ಶಾಂತಾ ಅಳದಂಗಡಿಯವರ *ಗಝಲ್*
ಕವನ
ಹಾಲ್ಗಡಲಲಿ ತೇಲುತಿತ್ತು ಒಲವ ದೋಣಿ
ಮುಳುಗಿತೇಕೆ ನಲ್ಲೆ
ಬೆಳದಿಂಗಳಲಿ ಮೀಯುತಿತ್ತು ತೃಪ್ತ ಮನ
ಮಂಕಾಯಿತೇಕೆ ನಲ್ಲೆ
ಪ್ರೀತಿ ಗೋರಿಯೊಳಗಿಂದ ಪಿಸುಮಾತು
ಕೇಳಿಸುತ್ತಿದೆಯಲ್ಲವೇ
ಪ್ರೇಮಹಕ್ಕಿಯ ಕತ್ತು ಕೋಮಲ ಕರವು
ಹಿಸುಕಿತೇಕೆ ನಲ್ಲೆ
ಎದೆಯ ಗುಡಿಯಲಿರಿಸಿ ಪೂಜಿಸಿದೆನಲ್ಲ
ಹಿತವಿಲ್ಲವಾಯಿತೇ
ಅಪರಾಧವೇನಿತ್ತು ಹೇಳದೇನೇ ಸ್ನೇಹ
ಸವೆಯಿತೇಕೆ ನಲ್ಲೆ
ಮಾಳಿಗೆ ಮನೆ ವಜ್ರ ವೈಢೂರ್ಯವನು
ಬಯಸಿದೆಯೇನು
ಸೌಗಂಧವ ಬೀರುತ್ತಿದ್ದ ಹೃದಯಪುಷ್ಪವು
ಮುದುಡಿತೇಕೆ ನಲ್ಲೆ
ಲೋಕವೇ ಶಾಂತಿಧಾಮದಂತೆ ಸಂತಸ
ನೀಡಿತ್ತಲ್ಲವೇ
ಅನೂಹ್ಯ ವಿಷಘಳಿಗೆಯಲಿ ಬರಸಿಡಿಲು
ಬಡಿಯಿತೇಕೆ ನಲ್ಲೆ
-*ಶಾಂತಾ ಜೆ ಅಳದಂಗಡಿ*
ಚಿತ್ರ್