ಶತ್ರುಗಳಂತಾಡುವ ರಕ್ತ ಸಂಬಂಧಿಗಳು

ಶತ್ರುಗಳಂತಾಡುವ ರಕ್ತ ಸಂಬಂಧಿಗಳು

ಬರಹ

 

        ಶತ್ರುಗಳಂತಾಡುವ ರಕ್ತ ಸಂಬಂಧಿಗಳು
ಬಹುಶಹ: ಭಾರತೀಯ ನಾಗರೀಕತೆಯ ಇತಿಹಾಸದ ಅಂತಿಮ ಉದ್ದೇಶ ಮತ್ತು ಗುರಿ ಮನುಷ್ಯರು ಎಂತಹ ಬರ್ಬರ ಸ್ಥಿತಿಯನ್ನು ತಲುಪಲು ಸಾಧ್ಯ ಎನ್ನುವುದನ್ನು ಜಗತ್ತಿಗೆ ತೋರಿಸುವುದಾಗಿದೆ. ಜಾತಿ ತಾರತಮ್ಯ ಅಸ್ಪೃಷ್ಯತೆ, ದಲಿತರಿಗೆ ಮಲತಿನ್ನಿಸುವುದು, ಕೊಲ್ಲುವುದು, ಅತ್ಯಚಾರ, ಬಾಬರಿ ಮಸಿದಿ ಗುಜಾರಾತ್, ಮಂಗಳೂರು ಶಿವಮೊಗ್ಗದ ಘಟನೆಗಳು ಇತಿಹಾಸದ ಈ ಉದ್ದೇಶವನ್ನು ಮತ್ತೆ ಮತ್ತೆ ಸಾಧಿಸಿ ತೊರಿಸುತ್ತಿವೆ.
ಮೂನ್ನೆ ಇದ್ದಕ್ಕಿಂದಂತೆ ಕೈಗೆ ಸಿಕ್ಕ ದ ಲಾಸ್ಟ್ ಡೇಸ್ ಆಪ್ ದಿ ರಾಜ್ ಎಂಬ ಸಾಕ್ಷಚಿತ್ರ ನೋಡುವ ಅವಕಾಶ ಸಿಕ್ಕಿತು ಅದನ್ನು ನೋಡಿದ ಕೊಡಲೇ ಎದೆಯೊಳಗೆ ನೋವು ಹೆಪ್ಪುಗಟ್ಟಿದ ಅನುಭವ! ತಕ್ಷಣ ಲೈಬ್ರರಿಗೆ ಹೋಗಿ ಪುಸ್ತಕಗಳ ರಾಶಿಯಿಂದ ಭಾರತ ವಿಭಜನೆಯ ಕುರಿತಾದ ಪುಸ್ತಕಗಳನ್ನು ಹೆಕ್ಕಿ ತಂದು ಒದತೊಡಗಿದೆ. ನಿಜ ಹೇಳಬೆಕೇಂದರೆ ಅದೊಂದು ದುರಂತ ಅನುಭವ, ಪ್ರೊ. ರಾಜೆಂದ್ರ ಚೆನ್ನಿಯವರು ಈ ದೇಶದ ಜ್ಙಾನೇಂದ್ರಪಾಂಡೆ ಮುಂತಾದ ಇತಿಹಾಸಕಾರರ ಬರವಣಿಗೆಗಳನ್ನು ಉಲ್ಲೆಖಿಸಿ ವಿಭಜನೆಯ ಕಾಲದಲ್ಲಿ ಗಡಮುಕ್ತೇಶ್ವರವೆನ್ನುವ ಊರು ಮತ್ತು ಇತರ ಕಡೆಗಳಲ್ಲಿ ನಡೆದ ಹಿಂಸೆಯ ವಿವರಗಳನ್ನು ಕುರಿತು ಬರೆಯುತ್ತಾರೆ. ಆ ವಿವರಗಳನ್ನು ಒದುತ್ತಾ ಹೊದಂತೆ ತತ್ತರಿಸಿ ಹೋದೆ ನಮ್ಮ ಕಲ್ಪನೆಯ ಭಿತ್ತಿಯಲ್ಲಿ ಅಂಗುಲಂಗುಲವು ಬಿಡದಂತೆ ಅವರಿಸಿಕೊಳ್ಳವ ವಿವರಗಳು ಈ ಕಥನಗಳಲ್ಲಿವೆ.
ಘಟನೆ-೧ ಗಡಮುಕ್ತೇಶ್ವರ ಊರಿಂದ ಸ್ವಲ್ಪದೂರದಲ್ಲಿ ಒಂದು ದೊಡ್ಡ ಜಾತ್ರೆ ಹೆಚ್ಚು ಕಡಿಮೆ ಆರೇಳು ಲಕ್ಷ ಜನ ಸೇರಿದ್ದರು. ಎಲ್ಲಾ ಜಾತ್ರಗಳಲ್ಲಿರುವಂತೆ ಅಲ್ಲಿಯೂ ಅಂಗಡಿಗಳು, ಪ್ರದರ್ಶನಗಳು, ಆಟಗಳು. . . ಜಾತ್ರೆಯ ಯಾವುದೋ ಒಂದು ಕಡೆ ಯಾರೋ ಮುಸ್ಲಿಂ ಗಂಡಸು ಹಿಂದೂ ಹೆಂಗಸನ್ನು ಚುಡಾಯಿಸಿದನೆಂದು ಗಾಳಿ ಸುದ್ದಿ ಹೊರಟಿತು. ಸರಿ ಜಾತ್ರೆಯಲ್ಲಿದ್ದ ಎಲ್ಲಾ ಮುಸ್ಲಿಂ ಅಂಗಡಿಗಳನ್ನು ಚಿಂದಿ ಮಾಡಿದರು. ಕೆಲವರನ್ನು ಇರಿದು, ಬಡಿದು, ಕೊಂದರು ಅದು ಅಷ್ಟಕ್ಕೆ ನಿಲ್ಲಲಿಲ್ಲ  ಮರುದಿನ ಅಲ್ಲಿಯ ಮತ್ತು ವಿಭಜನೆಯ ಕಾಲವಾದ್ದರಿಂದ ಬೇರೆ ಕಡೆಯಿಂದ ಬಂದ ಪಂಜಾಬಿ ಸಂತ್ರಸ್ತರು ಸೇರಿ ಗಡಮುಕ್ತೇಶ್ವರದಲ್ಲಿ ಮಾರಣ ಹೋಮವನ್ನೆ ಮಾಡಿದರು. ಇದ್ದಿಲಿನಿಂದ ಗುರುತು ಮಾಡಿದ ಮನೆಗಳ ಮೇಲೆ ದಾಳಿ ಮಾಡಿದರು. ಅಲ್ಲಿನ ಹೆಂಗಸರನ್ನು ಗಂಡಸರು ಹೊತ್ತುಕೊಂಡು ಹೋದರು. ಗರ್ಭಿಣಿ  ಸ್ತ್ರಿಯರ ಮೇಲೆ ಆತ್ಯಚಾರ ಮಾಡಿದರು. ಗರ್ಭದಲ್ಲಿದ್ದ ಇನ್ನೂ ಪೂರ್ತಿ  ಹುಟ್ಟಿರದ ಜೀವಗಳನ್ನು ಖಡ್ಗಗಳಿಂದ. . . . . 
ಘಟನೆ-೨  ಸಿಖ್ ಜನಾಂಗವೇ ಹೆಚ್ಚಾಗಿರುವ ಹಳ್ಳಿಯೊಂದನ್ನು ಮುಸ್ಲಿಂ ದಾಳಿಕೊರರು ಸುತ್ತುವರಿಯುತ್ತಾರೆ. ಸಂಖ್ಯೆಯಲ್ಲಿ, ಆಯುಧ ಬಲದಲ್ಲಿ ಅವರದೇ ಮೇಲಿಗೈ. ಹೀಗಾಗಿ ಸೋಲು ಖಂಡಿತ ಹಾಗೆ ಆದ ಪಕ್ಷದಲ್ಲಿ ಹಳ್ಳಿಯ ಹೆಂಗಸರಿಗೆ ಆತ್ಯಾಚಾರ, ಬಲವಂತದ ಮತಾಂತರ ಹೊರತಾಗಿ ಬೇರೆ ಯಾವ ಭವಿಷ್ಯವು ಇಲ್ಲದಂತ ಸ್ಥಿತಿ. ಆದ್ದರಿಂದ ಅವರು ಹಳ್ಳಿಯ ಬಾವಿಗೆ ಹಾರಿ ಸಾಮೂಹಿಕ ಆತ್ಮಹತ್ಯೆಯ ನಿರ್ಧಾರ  ತೆಗೆದುಕೊಳ್ಳುತ್ತಾರೆ. ಒಬ್ಬರ ನಂತರ ಒಬ್ಬರು. ಕೊನೆಗೆ ಉಳಿದವರೆಂದರೆ ಬಾವಿಯಲ್ಲಿ ಹಾರಿ ಅಲ್ಲಿದ್ದ ಹೆಣಗಳಿಂದಾಗಿ ಮುಳುಗಲಾಗದ ಹೆಂಗಸರು ಮಾತ್ರ. . .
 ಘಟನೆ-೩  ಇನ್ನೊಂದು ಸಿಖ್ ಹಳ್ಳಿ ಅಲ್ಲಿಯೂ ಅದೇ ಪರಿಸ್ಥಿತಿ ಅಲ್ಲಿಯ ಗಂಡಸರು ನಿರ್ದರಿಸುತ್ತಾರೆ. ಬಲತ್ಕಾರಕ್ಕೆ ಬಲಿ ಕೊಡುವ ಬದಲು ತಮ್ಮ ಮನೆಯ ಹೆಂಗಸರನ್ನು ತಾವೇ ಕೊಲ್ಲುವುದು ಲೇಸು. ಇದಕ್ಕೆ ಅಲ್ಲಿಯ ಹೆಂಗಸರೂ ಒಪ್ಪಿಕೊಳ್ಳುತ್ತಾರೆ(?) ಮಗಳು ತಂದೆಯ ಎದುರು ಮಂಡಿಯೂರಿ ತನ್ನ ಕೂದಲನ್ನು ಬದಿಗೆ ಸರಿಸಿತ್ತಾಳೆ. ಮೊದಲ ಎಟು ತನ್ನ ಕೆಲಸ ಮುಗಿಸುವುದಿಲ್ಲ ಆಗ ತಂದೆಯ ಪರಿಸ್ಥಿತಿ ... 
ಘಟನೆ-೩   ಒಬ್ಬ ವಿದ್ವಾಂಸ ಬರಹಗಾರ ಹೇಗೋ ಏನೋ ಪಾಕಿಸ್ತಾನಕ್ಕೆ ಹೊರಡುತ್ತಾನೆ. ಉದ್ದಕ್ಕೂ ರೈಲಿನಲ್ಲಿ ಹಿಂಸೆ, ಹೆದರಿಕೆ. ಪಾಕಿಸ್ತಾನ ತಲುಪಿದ ತಕ್ಷಣ ಎನೋ ಸಮಾಧಾನ ಬಿಡುಗಡೆಯ ನಿಟ್ಟುಸಿರು ಅಲ್ಲಿದ್ದವರಿಂದ ಜೈಕಾರ. ಭಾರತದಲ್ಲಿ ನಡೆಯುತ್ತಿರುವ ಹಿಂಸೆಯ ಬಗ್ಗೆ ಕೇಳಿ 'ಬೇಸರ ಮಾಡಿಕೊಳ್ಳಬೇಡಿ ಅವರಿಗೆ ಬಡ್ಡಿ ಸಮೇತ ವಾಪಸು ಕೊಡುತ್ತೆವೆ' ಎಂಬ ಅಶ್ವಾಸನೆ. ಅಲ್ಲಿಂದ ಭಾರತಕ್ಕೆ ಹೋರಾಟ ರೈಲಿನ  ಮೇಲೆ ದಾಳಿ ಅದರಲ್ಲಿದ್ದವರ ಮಾರಣ ಹೋಮ. .
ವಿಭಜನೆಯ ಸಂದರ್ಭದಲ್ಲಿ ಅಂತ್ಯಂತ ನಷ್ಟ ಅನುಭವಿಸಿದವಳು ಎರಡು ಜನಾಂಗಕ್ಕೆ ಸೇರಿದ ಮಹಿಳೆ ಮಾತ್ರ ಒಬ್ಬ ಬ್ರಿಟೀಷ್ ಅಧಿಕಾರಿ ಹೇಳಿದಹಾಗೆ ವಿಭಜನೆಯು ಎಲ್ಲಕ್ಕಿಂತ ಹೆಚ್ಚಾಗಿ ಮಹಿಳೆಯರ ದೇಹಗಳ ಮೇಲೆ ನಡೆದ ಯುದ್ಧವಾಗಿತ್ತು (ತಿಚಿಡಿ ಠಟಿ ಣಜ ತಿಠಟಜಟಿ' ಛಠಜಜ) 
 ಹೀಗೆ ಸಾಗುತ್ತವೆ ಭಾರತ ವಿಭಜನೆಯ ವಿವರಣೆಗಳು ಎಲ್ಲೆಲ್ಲು ನೋವು, ಸಾವು, ರಕ್ತಪಾತ ಹಾಗೆ ನೋಡುವುದಾದರೆ ಈ ದೇಶದ ಇತಿಹಾಸ ಇಂದಿನ ಯುವ ಜನರೀಗೆ ಮಾಡಿದ ಮಹಾ ದ್ರೋಹವೆಂದರೆ ಅದು ಭಾರತದ ವಿಭಜನೆಯ ಕಾಲದಲ್ಲಿ ನಡೆದ ಭಿಕರ ಹಿಂಸಾಚಾರವನ್ನು ನೆನಪಿಗೆ ತಂದುಕೊಳ್ಳಲಾಗದ ಸ್ಥಿತಿಗೆ ನಮ್ಮನ್ನು ತಳ್ಳಿರುವುದು. ಹಾಗೆ ನೋಡಿದರೆ ಹಿಂಸೆಯ ಪರಾಕಾಷ್ಟೆಯಾದ ಭಾರತ ವಿಭಜನೆಯ ಇತಿಹಾಸವನ್ನು ನಮ್ಮ ಹಿರಿಯರು ನಮ್ಮಿಂದ ದೂರವಿಟ್ಟಿದ್ದಾರೆ? ಒಂದರ್ಥದಲ್ಲಿ ನಮ್ಮ ಇತಿಹಾಸದ ರಾಕ್ಷಸ ಅವತಾರವೊಂದನ್ನು ನಾವು ನಮ್ಮ ಸ್ಮೃತಿಯಿಂದಲೇ ತೆಗೆದುhakiddeve. ಬಹು ಸಂಸ್ಕೃತಿಯ ಜನಸಮುದಾಯವೊಂದು ತನ್ನ ಚರಿತ್ರೆಯ ಅತ್ಯಂತ ವಿಲಕ್ಷಣವಾದ ಬೃಹತ್ತಾದ ಹಾಗೂ ಆಘಾತಕರವಾದ ಘಟನೆಯೊಂದನ್ನು ತನ್ನ ನೆನಪು ಮತ್ತು ಕಲ್ಪನೆಯಲ್ಲಿ ಸೇರಿಸಿಕೊಳ್ಳದಿದ್ದರೆ, ಅದರ ಹಿಂದು ಮುಂದುಗಳನ್ನು ಅರ್ಥಮಾಡಿಕೊಳ್ಳದಿದ್ದರೆ ಅದೇ ಬಗೆಯ ಹಿಂಸೆ ಮತ್ತೆ ಮರುಕಳಿಸಿದಾಗ ಅದನ್ನು ಎದುರಿಸುವ ಶಕ್ತಿಯನ್ನು ಕಳೆದುಕೊಂಡು ಬಿಡುತ್ತದೆ. ಎಂಬುದು ನಮ್ಮ ಹಿರಿಯರಿಗೆ ಅರ್ಥವಾಗಬೇಕಿತ್ತು! ನಂತರದ ದಿಗಳಲ್ಲಿ  ಭಾರತದಲ್ಲಿ ನಡೆದ ಕೋಮುಗಲಬೆಯ ಪರಿಣಾಮಗಳು, ಹಿಂಸೆ, ನಮಗೆ ಇತಿಹಾಸದ ಅಧ್ಯಾಯನದ ಅಗತ್ಯತೆಯನ್ನು ಎತ್ತಿ ತೋರಿಸಿವೆ. ಶಿವಮೊಗ್ಗದ ಘಟನೆಯಲ್ಲಿ ಸುಟ್ಟು ಹೋದ ಮೌಂಟ್ ಬೆಲ್ ಮಳಿಗೆಯ ಅವಶೇಷಗಳನ್ನು ಮತ್ತು ಆನಂತರ ಎರಡು ಗುಂಪಿನ ಠ ಛಿಚಿಟಟಜಜ ನಾಯಕರು ಮತ್ತು ದೊಡ್ಡವರೆನಿಸಿಕೊಂಡವರ ಹೇಳಿಕೆಗಳನ್ನು/ವರ್ತನೆಗಳನ್ನು ಗಮನಿಸಿದಾಗ 'ಈ ದೇಶದಲ್ಲಿನ ಎರಡು ಸಮುದಾಯಗಳ ನಡುವೆ ನಡೆಯುವ ಹಿಂಸೆಗೆ ದುರಂತದ ಘನತೆ ಕೂಡ ಇರುವುದಿಲ್ಲ' ಎಂಬುದು ನನಗೆ ಸ್ಪಷ್ಟವಾಗಿತ್ತು. 
 

        ಬಹುಶಹ: ಭಾರತೀಯ ನಾಗರೀಕತೆಯ ಇತಿಹಾಸದ ಅಂತಿಮ ಉದ್ದೇಶ ಮತ್ತು ಗುರಿ ಮನುಷ್ಯರು ಎಂತಹ ಬರ್ಬರ ಸ್ಥಿತಿಯನ್ನು ತಲುಪಲು ಸಾಧ್ಯ ಎನ್ನುವುದನ್ನು ಜಗತ್ತಿಗೆ ತೋರಿಸುವುದಾಗಿದೆ. ಜಾತಿ ತಾರತಮ್ಯ ಅಸ್ಪೃಷ್ಯತೆ, ದಲಿತರಿಗೆ ಮಲತಿನ್ನಿಸುವುದು, ಕೊಲ್ಲುವುದು, ಅತ್ಯಚಾರ, ಬಾಬರಿ ಮಸಿದಿ ಗುಜಾರಾತ್, ಮಂಗಳೂರು ಶಿವಮೊಗ್ಗದ ಘಟನೆಗಳು ಇತಿಹಾಸದ ಈ ಉದ್ದೇಶವನ್ನು ಮತ್ತೆ ಮತ್ತೆ ಸಾಧಿಸಿ ತೊರಿಸುತ್ತಿವೆ.ಮೂನ್ನೆ ಇದ್ದಕ್ಕಿಂದಂತೆ ಕೈಗೆ ಸಿಕ್ಕ ದ ಲಾಸ್ಟ್ ಡೇಸ್ ಆಪ್ ದಿ ರಾಜ್ ಎಂಬ ಸಾಕ್ಷಚಿತ್ರ ನೋಡುವ ಅವಕಾಶ ಸಿಕ್ಕಿತು ಅದನ್ನು ನೋಡಿದ ಕೊಡಲೇ ಎದೆಯೊಳಗೆ ನೋವು ಹೆಪ್ಪುಗಟ್ಟಿದ ಅನುಭವ! ತಕ್ಷಣ ಲೈಬ್ರರಿಗೆ ಹೋಗಿ ಪುಸ್ತಕಗಳ ರಾಶಿಯಿಂದ ಭಾರತ ವಿಭಜನೆಯ ಕುರಿತಾದ ಪುಸ್ತಕಗಳನ್ನು ಹೆಕ್ಕಿ ತಂದು ಒದತೊಡಗಿದೆ. ನಿಜ ಹೇಳಬೆಕೇಂದರೆ ಅದೊಂದು ದುರಂತ ಅನುಭವ, ಪ್ರೊ. ರಾಜೆಂದ್ರ ಚೆನ್ನಿಯವರು ಈ ದೇಶದ ಜ್ಙಾನೇಂದ್ರಪಾಂಡೆ ಮುಂತಾದ ಇತಿಹಾಸಕಾರರ ಬರವಣಿಗೆಗಳನ್ನು ಉಲ್ಲೆಖಿಸಿ ವಿಭಜನೆಯ ಕಾಲದಲ್ಲಿ ಗಡಮುಕ್ತೇಶ್ವರವೆನ್ನುವ ಊರು ಮತ್ತು ಇತರ ಕಡೆಗಳಲ್ಲಿ ನಡೆದ ಹಿಂಸೆಯ ವಿವರಗಳನ್ನು ಕುರಿತು ಬರೆಯುತ್ತಾರೆ.

ಆ ವಿವರಗಳನ್ನು ಒದುತ್ತಾ ಹೊದಂತೆ ತತ್ತರಿಸಿ ಹೋದೆ ನಮ್ಮ ಕಲ್ಪನೆಯ ಭಿತ್ತಿಯಲ್ಲಿ ಅಂಗುಲಂಗುಲವು ಬಿಡದಂತೆ ಅವರಿಸಿಕೊಳ್ಳವ ವಿವರಗಳು ಈ ಕಥನಗಳಲ್ಲಿವೆ.ಘಟನೆ-೧ ಗಡಮುಕ್ತೇಶ್ವರ ಊರಿಂದ ಸ್ವಲ್ಪದೂರದಲ್ಲಿ ಒಂದು ದೊಡ್ಡ ಜಾತ್ರೆ ಹೆಚ್ಚು ಕಡಿಮೆ ಆರೇಳು ಲಕ್ಷ ಜನ ಸೇರಿದ್ದರು. ಎಲ್ಲಾ ಜಾತ್ರಗಳಲ್ಲಿರುವಂತೆ ಅಲ್ಲಿಯೂ ಅಂಗಡಿಗಳು, ಪ್ರದರ್ಶನಗಳು, ಆಟಗಳು. . . ಜಾತ್ರೆಯ ಯಾವುದೋ ಒಂದು ಕಡೆ ಯಾರೋ ಮುಸ್ಲಿಂ ಗಂಡಸು ಹಿಂದೂ ಹೆಂಗಸನ್ನು ಚುಡಾಯಿಸಿದನೆಂದು ಗಾಳಿ ಸುದ್ದಿ ಹೊರಟಿತು. ಸರಿ ಜಾತ್ರೆಯಲ್ಲಿದ್ದ ಎಲ್ಲಾ ಮುಸ್ಲಿಂ ಅಂಗಡಿಗಳನ್ನು ಚಿಂದಿ ಮಾಡಿದರು. ಕೆಲವರನ್ನು ಇರಿದು, ಬಡಿದು, ಕೊಂದರು ಅದು ಅಷ್ಟಕ್ಕೆ ನಿಲ್ಲಲಿಲ್ಲ  ಮರುದಿನ ಅಲ್ಲಿಯ ಮತ್ತು ವಿಭಜನೆಯ ಕಾಲವಾದ್ದರಿಂದ ಬೇರೆ ಕಡೆಯಿಂದ ಬಂದ ಪಂಜಾಬಿ ಸಂತ್ರಸ್ತರು ಸೇರಿ ಗಡಮುಕ್ತೇಶ್ವರದಲ್ಲಿ ಮಾರಣ ಹೋಮವನ್ನೆ ಮಾಡಿದರು. ಇದ್ದಿಲಿನಿಂದ ಗುರುತು ಮಾಡಿದ ಮನೆಗಳ ಮೇಲೆ ದಾಳಿ ಮಾಡಿದರು. ಅಲ್ಲಿನ ಹೆಂಗಸರನ್ನು ಗಂಡಸರು ಹೊತ್ತುಕೊಂಡು ಹೋದರು. ಗರ್ಭಿಣಿ  ಸ್ತ್ರಿಯರ ಮೇಲೆ ಆತ್ಯಚಾರ ಮಾಡಿದರು. ಗರ್ಭದಲ್ಲಿದ್ದ ಇನ್ನೂ ಪೂರ್ತಿ  ಹುಟ್ಟಿರದ ಜೀವಗಳನ್ನು ಖಡ್ಗಗಳಿಂದ. . . . .

 ಘಟನೆ-೨  ಸಿಖ್ ಜನಾಂಗವೇ ಹೆಚ್ಚಾಗಿರುವ ಹಳ್ಳಿಯೊಂದನ್ನು ಮುಸ್ಲಿಂ ದಾಳಿಕೊರರು ಸುತ್ತುವರಿಯುತ್ತಾರೆ. ಸಂಖ್ಯೆಯಲ್ಲಿ, ಆಯುಧ ಬಲದಲ್ಲಿ ಅವರದೇ ಮೇಲಿಗೈ. ಹೀಗಾಗಿ ಸೋಲು ಖಂಡಿತ ಹಾಗೆ ಆದ ಪಕ್ಷದಲ್ಲಿ ಹಳ್ಳಿಯ ಹೆಂಗಸರಿಗೆ ಆತ್ಯಾಚಾರ, ಬಲವಂತದ ಮತಾಂತರ ಹೊರತಾಗಿ ಬೇರೆ ಯಾವ ಭವಿಷ್ಯವು ಇಲ್ಲದಂತ ಸ್ಥಿತಿ. ಆದ್ದರಿಂದ ಅವರು ಹಳ್ಳಿಯ ಬಾವಿಗೆ ಹಾರಿ ಸಾಮೂಹಿಕ ಆತ್ಮಹತ್ಯೆಯ ನಿರ್ಧಾರ  ತೆಗೆದುಕೊಳ್ಳುತ್ತಾರೆ. ಒಬ್ಬರ ನಂತರ ಒಬ್ಬರು. ಕೊನೆಗೆ ಉಳಿದವರೆಂದರೆ ಬಾವಿಯಲ್ಲಿ ಹಾರಿ ಅಲ್ಲಿದ್ದ ಹೆಣಗಳಿಂದಾಗಿ ಮುಳುಗಲಾಗದ ಹೆಂಗಸರು ಮಾತ್ರ. . .

 ಘಟನೆ-೩ ಇನ್ನೊಂದು ಸಿಖ್ ಹಳ್ಳಿ ಅಲ್ಲಿಯೂ ಅದೇ ಪರಿಸ್ಥಿತಿ ಅಲ್ಲಿಯ ಗಂಡಸರು ನಿರ್ದರಿಸುತ್ತಾರೆ. ಬಲತ್ಕಾರಕ್ಕೆ ಬಲಿ ಕೊಡುವ ಬದಲು ತಮ್ಮ ಮನೆಯ ಹೆಂಗಸರನ್ನು ತಾವೇ ಕೊಲ್ಲುವುದು ಲೇಸು. ಇದಕ್ಕೆ ಅಲ್ಲಿಯ ಹೆಂಗಸರೂ ಒಪ್ಪಿಕೊಳ್ಳುತ್ತಾರೆ(?) ಮಗಳು ತಂದೆಯ ಎದುರು ಮಂಡಿಯೂರಿ ತನ್ನ ಕೂದಲನ್ನು ಬದಿಗೆ ಸರಿಸಿತ್ತಾಳೆ. ಮೊದಲ ಎಟು ತನ್ನ ಕೆಲಸ ಮುಗಿಸುವುದಿಲ್ಲ ಆಗ ತಂದೆಯ ಪರಿಸ್ಥಿತಿ ... 

ಘಟನೆ-೩   ಒಬ್ಬ ವಿದ್ವಾಂಸ ಬರಹಗಾರ ಹೇಗೋ ಏನೋ ಪಾಕಿಸ್ತಾನಕ್ಕೆ ಹೊರಡುತ್ತಾನೆ. ಉದ್ದಕ್ಕೂ ರೈಲಿನಲ್ಲಿ ಹಿಂಸೆ, ಹೆದರಿಕೆ. ಪಾಕಿಸ್ತಾನ ತಲುಪಿದ ತಕ್ಷಣ ಎನೋ ಸಮಾಧಾನ ಬಿಡುಗಡೆಯ ನಿಟ್ಟುಸಿರು ಅಲ್ಲಿದ್ದವರಿಂದ ಜೈಕಾರ. ಭಾರತದಲ್ಲಿ ನಡೆಯುತ್ತಿರುವ ಹಿಂಸೆಯ ಬಗ್ಗೆ ಕೇಳಿ 'ಬೇಸರ ಮಾಡಿಕೊಳ್ಳಬೇಡಿ ಅವರಿಗೆ ಬಡ್ಡಿ ಸಮೇತ ವಾಪಸು ಕೊಡುತ್ತೆವೆ' ಎಂಬ ಅಶ್ವಾಸನೆ. ಅಲ್ಲಿಂದ ಭಾರತಕ್ಕೆ ಹೋರಾಟ ರೈಲಿನ  ಮೇಲೆ ದಾಳಿ ಅದರಲ್ಲಿದ್ದವರ ಮಾರಣ ಹೋಮ. .ವಿಭಜನೆಯ ಸಂದರ್ಭದಲ್ಲಿ ಅಂತ್ಯಂತ ನಷ್ಟ ಅನುಭವಿಸಿದವಳು ಎರಡು ಜನಾಂಗಕ್ಕೆ ಸೇರಿದ ಮಹಿಳೆ ಮಾತ್ರ ಒಬ್ಬ ಬ್ರಿಟೀಷ್ ಅಧಿಕಾರಿ ಹೇಳಿದಹಾಗೆ ವಿಭಜನೆಯು ಎಲ್ಲಕ್ಕಿಂತ ಹೆಚ್ಚಾಗಿ ಮಹಿಳೆಯರ ದೇಹಗಳ ಮೇಲೆ ನಡೆದ ಯುದ್ಧವಾಗಿತ್ತು (war on woman body)

  ಹೀಗೆ ಸಾಗುತ್ತವೆ ಭಾರತ ವಿಭಜನೆಯ ವಿವರಣೆಗಳು ಎಲ್ಲೆಲ್ಲು ನೋವು, ಸಾವು, ರಕ್ತಪಾತ ಹಾಗೆ ನೋಡುವುದಾದರೆ ಈ ದೇಶದ ಇತಿಹಾಸ ಇಂದಿನ ಯುವ ಜನರೀಗೆ ಮಾಡಿದ ಮಹಾ ದ್ರೋಹವೆಂದರೆ ಅದು ಭಾರತದ ವಿಭಜನೆಯ ಕಾಲದಲ್ಲಿ ನಡೆದ ಭಿಕರ ಹಿಂಸಾಚಾರವನ್ನು ನೆನಪಿಗೆ ತಂದುಕೊಳ್ಳಲಾಗದ ಸ್ಥಿತಿಗೆ ನಮ್ಮನ್ನು ತಳ್ಳಿರುವುದು. ಹಾಗೆ ನೋಡಿದರೆ ಹಿಂಸೆಯ ಪರಾಕಾಷ್ಟೆಯಾದ ಭಾರತ ವಿಭಜನೆಯ ಇತಿಹಾಸವನ್ನು ನಮ್ಮ ಹಿರಿಯರು ನಮ್ಮಿಂದ ದೂರವಿಟ್ಟಿದ್ದಾರೆ? ಒಂದರ್ಥದಲ್ಲಿ ನಮ್ಮ ಇತಿಹಾಸದ ರಾಕ್ಷಸ ಅವತಾರವೊಂದನ್ನು ನಾವು ನಮ್ಮ ಸ್ಮೃತಿಯಿಂದಲೇ ತೆಗೆದುಹಾಕಿದ್ದೇವೆ. ಬಹು ಸಂಸ್ಕೃತಿಯ ಜನಸಮುದಾಯವೊಂದು ತನ್ನ ಚರಿತ್ರೆಯ ಅತ್ಯಂತ ವಿಲಕ್ಷಣವಾದ ಬೃಹತ್ತಾದ ಹಾಗೂ ಆಘಾತಕರವಾದ ಘಟನೆಯೊಂದನ್ನು ತನ್ನ ನೆನಪು ಮತ್ತು ಕಲ್ಪನೆಯಲ್ಲಿ ಸೇರಿಸಿಕೊಳ್ಳದಿದ್ದರೆ, ಅದರ ಹಿಂದು ಮುಂದುಗಳನ್ನು ಅರ್ಥಮಾಡಿಕೊಳ್ಳದಿದ್ದರೆ ಅದೇ ಬಗೆಯ ಹಿಂಸೆ ಮತ್ತೆ ಮರುಕಳಿಸಿದಾಗ ಅದನ್ನು ಎದುರಿಸುವ ಶಕ್ತಿಯನ್ನು ಕಳೆದುಕೊಂಡು ಬಿಡುತ್ತದೆ. ಎಂಬುದು ನಮ್ಮ ಹಿರಿಯರಿಗೆ ಅರ್ಥವಾಗಬೇಕಿತ್ತು! ನಂತರದ ದಿಗಳಲ್ಲಿ  ಭಾರತದಲ್ಲಿ ನಡೆದ ಕೋಮುಗಲಬೆಯ ಪರಿಣಾಮಗಳು, ಹಿಂಸೆ, ನಮಗೆ ಇತಿಹಾಸದ ಅಧ್ಯಾಯನದ ಅಗತ್ಯತೆಯನ್ನು ಎತ್ತಿ ತೋರಿಸಿವೆ. ಶಿವಮೊಗ್ಗದ ಘಟನೆಯಲ್ಲಿ ಸುಟ್ಟು ಹೋದ ಮೌಂಟ್ ಬೆಲ್ ಮಳಿಗೆಯ ಅವಶೇಷಗಳನ್ನು ಮತ್ತು ಆನಂತರ ಎರಡು ಗುಂಪಿನ so called  ನಾಯಕರು ಮತ್ತು ದೊಡ್ಡವರೆನಿಸಿಕೊಂಡವರ ಹೇಳಿಕೆಗಳನ್ನು/ವರ್ತನೆಗಳನ್ನು ಗಮನಿಸಿದಾಗ 'ಈ ದೇಶದಲ್ಲಿನ ಎರಡು ಸಮುದಾಯಗಳ ನಡುವೆ ನಡೆಯುವ ಹಿಂಸೆಗೆ ದುರಂತದ ಘನತೆ ಕೂಡ ಇರುವುದಿಲ್ಲ' ಎಂಬುದು ನನಗೆ ಸ್ಪಷ್ಟವಾಗಿತ್ತು.