ಶಂಭೊ ಸಿದ್ದಲಿಂಗ : ಅಹಾ ಪಾಯಸ

ಶಂಭೊ ಸಿದ್ದಲಿಂಗ : ಅಹಾ ಪಾಯಸ

ಬರಹ

                        ಶಂಭೊ ಸಿದ್ದಲಿಂಗ : ಅಹಾ ಪಾಯಸ 





 

 

 

 


ಇನ್ನೇನು ನವೆಂಬರ್ ಬಂತು ಕನ್ನಡದ ಬಾವುಟ ಹಾರಲು ಶುರು ಆದರೆ ಬೆಂಗಳೂರಿನಲ್ಲಿ ಕನ್ನಡವೆಂದರೆ 'ಎನ್ನಡ' ವೇ ಹತ್ತು ಹಲವು ಬಾಷೆಯಮದ್ಯೆ ಕನ್ನಡ ಎಷ್ಟರದೊ?? ನಿಜವಾದ ಕನ್ನಡವಿಂದು ಬದುಕಿರುವುದು ಹಳ್ಳಿಗಳಲ್ಲಿ ಅದರಲ್ಲು ಹಳ್ಳಿಯ ಕನ್ನಡ ಶಾಲೆಯ ಪ್ರಾಥಮಿಕ ತರಗತಿಯ 'ಮೇಷ್ಟ್ರ ಬಾಯಲ್ಲಿ' . ಮಂಡ್ಯದ ಹತ್ತಿರದ ಒಂದು ಹಳ್ಳಿಯಲ್ಲಿ ಅಂತ ಕನ್ನಡ ಶಾಲೆಯ ಮಾಸ್ಟರ್ ಒಬ್ಬರು ತಮ್ಮ ಮನೆಯ ಜಗುಲಿಯಲ್ಲಿ ಸಪ್ಪಗೆ ಕುಳಿತ್ತಿದ್ದರು , ಶಾಲೆಗೆ ರಜಾ ಅಂದರೆ ಈ ಮೇಷ್ಟ್ರುಗಳು ಸಪ್ಪೆ ಸಪ್ಪೆಯೆ. ದೂರದಲ್ಲಿ ಯಾರೊ ಹುಡುಗ ಬರುತ್ತಿದ್ದಾನೆ , ಯಾರೇನು ಅವರ ಶಾಲೆಯಲ್ಲಿಯೆ ಓದುತ್ತಿರುವ ಸಿದ್ದಲಿಂಗ, ಬುದ್ದಿವಂತನಾದರು ಸ್ವಲ್ಪ ಅಪಾಯಕಾರಿಯೆ , 'ಇವ್ನಿಗೇನು ಕೆಲ್ಸ ನಮ್ಮ ಮನೇ ಹತ್ರ ' ಅನ್ನುವಾಗಲೆ ಅವನು ಇವರ ಮುಂದೆ ನಿಂತಿದ್ದ , ಗಮನಿಸಿದರು ಅವನ ಕೈಯಲ್ಲಿ ಒಂದು ತಂಬಿಗೆ ಬೇರೆ.

 'ಯಾತ್ರುದೋ ಅದು? , ಯಾಕೆ ಬಂದೆ ? ಒಟ್ಟಿಗೆ ಎರಡು ಪ್ರಶ್ನೆ


 ಸಿದ್ದಲಿಂಗನಿಗೆ ಈ ಮೇಷ್ಟ್ ರ ಪ್ರಶ್ನೆಗಳೇನು ಅಪರೂಪವೇ ?


  'ಏನಿಲ್ಲ ಸಾರ್ ನಮ್ಮಮ್ಮ ಮನೇಲಿ ಹಬ್ಬ ಅಂತ ಗಸಗಸೆ ಪಾಯಸ ಮಾಡಿದ್ದಳು ನಿಮಗೆ ಅಂತ ತಂದೆ'


 ಬ್ರಹ್ಮಚಾರಿ ಮೇಷ್ಟ್ರ ಮುಖ ಊರಗಲವಾಯಿತು , ತಂಬಿಗೆ ಪಡೆದು , 'ಏನೋ ಇವತ್ತು ಹಬ್ಬಕ್ಕೆ' ಅನ್ನುತ್ತಾ ತಂಬಿಗೆ ಮೇಲೆ ಎತ್ತಿ ಇಷ್ಟಗಲ ಬಾಯಿ ತೆರೆದು ಪಾಯಸ ಸುರಿದುಕೊಂಡರು . ಈಗ ಅವರಿಗೆ ಏನು ಹೇಳಿದರು ಕೇಳಿಸಲ್ಲ ಅಂತ ಅವರ ಮುಖ ನೋಡುತ್ತ ನಿಂತಿದ್ದ ಸಿದ್ದಲಿಂಗ. ಮುಗಿಸಿದ ಮೇಷ್ಟ್ರು ಕೇಳಿದರು ಪುನಃ


 ' ಏನೋ ಇವತ್ತು ಸ್ಪೆಶಲ್ ? , ನೀನು ನಂಗೊಬ್ಬಂಗೆ ಇಷ್ಟೊಂದ್ ತಂದು ಕೊಟ್ಬೀಟ್ರೆ ಮನೇಲಿ ಎಲ್ಲ ಕುಡಿಬೇಡ್ವೇನೊ?'






 ಸಿದ್ದಲಿಂಗ ಅವರ ಮುಖ ನೋಡುತ್ತ ಹೇಳಿದ




 ' ನನ್ನ ಹುಟ್ದಬ್ಬ ಮೇಷ್ಟ್ರೆ ಅದಕ್ಕೆ ನಮ್ಮಮ್ಮ ಪಾಯಸ ಮಾಡಿದ್ಲ , ಅವಳು ಹೊರಹೋಗಿ ಬರುವದರೊಳಗೆ ಹಾಳಾದು ನಾಯಿ ಬಂದು ಪಾಯಸದ ಪಾತ್ರೆಗೆ ಬಾಯಿ ಹಾಕಿಬುಡ್ತು, ನಮ್ಮಮ್ಮ ಎಲ್ಲ ಚೆಲ್ಲಿಬಿಡ್ತೀನಿ ಅಂತಿದ್ಲು ನಾನು ಏಕೆ ವೇಷ್ಟ್ ಮಾಡ್ಬೇಕು ಅಂತ ನಿಮಗೆ ತಂದು ಕೊಟ್ಟೆ' ಮೊದಲೆ ಕಪ್ಪಗಿದ್ದ ಮೇಷ್ಟ ಮುಖ ಕೋಪದಿಂದ ಮತ್ತಷ್ಟು ಕಪ್ಪಾಯಿತು   








 

 

 

 


'ಅಯ್ಯೋ ಅನಿಷ್ಟವೆ , ನನಗೆ ನಾಯಿ ಎಂಜಲು ಕುಡಿಸಿದೆಯೋನೊ ? , ಪ್ರಾರಬ್ದ , ಶ್ವಬಚ ’ ಅಂತ ಶುದ್ದ ಕನ್ನಡಪದಗಳಲ್ಲಿ ಅವನ್ನನ್ನು ಕೊಂಡಾಡುತ್ತ , ಮತ್ತು ಕೋಪ ತಡೆಯದೆ ಕೈಯಲ್ಲಿದ್ದ ತಂಬಿಗೆಯನ್ನು ನೆಲಕ್ಕೆ ಅಪ್ಪಳಿಸಿದರು . ಗಾಭರಿಬಿದ್ದ ಸಿದ್ದಲಿಂಗ ಉರುಳುತ್ತ ಹೋದ ತಂಬಿಗೆಯ ಹಿಂದೆ ಓಡಿಹೋಗಿ ತಡೆದು ಅದನ್ನು ಕೈಯಲ್ಲಿ ಹಿಡಿದು ಜೋರಾಗಿ ಅಳಲು ಪ್ರಾರಂಬಿಸಿದ. ತಮ್ಮಗೆ ಗೊತ್ತಿದ್ದ ಬೈಯುವ ಪದಗಳನ್ನೆಲ್ಲ ಉಪಯೋಗಿಸಿದ ನಂತರ ಮೇಷ್ಟ್ರ ಕೋಪ ಸ್ವಲ್ಪ ತಣಿಯಿತು. ಹೇಗೂ ಕುಡಿದಾಯಿತು ಈಗ ಏನು ಮಾಡುವಂತಿಲ್ಲ ಅಂತ ಈಗ ಸಿದ್ದಲಿಂಗನ ಅಳು ಗಮನಿಸಿದರು , ’ಹೋಗಿಲಿ ಬಿಡೊ ಯಾಕಳ್ತೀಯ ’ ಅಂದರು , ಆದರೆ ವಾಲಗ ನಿಲ್ಲುತ್ತಿಲ್ಲ , ಅವರು ಸ್ವಲ್ಪ ಹೆದರಿಕೊಂಡರು , ಮೊದಲೆ ಹಳ್ಳಿ ಜನ ಮಂಡ್ಯದ ಕಡೆಯವರು , ಪತ್ರಿಕೆಗಳಲ್ಲಿ ಓದಿದ್ದರು ಶಾಲೆಯ ಮೇಷ್ಟ್ರುಗಳಿಗೆ ಏಟುಬಿದ್ದಿದ್ದನ್ನು , ತನಗೆ ಯಾವ ಗ್ರಹಾಚಾರ    



 

 

 

 


’ ಸುಮ್ಮನಿರೊ ಯಾಕಳ್ಟೀಯಾ? ಈಗ ನಾನೇನು ನಿನಗೆ ಹೊಡೆದನಾ? ಅಳಕ್ಕೆ ’  



 

 

 

 


ಸಿದ್ದಲಿಂಗ ಅಳುತ್ತಲೆ ಹೇಳಿದ ’ ಅದು ಹಾಗಲ್ಲ ಮೇಷ್ಟ್ರೆ ನೀವು ಚೊಂಬನ್ನು ಎಸೆದಿರಿ ಅದು ನೆಗ್ಗಿ ಹೋಗಿದೆ’    



 

 

 

 


’ ಸರಿ ಏನಾಯ್ತೀಗ ಹಳೇ ತಂಬಿಗೆ ತಾನೆ ಬಿಡು’ ಅಂದರು ಮೇಷ್ಟ್ರು,    



 

 

 

 


’ಅದು ಹಾಗಲ್ಲ ಮೇಷ್ಟೆ , ಇದು ದಿನಾ ನಮ್ಮಪ್ಪ ಬೆಳಗ್ಗೆ ಕೆರೆಕಡೆ ಹೋಗ್ವಾಗ ತಗಂಡು ಹೋಗೋ ಚೊಂಬು , ನೆಗ್ಗಿ ಹೋಯ್ತು , ಈಗ ನಮ್ಮಪ್ಪ ಹೊಡಿತಾನೆ ’   



 

 

 

 


ತೆರದ ಬಾಯಿ ತೆರದಂತೆ ನಿಂತ ಕಪ್ಪಾದ ಮೇಷ್ಟ್ರ ಮುಖವನ್ನು ಅಳುತ್ತಲೆ ನೋಡ್ತ ನಿಂತ ಸಿದ್ದಲಿಂಗ "ಶಂಬೋ ಸಿದ್ದಲಿಂಗ"

 


   


 

 

 

 



ನಗುವುದು ತನ ಧರ್ಮ ನಗಿಸುವುದು ಪರಧರ್ಮ ನಗುವಕೇಳಿ ನಗುವುದು ಅತಿಶಯದ ಧರ್ಮ ನಗುವ ನಗಿಸುವ ನಗಿಸಿನಗುತ ಬಾಳುವ ವರವ ನೀ ಬೇಡಿಕೊ ಮಂಕುತಿಮ್ಮ

 

 

 

 

 

 


----------------------------------------------------------------------------------------------------

 

  





 

 

 

 

 


 

 

 

 

 

 


ಸೂಚನೆ: ಇಲ್ಲಿಯ ಯಾವುದೆ ಜೋಕ್ ಗಳು ನನ್ನ ಸ್ವಂತದಲ್ಲ ಅಲ್ಲಲ್ಲಿ ಕೇಳಿದ್ದು ಅಲ್ಲಲ್ಲಿ ಓದಿದ್ದು