ಶಂಭೊ ಸಿದ್ದಲಿಂಗ: ಬೆಂಗಳೂರಿನತ್ತ
(ಮಾಲಿಕೆ :ಮೂರು)
ಶಂಭೊ ಸಿದ್ದಲಿಂಗ: ಬೆಂಗಳೂರಿನತ್ತ
ಅಪ್ಪನನ್ನ ಹೇಗೊ ನಡೆಸಿಕೊಂಡು ಅಮ್ಮನ ಜೊತೆ ರೈಲು ನಿಲ್ದಾಣ ತಲುಪಿದ ಸಿದ್ದಲಿಂಗ ಹಿಂದೊಮ್ಮೆ ತನ್ನ ಗೆಳೆಯನ ಜೊತೆ ಇಲ್ಲೆಲ್ಲ ಬಂದು ಓಡಾಡಿಕೊಂಡು ಹೋಗಿದ್ದ ಹಾಗಾಗಿ ಜಾಗ ಸ್ವಲ್ಪ ಪರಿಚಿತವೆ. ನಿಲ್ದಾಣದ ಒಳಹೊಕ್ಕಿ ಯರಾರನ್ನೊ ಕೇಳಿ ಬೆಂಗಳೂರಿಗೆ ಹೋಗುವ ಟಿಕೆಟ್ ಪಡೆದು ರೈಲು ಬಂದು ನಿಲ್ಲುವ ಜಾಗಕ್ಕೆ ಬಂದು ನಿಂತ. ಉದ್ದಕ್ಕೆ ಮಲಗಿದ್ದ ಕಂಬಿಗಳನ್ನು ನೋಡುತ್ತ ಅವನಿಗೆ ಆಶ್ಚರ್ಯ ಈ ಕಂಬಿಗಳಿಗೆ ಪ್ರಾರಂಭ ಎಲ್ಲಿ ಕೊನೆಯೆಲ್ಲಿ ? . (ಆದಿಯಿಲ್ಲ ಅಂತ್ಯವಿಲ್ಲ ಅಂದರೆ ರೈಲ್ವೆಕಂಬಿಗಳೆ ದೈವವ!!) . ಬೆಂಗಳೂರಿಗೆ ಹೋಗುವ ರೈಲು ಯಾವಕಡೆಯಿಂದ ಬಂದು ಯಾವ ಕಡಗೆ ಹೋಗುತ್ತದೆ? . ಕಡೆಗೂ ಒಂದು ರೈಲು ಬಂತು ಮತ್ತು ಅದು ಬೆಂಗಳೂರಿಗೆ ಹೋಗುತ್ತೆ ಅಂತ ಪಕ್ಕದವರು ಹೇಳಿದಾಗ ಅಪ್ಪ ಅಮ್ಮನನ್ನು ಹತ್ತಿಸಿ ತಾನು ಹತ್ತಿದ , ಇದು ಅವನ ಮೊದಲ ರೈಲಿನ ಪಯಣ ನಿಜಕ್ಕು ಗಾಬರಿಯಾಗಿ ಹೋದ. ಅಪ್ಪ ಅಮ್ಮನನ್ನು ಒಂದುಕಡೆ ಕೂಡಿಸಿ ತಾನು ಕಡೆಯಲ್ಲಿ ಕುಳಿತ. ಈಗ ಸುತ್ತಲು ಗಮನಿಸಿದಾಗ ಅವನ ಎದುರಿಗೆ ಒಬ್ಬ ಹುಡುಗ ಕುಳಿತ್ತಿದ್ದ. ತಾನು ನಿಕ್ಕರ್ ಹಾಗು ಶರ್ಟ್ ಹಾಕಿದ್ದರೆ ಅವನು ಹೊಳೆಯುವ ಬಟ್ಟೆಯ ಪ್ಯಾಂಟ್ ಶರ್ಟ್ ಇಷ್ಟು ಚಿಕ್ಕವಯಸ್ಸಿಗೆ ದಪ್ಪಗಾಜಿನ ಕನ್ನಡಕ. ಕನ್ನಡಕದ ಸಂದಿಯಿಂದ ನೋಡುವ ಅವನ ನೋಟವೇ ಸಾಕು ಸಿದ್ದಲಿಂಗನಿಂಗೆ ಸಾಕಷ್ಟು ಮುಜುಗರ ಮಾಡುತ್ತಿತ್ತು. "ಎಲ್ಲಿಗೆ ಹೋಗ್ತಾಯಿದ್ದಿಯೊ" ಅವನು ಪ್ರಶ್ನಿಸಿದ. "ಬೆಂಗಳೂರಿಗೆ" ಇವನ ಉತ್ತರ. "ಎಷ್ಟನೆ ಕ್ಲಾಸ್ " ಅವನ ಪ್ರಶ್ನೆಗೆ ಇವನು "ಏಳು" ಎಂದು ಉತ್ತರಿಸಿದ. ಇಬ್ಬರು ವಿಷಯ ಅದಲು ಬದಲು ಮಾಡಿಕೊಂಡರು. ಆ ಹುಡುಗನು ಇವನ ವಯಸ್ಸಿನವನೆ. ಸ್ವಲ್ಪ ಹೊತ್ತಿನಲ್ಲಿ ಅವನು ಕೇಳಿದ ಸುಮ್ಮನೆ ಕುಳಿತಿರುವ ಬದಲು ಏನಾದರು ಆಟ ಆಡೋಣ್ವ? . ಇವನಿಗು ಹುಡುಗುಸಹಜ ಬುದ್ದಿ ಆಯ್ತು ಎಂದ. "ನೋಡು ಸುಮ್ಮನೆ ಆಡಿದರೆ ಮಜಾ ಇರೋಲ್ಲ , ಪಂದ್ಯವಿದ್ದರೆ ಸರಿ ಇರುತ್ತೆ ಏನಂತಿ?". ಪೇಟೆಯ ಹುಡುಗ ಚುರುಕು ಅವನು ಹೇಳಿದ "ನಾನು ಒಂದು ಪ್ರಶ್ನೇ ಕೇಳ್ತೀನಿ ನೀನು ಉತ್ತರ ಹೇಳಬೇಕು ನೀನು ಗೆದ್ದರೆ ನಿನಗೆ ನೂರು ರೂಪಾಯಿ, ಸೋತರೆ ನೀನು ನನಗೆ ನೂರು ರುಪಾಯಿ ಕೊಡಬೇಕು" ಪಕ್ಕಕ್ಕೆ ನೋಡಿದ ಆ ಹುಡುಗನ ಅಪ್ಪ ಪೇಪರಲ್ಲಿ ಮುಖಮುಚ್ಚಿ ಕುಳಿತ್ತಿದ್ದರು.ಸಿದ್ದಲಿಂಗನಿಗೆ ದುಡ್ಡು ಇಟ್ಟು ಗೋಲಿ ಆಡಿ ಗೊತ್ತು ಆದರೆ ನೂರು ರುಪಾಯ? ಮೇಷ್ಟ ಮಾತು ಕಿವಿಯಲ್ಲಿ ಗುಯ್ಗುಟ್ಟಿತು "ಬೆಂಗಳೂರಿಗೆ ಹೋಗುವಾಗ ಹೆಜ್ಜೆ ಹೆಜ್ಜೆಗೂ ಉಷಾರ್ ತುಂಬಾ ಮೋಸ ನಿನ್ನ ಹತ್ರ ದುಡ್ಡಿದೆ ಅಂತ ಗೊತಾಯ್ತ ಅಷ್ಟೆ " . ತಕ್ಷಣ ಸಿದ್ದಲಿಂಗನೊಳಗಿನ ಸಿದ್ದಲಿಂಗ ಎಚ್ಚರಗೊಂಡ,ಹೇಳಿದ "ಹಂಗೆಲ್ಲ ಆಗಲ್ಲ ನೀನು ಪೇಟೆ ಹುಡುಗ ಬುದ್ದಿವಂತ ನಾನು ಗೆದ್ದರೆ ನೀನು ನೂರು ರುಪಾಯಿ ಕೊಡಾಬೇಕು ನೀನು ಗೆದ್ದರೆ ನಾನು ಅರ್ದ ಅಂದರೆ ಐವತ್ತು ಮಾತ್ರ ಕೊಡುತ್ತೀನಿ , ಅಲ್ಲದೆ ನಾನೆ ಮೊದಲು ಕೇಳೋದು" ಪೇಟೆಯವನಿಗೆ ಆತ್ಮವಿಶ್ವಾಸ ಹಾಗೆ ಆಗಲಿ ನೀನೆ ಏನಾದರು ಕೇಳು ಅಂದ. ಸಿದ್ದಲಿಂಗ ಯೋಚನೆ ಮಾಡಿ ಹೇಳೀದ "ಈಗ ಒಂದು ಒಗಟು ಕೇಳ್ತೀನೆ ನಾಲ್ಕು ಕಾಲು ಮೂರು ಕೈ ಎರಡು ತಲೆ ಇರುವ ಪ್ರಾಣಿ ಯಾವುದು?" ಪೇಟೆಯ ಹುಡುಗ ತಿಣುಕಿದ ಇದಾವ ಪ್ರಾಣಿ ತಾನಾವ ಝೂನಲ್ಲು ನೋಡಿಲ್ಲ? ಎಲ್ಲು ಓದಿದ ನೆನಪಿಲ್ಲ , ಕಡೆಗೆ ಸೋತು ನೂರು ರುಪಾಯಿ ಒಪ್ಪಿಸಿದ, ಈಗ ಅವನ ಸರದಿ , ಕುತೂಹಲ ತಡೆಯದೆ ಹೇಳಿದ "ಈಗ ನಿನ್ನದೆ ಪ್ರಶ್ನೆ ಕೇಳುತ್ತೇನೆ ಆ ಪ್ರಾಣಿ ಯಾವುದು ಹೇಳು ಸಾಕು" . ಸಿದ್ದಲಿಂಗ ಸಪ್ಪೆ ಮುಖಮಾಡುತ್ತ ಅವನು ಕೊಟ್ಟ ನೂರು ರೂಪಾಯಿನಲ್ಲಿ ಐವತ್ತು ಹಿಂದಕ್ಕೆ ಕೊಡುತ್ತ ಹೇಳಿದ " ನಿಜವಾಗಿ ನನಗೂ ತಿಳಿದಿಲ್ಲ!!".
ಶಂಭೋ ಸಿದ್ದಲಿಂಗ
============================================================
ತಮಾಷೆಗಾಗಿ ಯಾರನಾದರು ಆಡಿಕೊಂಡು ಅಣಗಿಸಬೇಕಾದಲ್ಲಿ ನಿನ್ನನ್ನೆ ನೀನು ಆಡಿಕೊ ಆಗ ನಗು ಹೆಚ್ಚುತ್ತದೆ
============================================================
ಸೂಚನೆ: ಇಲ್ಲಿಯ ಯಾವುದೆ ಜೋಕ್ ಗಳು ನನ್ನ ಸ್ವಂತದಲ್ಲ ಅಲ್ಲಲ್ಲಿ ಕೇಳಿದ್ದು ಅಲ್ಲಲ್ಲಿ ಓದಿದ್ದು