊಟ್ಟೆ ಅವರಿಗೆ ಕ್ಲಾಸಿನಲ್ಲಿ ಹಿಂದಿನಿಂದ ಬಾಲಕಟ್ಟಿದ್ದ್ರು ಎಲ್ಲ ನೆನೆಸಿ ಇನ್ನು ಇವರಿಗೆ ಹಾಗೆ ಮಾಡಬಾರದು ಅಂದು ಕೊಂಡ. ಮರುದಿನ ಸೂರ್ಯಹುಟ್ಟುವಾಗಲೆ ಹೊರಡೋದು ಅಂತ ನಿಶ್ಚಯವಾಯಿತು. ಅದೇಕೋ ಊರಿಗೆ ದಿನಾ ಬರುತ್ತಿದ್ದ ಇಸ್ಮಾಯಿಲ್ ಬಸ್ ಮೂರುದಿನದಿಂದ ಬರುತ್ತಲೆ ಇಲ್ಲ , ಅದಕ್ಕೆ ಪಕ್ಕದ ಹಳ್ಳಿಗೆ ನಡೆದುಹೋಗಿ ಅಲ್ಲಿ ರೈಲ್ ಹತ್ತಿ ಬೆಂಗಳೂರಿಗೆ ಹೋಗೋದು ಅಂತ ಅವರಮ್ಮ ಅಂದಳು.
=========================================================
ನೀನು ಮಾತ್ರ ನಕ್ಕರೆ ಸಾಕೆ ಸ್ವಾರ್ತಿಯಾಗಬೇಡ ಎಲ್ಲರಿಗು ನಗುವನ್ನು ಹಂಚು
=========================================================
ಸೂಚನೆ: ಇಲ್ಲಿಯ ಯಾವುದೆ ಜೋಕ್ ಗಳು ನನ್ನ ಸ್ವಂತದಲ್ಲ ಅಲ್ಲಲ್ಲಿ ಕೇಳಿದ್ದು ಅಲ್ಲಲ್ಲಿ ಓದಿದ್ದು